ADVERTISEMENT

T20 WC: ಕಿವೀಸ್ ಕನಸು ಭಗ್ನ; ಆಸೀಸ್ ಗೆಲುವಿನ ರೋಚಕ ಕ್ಷಣಗಳು

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಎಂಟು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಆಸ್ಟ್ರೇಲಿಯಾ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಐದು ಬಾರಿಯ ಏಕದಿನ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಕಿರೀಟಕ್ಕೆ ಮುತ್ತಿಟ್ಟಿದೆ. ಇದರೊಂದಿಗೆ ನ್ಯೂಜಿಲೆಂಡ್ ವಿಶ್ವಕಪ್ ಕನಸು ಮಗದೊಮ್ಮೆ ಭಗ್ನಗೊಂಡಿದೆ. ಅಲ್ಲದೆ ನಾಯಕ ಕೇನ್ ವಿಲಿಯಮ್ಸನ್ (85) ಹೋರಾಟವು ವ್ಯರ್ಥವೆನಿಸಿದೆ. (ಚಿತ್ರ ಕೃಪೆ: ಎಎಫ್‌ಪಿ, ಪಿಟಿಐ)

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 8:55 IST
Last Updated 15 ನವೆಂಬರ್ 2021, 8:55 IST
ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ
ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ   
ಅಜೇಯ 77 ರನ್ ಗಳಿಸಿದ ಮಿಚೆಲ್ ಮಾರ್ಷ್ ಗೆಲುವಿನ ರೂವಾರಿ
173 ರನ್ ಗುರಿಯನ್ನು 18.5 ಓವರ್‌ಗಳಲ್ಲಿ ಬೆನ್ನತ್ತಿದ ಆಸ್ಟ್ರೇಲಿಯಾ
ಮಿಷೆಲ್ ಮಾರ್ಷ್, ಡೇವಿಡ್ ವಾರ್ನರ್ ಗೆಲುವಿನ ರೂವಾರಿ
ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಡೇವಿಡ್ ವಾರ್ನರ್
ಕೇನ್ ವಿಲಿಯಮ್ಸನ್ ಹೋರಾಟ (85) ವ್ಯರ್ಥ
2015 ಹಾಗೂ 2019 ಏಕದಿನ ವಿಶ್ವಕಪ್ ಫೈನಲ್‌ನಲ್ಲೂ ನ್ಯೂಜಿಲೆಂಡ್ ಸೋಲಿಗೆ ಶರಣಾಗಿತ್ತು.
ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಮಾರ್ಷ್ ಸಂಭ್ರಮ
ಮ್ಯಾಕ್ಸ್‌ವೆಲ್ 28 ರನ್ ಗಳಿಸಿ ಔಟಾಗದೆ ಉಳಿದರು.
ಆಕರ್ಷಕ ಅರ್ಧಶತಕ ಗಳಿಸಿದ ಡೇವಿಡ್ ವಾರ್ನರ್‌ಗೆ (53) ಮಿಚೆಲ್ ಮಾರ್ಷ್ ಅಭಿನಂದನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.