ADVERTISEMENT

BCCI Naman Awards: ಸಚಿನ್‌ ಸೇರಿ ಪ್ರಶಸ್ತಿ ಪಡೆದ ಕ್ರಿಕೆಟಿಗರ ಪಟ್ಟಿ ಇಲ್ಲಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಫೆಬ್ರುವರಿ 2025, 5:08 IST
Last Updated 2 ಫೆಬ್ರುವರಿ 2025, 5:08 IST
<div class="paragraphs"><p>ಸಚಿನ್ ತೆಂಡೂಲ್ಕರ್ ಅವರಿಗೆ ಜೀವಮಾನ ಸಾಧನೆಗಾಗಿ ಕರ್ನಲ್ ಸಿ.ಕೆ. ನಾಯ್ಡು ಪ್ರಶಸ್ತಿಯನ್ನು ಐಸಿಸಿ ಅಧ್ಯಕ್ಷ ಜಯ್‌ ಶಾ ಪ್ರದಾನ ಮಾಡಿದರು.</p></div>

ಸಚಿನ್ ತೆಂಡೂಲ್ಕರ್ ಅವರಿಗೆ ಜೀವಮಾನ ಸಾಧನೆಗಾಗಿ ಕರ್ನಲ್ ಸಿ.ಕೆ. ನಾಯ್ಡು ಪ್ರಶಸ್ತಿಯನ್ನು ಐಸಿಸಿ ಅಧ್ಯಕ್ಷ ಜಯ್‌ ಶಾ ಪ್ರದಾನ ಮಾಡಿದರು.

   

(ಪಿಟಿಐ ಚಿತ್ರ)

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ವಾರ್ಷಿಕ ನಮನ್ ಪ್ರಶಸ್ತಿಗಳನ್ನು ಪ್ರದಾನ ಮಾಡಿದೆ.

ADVERTISEMENT

ಮುಂಬೈನಲ್ಲಿ ಶನಿವಾರ ನಡೆದ ಬಿಸಿಸಿಐ ವಾರ್ಷಿಕ ಕಾರ್ಯಕ್ರಮದಲ್ಲಿ ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೆ ಜೀವಮಾನ ಸಾಧನೆಗಾಗಿ ಕರ್ನಲ್ ಸಿ.ಕೆ. ನಾಯ್ಡು ಪ್ರಶಸ್ತಿಯನ್ನು ಐಸಿಸಿ ಅಧ್ಯಕ್ಷ ಜಯ್‌ ಶಾ ಪ್ರದಾನ ಮಾಡಿದರು. ಇದೇ ವೇಳೆ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಮತ್ತು ಮಹಿಳಾ ತಂಡದ ಬ್ಯಾಟರ್ ಸ್ಮೃತಿ ಮಂದಾನ ಅವರಿಗೆ ಶ್ರೇಷ್ಠ ಆಟಗಾರ ಮತ್ತು ಆಟಗಾರ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

31 ವರ್ಷ ವಯಸ್ಸಿನ ಬೂಮ್ರಾ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ (ಐಸಿಸಿ) ಸರ್ ಗ್ಯಾರ್‌ಫೀಲ್ಡ್ ಸೋಬರ್ಸ್ ವರ್ಷದ ಕ್ರಿಕೆಟಿಗ ಪ್ರಶಸ್ತಿಗೂ ಆಯ್ಕೆಯಾಗಿದ್ದಾರೆ. ಅವರಿಗೆ ಬಿಸಿಸಿಐ ಪಾಲಿ ಉಮ್ರಿಗರ್ ಪ್ರಶಸ್ತಿ ನೀಡಲಾಯಿತು.

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಈಚೆಗೆ ನಿವೃತ್ತಿ ಘೋಷಿಸಿದ ಸ್ಪಿನ್‌ ತಾರೆ ಆರ್.ಅಶ್ವಿನ್‌ ಅವರನ್ನು ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸರ್ಫರಾಜ್ ಖಾನ್ ಮತ್ತು ಆಶಾ ಶೋಭನಾ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಉತ್ತಮ ಅಂತರ ರಾಷ್ಟ್ರೀಯ ಪದಾರ್ಪಣೆ ಪ್ರಶಸ್ತಿಗಳನ್ನು ಪಡೆದಿದ್ದಾರೆ.

2025ರ ನಮನ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಹೀಗಿದೆ..

