ADVERTISEMENT

ವಿರಾಟ್‌ ಬ್ಯಾಟಿಂಗ್‌ ನನಗೆ ಮಾದರಿ: ಬಾಬರ್‌ ಆಜಂ

ಏಜೆನ್ಸೀಸ್
Published 15 ಜೂನ್ 2019, 15:28 IST
Last Updated 15 ಜೂನ್ 2019, 15:28 IST
ಬಾಬರ್‌ ಆಜಂ (ಸಂಗ್ರಹ ಚಿತ್ರ)
ಬಾಬರ್‌ ಆಜಂ (ಸಂಗ್ರಹ ಚಿತ್ರ)   

ಮ್ಯಾಂಚೆಸ್ಟರ್‌: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರನ್ನು ಮಾದರಿಯಾಗಿಟ್ಟುಕೊಂಡಿದ್ದೇನೆ ಎಂದು ಪಾಕಿಸ್ತಾನ ಪ್ರತಿಭಾವಂತ ಆಟಗಾರ ಬಾಬರ್ ಆಜಂ ಬಹಿರಂಗಪಡಿಸಿದ್ದಾರೆ.

ವಿಶ್ವದ ಅಗ್ರಮಾನ್ಯ ಬ್ಯಾಟ್ಸ್‌ಮನ್‌ ಎನಿಸಿರುವ ಕೊಹ್ಲಿ ಅವರ ಆಟದ ವಿಡಿಯೊಗಳನ್ನು ನೋಡಿ ಬಾಬರ್‌ ತಮ್ಮ ಆಟವನ್ನು ಮೊನಚುಗೊಳಿಸುತ್ತಿದ್ದಾರೆ.ದಾಯಾದಿಗಳ ಬಹುನಿರೀಕ್ಷಿತ ಸಮರಕ್ಕೆ ಎರಡು ದಿನಗಳಷ್ಟೇ ಇವೆ. ಮೈದಾನದ ಹೊರಗೂ ಉಭಯ ರಾಷ್ಟ್ರಗಳ ಮಧ್ಯೆ ಸಂಬಂಧ ಅಷ್ಟೇನೂ ಉತ್ತಮವಾಗಿಲ್ಲ. ಇಂಥ ಸಂದರ್ಭದಲ್ಲೇ ಆಜಂ ಮುಕ್ತವಾಗಿ ಈ ಹೇಳಿಕೆ ನೀಡಿದ್ದಾರೆ.

ಭಾರತ ವಿರುದ್ಧ ಪಂದ್ಯದಲ್ಲಿ ಪಾಕ್‌ ತಂಡ ಬಾಬರ್‌ ಅವರಿಂದ ಉತ್ತಮ ಆಟ ನಿರೀಕ್ಷಿಸುತ್ತಿದೆ. ಇಂಗ್ಲೆಂಡ್‌ ವಿರುದ್ಧದ ವಿಶ್ವಕಪ್‌ನ ತನ್ನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ 8 ವಿಕೆಟ್‌ಗೆ 348 ರನ್‌ ಹೊಡೆದಿತ್ತು. ಬಾಬರ್‌ ಆ ಪಂದ್ಯದಲ್ಲಿ ಸೊಗಸಾದ 63 ರನ್‌ಗಳ ಇನಿಂಗ್ಸ್‌ ಕಟ್ಟಿದ್ದರು. ಪಾಕ್‌ ಆ ಪಂದ್ಯದಲ್ಲಿ ಜಯಗಳಿಸಿತ್ತು.

ADVERTISEMENT

‘ನಾನು ವಿರಾಟ್‌ಅವರ ಬ್ಯಾಟಿಂಗ್, ವಿಭಿನ್ನ ಪರಿಸ್ಥಿತಿಗೆ ಅನುಗುಣವಾಗಿ ಆಡುವುದನ್ನು ನೋಡುತ್ತಿದ್ದೇನೆ. ಅವುಗಳಿಂದ ಕಲಿಯಲು ಯತ್ನಿಸುತ್ತಿದ್ದೇನೆ’ ಎಂದು 24 ವರ್ಷದ ಬಾಬರ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.