
ಕ್ರಿಕೆಟ್
(ಸಾಂಕೇತಿಕ ಚಿತ್ರ)
ಮೈಸೂರು: ಕರ್ನಾಟಕದ ವೈಭವ್ ಶರ್ಮಾ (64ಕ್ಕೆ 5) ಅವರ ಬೌಲಿಂಗ್ ದಾಳಿಗೆ ಸಿಲುಕಿದ ಮಹಾರಾಷ್ಟ್ರ ತಂಡ, ಮಂಗಳವಾರ ಇಲ್ಲಿ ಆರಂಭವಾದ ಕೂಚ್ ಬಿಹಾರ್ ಟ್ರೋಫಿ 19 ವರ್ಷದ ಒಳಗಿನವರ ಕ್ರಿಕೆಟ್ ಟೂರ್ನಿಯ ಲೀಗ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿತು.
ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ ದಲ್ಲಿ ಪಂದ್ಯದ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮಹಾರಾಷ್ಟ್ರಕ್ಕೆ ಆತಿಥೇಯ ತಂಡದ ವೈಭವ್ ಆಘಾತ ನೀಡಿದರು. ಜಶನ್ ಸಿಂಗ್ ಹಾಗೂ ಸುಶ್ರುತ್ ಸಾವಂತ್ ಅವರನ್ನು ಬೇಗನೆ ಔಟ್ ಮಾಡಿದರು. ಭರವಸೆ ಮೂಡಿಸಿದ್ದ ನಾಯಕ ಸಾಹಿಲ್ ಪಾರಖ್ (30) ಹಾಗೂ ಸಂಕಿತ್ ಸುರಾನ (31) ಅವರೂ ವೈಭವ್‌ಗೆ ವಿಕೆಟ್ ಒಪ್ಪಿಸಿದರು.
ಸಂಕಷ್ಟದಲ್ಲಿದ್ದ ತಂಡಕ್ಕೆ ಆರ್ಕಮ್ ಸಯ್ಯದ್ (68), ಅನೀಶ್ ಜೋಶಿ (ಔಟಾಗದೇ 41) ಆಸರೆಯಾದರು. ಇಬ್ಬರೂ 8ನೇ ವಿಕೆಟ್‌ಗೆ 93 ರನ್ ಸೇರಿಸಿದರು. ಸಯ್ಯದ್ ಅವರನ್ನು ಔಟ್ ಮಾಡಿದ ವೈಭವ್ 5 ವಿಕೆಟ್ ಗೊಂಚಲು ಪಡೆದರು. ಅನೀಶ್ ಜೋಶಿ ಮತ್ತು ಹರ್ಷಿಲ್ ಸಾವಂತ್ ಕ್ರೀಸ್‌ನಲ್ಲಿದ್ದಾರೆ.
ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್: ಮಹಾರಾಷ್ಟ್ರ: 85 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 258 ರನ್ (ಆರ್ಕಮ್ ಸಯ್ಯದ್ 68, ಸಾಯಿ ಪರದೇಶಿ 48. ವೈಭವ್ ಶರ್ಮಾ 64ಕ್ಕೆ 5, ಅಕ್ಷತ್ ಪ್ರಭಾಕರ್ 33ಕ್ಕೆ 2).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.