ADVERTISEMENT

ಕೋವಿಡ್–19 | ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿದೆ ಪಾಕಿಸ್ತಾನ ಸೂಪರ್ ಲೀಗ್ ಪಂದ್ಯಗಳು

ಏಜೆನ್ಸೀಸ್
Published 13 ಮಾರ್ಚ್ 2020, 11:36 IST
Last Updated 13 ಮಾರ್ಚ್ 2020, 11:36 IST
ಪಿಎಸ್‌ಎಲ್‌ನಲ್ಲಿ ಆಡುವ ಕ್ವೆಟ್ಟಾ ಗ್ಲಾಡಿಯೇಟರ್ಸ್‌ ತಂಡದ ಆಟಗಾರರು
ಪಿಎಸ್‌ಎಲ್‌ನಲ್ಲಿ ಆಡುವ ಕ್ವೆಟ್ಟಾ ಗ್ಲಾಡಿಯೇಟರ್ಸ್‌ ತಂಡದ ಆಟಗಾರರು   

ಕರಾಚಿ:ಇಲ್ಲಿನ ರಾಷ್ಟ್ರೀಯ ಕ್ರೀಡಾಂಗಣದಲ್ಲಿನಡೆಯಬೇಕಿರುವ ಪಾಕಿಸ್ತಾನ ಸೂಪರ್ ಲೀಗ್‌ ಟಿ–20ಟೂರ್ನಿಯ (ಪಿಎಸ್‌ಎಲ್‌) ಉಳಿದ ಪಂದ್ಯಗಳನ್ನು ಪ್ರೇಕ್ಷಕರುಕ್ರೀಡಾಂಗಣದಲ್ಲಿ ವೀಕ್ಷಿಸುವುದಕ್ಕೆಪಾಕಿಸ್ತಾನ ಕ್ರಿಕೆಟ್‌ ಮಂಡಳಿಯು (ಪಿಸಿಬಿ) ಅವಕಾಶ ನಿರಾಕರಿಸಿದೆ.ಜಗತ್ತಿನಾದ್ಯಂತ ಆತಂಕ ಉಂಟುಮಾಡಿರುವ ಕೋವಿಡ್–19 ವೈರಸ್‌ ಭೀತಿಯಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸಿಂಧ್‌ ಪ್ರಾಂತ್ಯ ಹಾಗೂ ಕರಾಚಿಯಲ್ಲಿ ಹೆಚ್ಚಿನ ಕೋವಿಡ್‌–19 ಪ್ರಕರಣಗಳು ವರದಿಯಾಗಿದ್ದು, ಪಾಕಿಸ್ತಾನದಲ್ಲಿ ಸೋಂಕಿತರ ಸಂಖ್ಯೆ ಇದೀಗ 24ಕ್ಕೆ ಏರಿಕೆ ಕಂಡಿದೆ.

ಈ ಸಂಬಂಧ ಮಾಹಿತಿ ನೀಡಿರುವ ಪಿಸಿಬಿ ಸಿಇಒ ವಾಸೀಂ ಖಾನ್‌, ‘ಆರೋಗ್ಯ ಮತ್ತು ಸುರಕ್ಷತೆಯನ್ನುಪರಿಗಣಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕರಾಚಿಯಲ್ಲಿ ನಡೆಯುವ ಪಂದ್ಯಗಳನ್ನು ಪ್ರೇಕ್ಷಕರಿಲ್ಲದೆ ನಡೆಸಲು ತೀರ್ಮಾನಿಸಲಾಗಿದೆ’ ಎಂದು ತಿಳಿಸಿದ್ದಾರೆ. ಈಗಾಗಲೇ ಟಿಕೆಟ್‌ ಖರೀದಿಸಿರುವವರಿಗೆ ಹಣ ವಾಪಸ್‌ ಮಾಡಲಾಗುವುದು ಎಂದೂ ಹೇಳಿದ್ದಾರೆ.

ADVERTISEMENT

ಸಿಂಧ್‌ ಪ್ರಾಂತ್ಯದ ಅಧಿಕಾರಿಗಳ ಸಲಹೆ ಮೇರೆಗೆ ಈ ತೀರ್ಮಾನ ಕೈಗೊಂಡಿರುವ ಪಿಸಿಬಿ, ಈ ಸಂಬಂಧ ಆಟಗಾರರಿಗೂ ಕೆಲವು ಸೂಚನೆಗಳನ್ನು ನೀಡಿದೆ. ಪರಸ್ಪರಹಸ್ತಲಾಘವ ನೀಡುವುದು, ಅಭಿಮಾನಿಗಳಿಗೆ ಹಸ್ತಾಕ್ಷರ ನೀಡುವುದು ಹಾಗೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳದಂತೆ ತಿಳಿಸಿದೆ. ಮಾತ್ರವಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳದಂತೆಯೂ ಸೂಚಿಸಿದೆ.

ಆಟಗಾರರು, ಪ್ರೇಕ್ಷಕರು, ಸಿಬ್ಬಂದಿ ಹಾಗೂ ಮಾಧ್ಯಮದವರ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದು ಟೂರ್ನಿಯ ಪ್ರಾಯೋಜಿಕರು, ಮಾಧ್ಯಮದವರಿಗೆ ಅನ್ವಯವಾಗದು. ಆಟಗಾರರ ಕುಟುಂಬದವರು ಹಾಗೂ ಸಿಬ್ಬಂದಿ ಕ್ರೀಡಾಂಗಣಕ್ಕೆ ಆಗಮಿಸಬಹುದು ಎಂದಿದೆ.

ಎಂಟು ಪಂದ್ಯಗಳಷ್ಟೇ ಬಾಕಿ
ಲೀಗ್ ಹಂತದ ನಾಲ್ಕು ಪಂದ್ಯಗಳು, ಎರಡು ಎಲಿಮಿನೇಟರ್‌,ಒಂದು ಫೈನಲ್‌ ಕ್ವಾಲಿಫೈಯರ್‌ ಹಾಗೂ ಫೈನಲ್‌ ಸೇರಿ ಒಟ್ಟು 8 ಪಂದ್ಯಗಳಷ್ಟೇ ಬಾಕಿ ಇವೆ.

ಲೀಗ್‌ನ ಮೂರು ಮತ್ತುಫೈನಲ್‌ ಕ್ವಾಲಿಫೈಯರ್‌ ಪಂದ್ಯಗಳು ಕರಾಚಿಯಲ್ಲಿ ನಡೆಯಲಿದ್ದು, ಅವುಗಳಿಗೆ ಪ್ರೇಕ್ಷಕರಿಗೆ ಅನುಮತಿ ನಿರಾಕರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.