2025ರ ನಮನ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಹೀಗಿದೆ..
ಕರ್ನಲ್ ಸಿ.ಕೆ. ನಾಯ್ಡು ಪ್ರಶಸ್ತಿ–ಸಚಿನ್ ತೆಂಡೂಲ್ಕರ್
ಶ್ರೇಷ್ಠ ಅಂತರರಾಷ್ಟ್ರೀಯ ಆಟಗಾರ –ಜಸ್‌ಪ್ರೀತ್ ಬೂಮ್ರಾ
ಶ್ರೇಷ್ಠ ಅಂತರರಾಷ್ಟ್ರೀಯ ಆಟಗಾರ್ತಿ –ಸ್ಮೃತಿ ಮಂದಾನ
ಅಂತರರಾಷ್ಟ್ರೀಯ ಪದಾರ್ಪಣೆ (ಮಹಿಳೆ) – ಆಶಾ ಸೊಭನಾ
ಅಂತರರಾಷ್ಟ್ರೀಯ ಪದಾರ್ಪಣೆ (ಪುರುಷ) – ಸರ್ಫರಾಝ್ ಖಾನ್
ಬಿಸಿಸಿಐ ವಿಶೇಷ ಪ್ರಶಸ್ತಿ– ಆರ್.ಅಶ್ವಿನ್‌
ಅತ್ಯುತ್ತಮ ಅಂತರಾಷ್ಟ್ರೀಯ ಕ್ರಿಕೆಟಿಗ (ಪಾಲಿ ಉಮ್ರಿಗರ್ ಪ್ರಶಸ್ತಿ) – ಜಸ್‌ಪ್ರೀತ್ ಬೂಮ್ರಾ
ಮಹಿಳಾ ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಧಿಕ ವಿಕೆಟ್‌ ಪಡೆದವರು (ಮಹಿಳೆ) – ದೀಪ್ತಿ ಶರ್ಮಾ
ಮಹಿಳಾ ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಧಿಕ ರನ್ ಗಳಿಸಿದವರು (ಮಹಿಳೆ): ಸ್ಮೃತಿ ಮಂಧಾನ
ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಅಂಪೈರ್: ಅಕ್ಷಯ್ ಟೋಟ್ರೆ
ಎಂಎ ಚಿದಂಬರಂ ಟ್ರೋಫಿ - U-19 ಕೂಚ್ ಬೆಹಾರ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ: ಕಾವ್ಯಾ ಟಿಯೋಟಿಯಾ
ಎಂಎ ಚಿದಂಬರಂ ಟ್ರೋಫಿ - U-19 ಕೂಚ್ ಬೆಹಾರ್ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ: ವಿಷ್ಣು ಭಾರದ್ವಾಜ್
ಜಗಮೋಹನ್ ದಾಲ್ಮಿಯಾ ಟ್ರೋಫಿ - ಅತ್ಯುತ್ತಮ ಮಹಿಳಾ ದೇಶೀಯ ಆಟಗಾರ್ತಿ: ಪ್ರಿಯಾ ಮಿಶ್ರಾ
ಜಗಮೋಹನ್ ದಾಲ್ಮಿಯಾ ಟ್ರೋಫಿ - ಅತ್ಯುತ್ತಮ ಮಹಿಳಾ ದೇಶೀಯ ಆಟಗಾರ್ತಿ (ಜೂನಿಯರ್): ಈಶ್ವರಿ ಅವಾಸರೆ
U-16 ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ: ಹೇಮಚೂಡೇಶನ್ ಜೆಗನಾಥನ್
U-16 ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ: ಲಕ್ಷ ರಾಯಚಂದನಿ‌‌‌‌
ಮಾಧವರಾವ್ ಸಿಂಧಿಯಾ ಪ್ರಶಸ್ತಿ - ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ (ಪ್ಲೇಟ್ ಗ್ರೂಪ್): ತನಯ್ ತ್ಯಾಗರಾಜನ್
ಮಾಧವರಾವ್ ಸಿಂಧಿಯಾ ಪ್ರಶಸ್ತಿ– ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ(ಎಲೈಟ್ ಗ್ರೂಪ್) ರಿಕಿ ಭುಯಿ
ಮಾಧವರಾವ್ ಸಿಂಧಿಯಾ ಪ್ರಶಸ್ತಿ - ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ (ಪ್ಲೇಟ್ ಗ್ರೂಪ್): ಅಗ್ನಿ ಚೋಪ್ರಾ
ಮಾಧವರಾವ್ ಸಿಂಧಿಯಾ ಪ್ರಶಸ್ತಿ - ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ (ಎಲೈಟ್ ಗ್ರೂಪ್): ಆರ್. ಸಾಯಿ ಕಿಶೋರ್
ರಣಜಿ ಟ್ರೋಫಿಯಲ್ಲಿ ಅತ್ಯುತ್ತಮ ಆಲ್‌ರೌಂಡರ್‌ (ಲಾಲಾ ಅಮರನಾಥ್ ಪ್ರಶಸ್ತಿ): ತನುಷ್ ಕೋಟ್ಯಾನ್
ಬಿಸಿಸಿಐ ದೇಶೀಯ ಪಂದ್ಯಾವಳಿಗಳಲ್ಲಿ ಅತ್ಯುತ್ತಮ ಪ್ರದರ್ಶನ: ಮುಂಬೈ ಕ್ರಿಕೆಟ್ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.