ADVERTISEMENT

ವಿಜಯ್ ಹಾಡಿಗೆ ಅಶ್ವಿನ್, ಪಾಂಡ್ಯ ಸ್ಟೆಪ್; ಪಂತ್ ವರ್ಕೌಟ್ ವಿಡಿಯೊ ವೈರಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಫೆಬ್ರುವರಿ 2021, 3:56 IST
Last Updated 20 ಫೆಬ್ರುವರಿ 2021, 3:56 IST
ಅಶ್ವಿನ್-ಪಾಂಡ್ಯ-ಕುಲ್‌ದೀಪ್ ಮತ್ತು ಪಂತ್ ವಿಡಿಯೊ ವೈರಲ್ (ಚಿತ್ರ ಕೃಪೆ: ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್)
ಅಶ್ವಿನ್-ಪಾಂಡ್ಯ-ಕುಲ್‌ದೀಪ್ ಮತ್ತು ಪಂತ್ ವಿಡಿಯೊ ವೈರಲ್ (ಚಿತ್ರ ಕೃಪೆ: ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್)   

ಅಹಮದಾಬಾದ್: ಇಂಗ್ಲೆಂಡ್ ವಿರುದ್ಧ ಸಾಗುತ್ತಿರುವ ಟೆಸ್ಟ್ ಸರಣಿಯಲ್ಲಿ ಎರಡನೇ ಪಂದ್ಯದಲ್ಲಿ ಗೆಲುವು ದಾಖಲಿಸಿ ತಿರುಗೇಟು ನೀಡಿರುವ ಟೀಮ್ ಇಂಡಿಯಾ ಆಟಗಾರರೀಗ ಸ್ವಲ್ಪ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ.

ಅಂತಿಮ ಎರಡು ಪಂದ್ಯಗಳು ಅಹಮದಾಬಾದ್‌ನಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಮೊಟೆರಾ ಮೈದಾನದಲ್ಲಿ ನಡೆಯಲಿದೆ. ಈ ನಡುವೆ ಜಿಮ್ ಅಭ್ಯಾಸದ ವೇಳೆಯಲ್ಲಿ ವಿಡಿಯೊ ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಭಾರತೀಯ ಆಟಗಾರರಾದ ರವಿಚಂದ್ರನ್ ಅಶ್ವಿನ್, ಹಾರ್ದಿಕ್ ಪಾಂಡ್ಯ ಹಾಗೂ ಕುಲ್‌ದೀಪ್ ಯಾದವ್ ಅವರು, ತಮಿಳುನಾಡು ನಟ ವಿಜಯ್ ಅಭಿನಯದ ಮಾಸ್ಟರ್ ಚಿತ್ರದ 'ವಾತಿ ಕಮ್ಮಿಂಗ್' ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ADVERTISEMENT

ತಮಿಳುನಾಡು ಮೂಲದವರಾಗಿರುವ ಅಶ್ವಿನ್, ವಿಜಯ್ ಚಿತ್ರದ ಹಾಡಿಗೆ ಹೆಜ್ಜೆ ಹಾಕುವಂತೆ ಸಹ ಆಟಗಾರರನ್ನು ಪ್ರೇರೇಪಿಸಿದ್ದಾರೆ. ಪ್ರತಿ ದಿನ ಬೆಳಗ್ಗೆ ಇದೇ ಹಾಡನ್ನು ಆಲಿಸುವ ಮೂಲಕ ಸ್ಫೂರ್ತಿಯನ್ನು ಪಡೆಯುವುದಾಗಿಯೂ ತಿಳಿಸಿದ್ದಾರೆ.

ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ದ ನಡೆದ ಮೊದಲೆರಡು ಪಂದ್ಯಗಳಲ್ಲಿ ತಲಾ ಐದು ವಿಕೆಟ್ ಸಾಧನೆ ಮಾಡಿರುವ ಅಶ್ವಿನ್, ದ್ವಿತೀಯ ಪಂದ್ಯದಲ್ಲಿ ಶತಕ ಸಾಧನೆಯನ್ನು ಮಾಡಿದ್ದರು.

ಪಂತ್ ವರ್ಕೌಟ್ ವಿಡಿಯೊ ವೈರಲ್..
ಅತ್ತ ಜಿಮ್‌ನಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಸ್ಪೈಡರ್ ಮ್ಯಾನ್ ಶೈಲಿಯಲ್ಲಿ ವರ್ಕೌಟ್ ಮಾಡುವ ವಿಡಿಯೊವನ್ನು ಸಹ ಆಟಗಾರ ವಾಷಿಂಗ್ಟನ್ ಸುಂದರ್ ಬಿಡುಗಡೆ ಮಾಡಿದ್ದಾರೆ.

ಕಳೆದ ತಿಂಗಳು ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಸ್ಪೈಡರ್ ಮ್ಯಾನ್ ಥೀಮ್ ಸಾಂಗ್ ಹಿಂದಿಯಲ್ಲಿ ಹಾಡುವ ಮೂಲಕ ಗಮನ ಸೆಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.