ADVERTISEMENT

Video| ಆಡಿದ್ದು ಸಾಕು ಬನ್ನಿ: BBLನಲ್ಲಿ ಪಾಕ್ ಮಾಜಿ ನಾಯಕನಿಗೆ ಭಾರೀ ಮುಖಭಂಗ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜನವರಿ 2026, 7:33 IST
Last Updated 13 ಜನವರಿ 2026, 7:33 IST
<div class="paragraphs"><p>ಬಾಬರ್ ಆಜಂ, ಮೊಹಮ್ಮದ್ ರಿಜ್ವಾನ್</p></div>

ಬಾಬರ್ ಆಜಂ, ಮೊಹಮ್ಮದ್ ರಿಜ್ವಾನ್

   

(ಪಿಟಿಐ ಚಿತ್ರ)

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ, ವಿಕೆಟ್ ಕೀಪರ್, ಬ್ಯಾಟರ್ ಆಗಿರುವ ಮೊಹಮ್ಮದ್ ರಿಜ್ವಾನ್ ಅವರು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್‌ನಲ್ಲಿ ಭಾರೀ ಅಪಮಾನಕ್ಕೆ ಒಳಗಾಗಿದ್ದಾರೆ.

ADVERTISEMENT

ಬಿಗ್ ಬ್ಯಾಷ್‌ ಲೀಗ್‌ನ ಮೆಲ್ಬರ್ನ್ ರೆನೆಗೇಡ್ಸ್ ಮತ್ತು ಸಿಡ್ನಿ ಥಂಡರ್ ತಂಡಗಳ ನಡುವೆ ನಡೆಯುತ್ತಿದ್ದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ರಿಜ್ವಾನ್​ ಅವರನ್ನು ರಿಟೈರ್ಡ್ ಔಟ್ ಮಾಡಲಾಗಿದೆ. ಆ ಮೂಲಕ ಬಿಬಿಎಲ್ ಇತಿಹಾಸದಲ್ಲಿ ಈ ರೀತಿಯ ಮೈದಾನದಿಂದ ಹೊರಬಂದ ಮೊದಲ ವಿದೇಶಿ ಆಟಗಾರ ಎಂಬ ಮುಜುಗರಕ್ಕೆ ರಿಜ್ವಾನ್ ಒಳಗಾಗಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರೆನೆಗೇಡ್ಸ್​ ತಂಡದ ಪರವಾಗಿ 10ನೇ ಓವರ್​​ನಲ್ಲಿ ಬ್ಯಾಟಿಂಗ್ ಇಳಿದ ರಿಜ್ವಾನ್ ಅವರು, 18ನೇ ಓವರ್‌ ವರೆಗೆ ಬ್ಯಾಟಿಂಗ್ ಮಾಡಿದರು. ಈ ವೇಳೆ ಅವರು, 23 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 26 ರನ್ ಗಳಿಸಿದ್ದರು.

ತಂಡದ ಮೊತ್ತ ಹೆಚ್ಚಿಸಬೇಕಾದ ಸಂದರ್ಭದಲ್ಲಿ ರಿಜ್ವಾನ್ ರನ್ ಗಳಿಸಲು ಪರದಾಡುತ್ತಿದ್ದರು. ಅವರ ನಿಧಾನಗತಿಯ ಬ್ಯಾಟಿಂಗ್‌ನಿಂದ ಬೇಸತ್ತ ತಂಡದ ಮ್ಯಾನೇಜ್‌ಮೆಂಟ್ ರಿಜ್ವಾನ್ ಬದಲು ವಿಲ್ ಸದರ್‌ಲ್ಯಾಂಡ್ ಅವರನ್ನು ಬ್ಯಾಟಿಂಗ್ ಕಳಿಸಲು ಮುಂದಾಯಿತು. ಇದು ಬಿಬಿಎಲ್‌ನಲ್ಲಿ ವಿದೇಶಿ ಆಟಗಾರನಿಗೆ ಸಂಭವಿಸಿದ ಮೊದಲ ಘಟನೆಯಾಗಿದೆ.

ಅನೇಕ ಬಾರಿ ಕೈಸನ್ನೆ ಮಾಡಿದ ಸದರ್‌ಲ್ಯಾಂಡ್

ರಿಜ್ವಾನ್ ಅವರನ್ನು ರಿಟೈರ್ಡ್ ಔಟ್ ತೆಗೆದುಕೊಳ್ಳುವಂತೆ ಸದರ್‌ಲ್ಯಾಂಡ್ ಅವರು ಹಲವು ಬಾರಿ ಕೈಸನ್ನೆ ಮಾಡಿ ಕರೆದಿದ್ದಾರೆ. ಆರಂಭದಲ್ಲಿ ಏನು ಹೇಳುತ್ತಿದ್ದಾರೆ ಎಂಬುದು ರಿಜ್ವಾನ್‌ ಅವರಿಗೆ ಅರ್ಥವಾಗಿಲ್ಲ. ಆದರೆ, ಅವರು ಬೌಂಡರಿ ಲೈನ್ ಬಳಿ ನಿಂತು ಹೇಳಿದಾಗ, ರಿಟೈರ್ಡ್ ಔಟ್ ತೆಗೆದುಕೊಳ್ಳಲು ಸೂಚಿಸಿರುವುದು ಅರ್ಥವಾಗಿ, ಮೈದಾನದಿಂದ ಹೊರಬಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.