ADVERTISEMENT

Asia Cup: ಒಮಾನ್ ಗೆಲುವಿಗೆ 161 ರನ್ ಗುರಿ ಒಡ್ಡಿದ ಪಾಕಿಸ್ತಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಸೆಪ್ಟೆಂಬರ್ 2025, 16:21 IST
Last Updated 12 ಸೆಪ್ಟೆಂಬರ್ 2025, 16:21 IST
<div class="paragraphs"><p>ಮೊಹಮ್ಮದ್ ಹ್ಯಾರಿಸ್, ಸಾಹೀಬ್‌ಜಾದಾ ಫರ್ಹಾನ್</p></div>

ಮೊಹಮ್ಮದ್ ಹ್ಯಾರಿಸ್, ಸಾಹೀಬ್‌ಜಾದಾ ಫರ್ಹಾನ್

   

(ಚಿತ್ರ ಕೃಪೆ: X/@ACCMedia1)

ದುಬೈ: 2025ರ ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಇಂದು (ಶುಕ್ರವಾರ) ಒಮಾನ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿರುವ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 160 ರನ್ ಪೇರಿಸಿದೆ.

ADVERTISEMENT

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 'ಎ' ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನದ ತಂಡದ ನಾಯಕ ಸಲ್ಮಾನ್ ಆಘಾ ಮೊದಲು ಭ್ಯಾಟಿಂಗ್ ಆಯ್ದುಕೊಂಡರು.

ಪಾಕಿಸ್ತಾನದ ಆರಂಭ ಉತ್ತಮವಾಗಿರಲಿಲ್ಲ. ಸೈಮ್ ಅಯುಬ್ (0) ಶೂನ್ಯಕ್ಕೆ ಔಟ್ ಆದರು. ಈ ಹಂತದಲ್ಲಿ ಜೊತೆಗೂಡಿದ ಸಾಹೀಬ್‌ಜಾದಾ ಫರ್ಹಾನ್ (29) ಹಾಗೂ ಮೊಹಮ್ಮದ್ ಹ್ಯಾರಿಸ್ ಎರಡನೇ ವಿಕೆಟ್‌ಗೆ 85 ರನ್‌ಗಳ ಜೊತೆಯಾಟ ಕಟ್ಟಿದರು.

ಅತ್ತ ಆಕ್ರಮಣಕಾರಿಯಾಗಿ ಆಡಿದ ಹ್ಯಾರಿಸ್ ಆಕರ್ಷಕ ಅರ್ಧಶತಕಗಳಿಸಿದರು. 43 ಎಸೆತಗಳಲ್ಲಿ (7 ಬೌಂಡರಿ, 3 ಸಿಕ್ಸರ್) 66 ರನ್ ಗಳಿಸಿ ಮಿಂಚಿದರು.

ಈ ನಡುವೆ ನಾಯಕ ಸಲ್ಮಾನ್ ಆಘಾ ಖಾತೆ (0) ತೆರೆಯಲಾಗದೇ ನಿರಾಸೆ ಮೂಡಿಸಿದರು. ಇನ್ನುಳಿದಂತೆ ಫಖಾರ್ ಜಮಾನ್ (23*), ಹಸನ್ ನವಾಜ್ (9), ಮೊಹಮ್ಮದ್ ನವಾಜ್ (19) ಹಾಗೂ ಫಹೀಮ್ ಅಶ್ರಮ್ (8) ರನ್ ಗಳಿಸಿದರು.

ಒಮಾನ್ ಪರ ಆಮೀರ್ ಕಲೀಂ ಮೂರು ಹಾಗೂ ಶಾ ಫೈಸಲ್ ಎರಡು ವಿಕೆಟ್ ಗಳಿಸಿದರು.

ಟೂರ್ನಿಯಲ್ಲಿ ಇತ್ತಂಡಗಳಿಗೂ ಇದು ಮೊದಲ ಪಂದ್ಯವಾಗಿದೆ. ಅಲ್ಲದೆ ಒಮಾನ್ ತಂಡವು ಪಾಕಿಸ್ತಾನಕ್ಕೆ ಪೈಪೋಟಿ ನೀಡುವ ನಿರೀಕ್ಷೆಯಿದೆ.

ಭಾರತ ಹಾಗೂ ಯುಎಇ ತಂಡಗಳು ಇದೇ ಗುಂಪಿನಲ್ಲಿವೆ. ಅಫ್ಗಾನಿಸ್ತಾನ ವಿರುದ್ದ ನಡೆದ ಪಂದ್ಯದಲ್ಲಿ ಭಾರತ ಒಂಬತ್ತು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು.

ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯವು ಭಾನುವಾರ ದುಬೈಯಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.