ADVERTISEMENT

ದ.ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು; ತಂಡದ ನಿರ್ಧಾರಕ್ಕೆ ಅಶ್ವಿನ್ ಆಕ್ರೋಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಫೆಬ್ರುವರಿ 2026, 12:36 IST
Last Updated 23 ಫೆಬ್ರುವರಿ 2026, 12:36 IST
<div class="paragraphs"><p>ಆರ್. ಆಶ್ವಿನ್‌&nbsp;</p></div>

ಆರ್. ಆಶ್ವಿನ್‌ 

   

ಚಿತ್ರ ಕೃಪೆ: @IS_Netwrk29

‌ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಸೂಪ‌ರ್–8 ಪಂದ್ಯವನ್ನು ಭಾರತ ತಂಡವು ಹೀನಾಯವಾಗಿ ಸೋತು ನಿರಾಸೆ ಅನುಭವಿಸಿದೆ. ಇದರ ಬೆನ್ನಲ್ಲೇ ಭಾರತದ ಮಾಜಿ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್‌ ತಂಡದ ಬದಲಾವಣೆ ಕುರಿತು ಟೀಕಿಸಿದ್ದಾರೆ.

ಭಾರತವು ಮೊದಲ ಸೂಪರ್–8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಿತು. ಭಾರತದ ಯಾವೊಬ್ಬ ಬ್ಯಾಟರ್‌ ಕೂಡಾ ಕ್ರಿಸ್‌ ಕಚ್ಚಿ ನಿಲ್ಲದ ಕಾರಣ ಪಂದ್ಯವನ್ನು ಸೋಲಬೇಕಾಯಿತು. 

ತಂಡದ ಉಪ ನಾಯಕ ಹಾಗೂ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರನ್ನು ತಂಡದಿಂದ ಹೊರಗಿಟ್ಟು ಅವರ ಬದಲಿಗೆ ವಾಷಿಂಗ್ಟನ್ ಸುಂದರ್‌ ಅವರನ್ನು ಆಡಿಸಲಾಗಿತ್ತು. ಇದೀಗ ಟೀ ಇಂಡಿಯಾದ ಈ ನಿರ್ಧಾರವನ್ನು ಆಶ್ವಿನ್‌ ಟೀಕಿಸಿದ್ದಾರೆ.   

ಈ ಕುರಿತು ಮಾತನಾಡಿರುವ ಅಶ್ವಿನ್‌ ‘ಐಪಿಎಲ್‌ನಲ್ಲಿ ಆಗಾಗ ತಂಡದ ಆಟಗಾರರನ್ನು ಬದಲಿಸುವುದು ಸಹಜ. ಆದರೆ ಐಸಿಸಿ ವಿಶ್ವಕಪ್‌ಗಳಲ್ಲಿ, ಸ್ಥಿರತೆ ಬಹಳ ಮುಖ್ಯ. ಎಡಗೈ ಬ್ಯಾಟರ್‌ಗಳ ವಿರುದ್ಧ ವಾಷಿಂಗ್ಟನ್ ಸುಂದರ್ ಅವರನ್ನು ಬಳಸಬೇಕು ಎಂಬುದು ನಿಜ. ಆದರೆ ಅಕ್ಷರ್‌ ಪಟೇಲ್ ಈ ಹಿಂದಿನ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಭಾರತ ಇದೇ ಪರಿಸ್ಥಿತಿಯಲ್ಲಿದ್ದಾಗ ಕೊಹ್ಲಿ ಜೊತೆ ಉತ್ತಮ ಜತೆಯಾಟವಾಡಿದ್ದರು’ ಎಂದು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.