ADVERTISEMENT

IPL-2022 | ಪಂದ್ಯದ ವೇಳೆ ಲಿಪ್ ಕಿಸ್ ಮಾಡಿದ ಜೋಡಿ; ಫೋಟೊ ವೈರಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಏಪ್ರಿಲ್ 2022, 14:42 IST
Last Updated 4 ಏಪ್ರಿಲ್ 2022, 14:42 IST
ಟ್ವಿಟರ್ ಚಿತ್ರ
ಟ್ವಿಟರ್ ಚಿತ್ರ   

ಐಪಿಎಲ್‌–2022 ಟೂರ್ನಿಯ 10ನೇ ಪಂದ್ಯದಲ್ಲಿ ಹೊಸ ತಂಡ ಗುಜರಾತ್ ಟೈಟನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಸೆಣಸಾಟ ನಡೆಸುತ್ತಿದ್ದವು. ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿದ್ದ ಯುವ ಜೋಡಿ, ತುಟಿಗೆ ತುಟಿ ಬೆಸೆಯುವುದರಲ್ಲಿ ತಲ್ಲೀನವಾಗಿತ್ತು. ಪಂದ್ಯ ಆರಂಭವಾದ ಕೆಲವೇ ಹೊತ್ತಿನಲ್ಲಿ ಈ ದೃಶ್ಯ ಟಿವಿ ಪರದೆಯಲ್ಲಿ ಕಾಣಿಸಿಕೊಂಡಿದ್ದು, ವೈರಲ್‌ ಆಗಿದೆ.

ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಗುಜರಾತ್‌ ಪಡೆ ಇನಿಂಗ್ಸ್‌ ಆರಂಭಿಸಿತು. ಐದನೇ ಓವರ್‌ ನಡೆಯುತ್ತಿದ್ದಾಗ, ಯುವ ಜೋಡಿಯೊಂದು ಲಿಪ್‌ಕಿಸ್ ಮಾಡುತ್ತಿದ್ದ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಈ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ಭಾರಿ ಚರ್ಚೆ ನಡೆಯುತ್ತಿದೆ.

ಧನಂಜಯ್ ಝಾ ಎನ್ನುವವರು, 'ಈ ಜೋಡಿ ಐಪಿಎಲ್‌ ಪಂದ್ಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದೆ' ಎಂದು ಬರೆದುಕೊಂಡು ಚಿತ್ರ ಹಂಚಿಕೊಂಡಿದ್ದಾರೆ.

'ನನ್ನ ದೇಶ ಬದಲಾಗುತ್ತಿದೆ, ಹಾಗೇ ಮುಂದುವರಿಯುತ್ತಿದೆ' ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

'ಬ್ರೇಕಿಂಗ್: ಐಪಿಎಲ್‌ನಲ್ಲಿ ಕಿಸ್‌ ಕ್ಯಾಮ್‌ ಪರಿಚಯಿಸಲಾಗಿದೆ' ಎಂದು ಶುಭಂ ಅಗರವಾಲ್ ಬರೆದುಕೊಂಡಿದ್ದಾರೆ.

ಪ್ರಯಾಗ್ ಎನ್ನುವವರು ಹಂಚಿಕೊಂಡಿರುವ ಚಿತ್ರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಆಶಿಶ್ ಎಂಬವರು, 'ಪ್ರಪಂಚದ ಬಹುಭಾಗಗಳಲ್ಲಿ ಇದು ನಡೆಯುತ್ತದೆ. ಆ ಕುರಿತು ಯಾರೊಬ್ಬರೂ ಅಸಮಾಧಾನ ವ್ಯಕ್ತಪಡಿಸುವುದಿಲ್ಲ. ಈ ಘಟನೆ ಬಗ್ಗೆ ಮಾತ್ರ ಗದ್ದಲವೇಕೆ? ಇದೊಂದು ಅರ್ಥಹೀನವಾದ ಪೋಸ್ಟ್‌' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಯಾಗ್ ಅವರ ಪೋಸ್ಟ್‌ಗೇ ಪ್ರತಿಕ್ರಿಯಿಸಿರುವ ಚಿರಾಗ್‌ ಬರ್ಜತ್ಯ ಎನ್ನುವವರು, 'ಜೋಕ್‌ಗಳನ್ನು ಪಕ್ಕಕ್ಕಿಟ್ಟು, ಐಪಿಎಲ್‌ನಲ್ಲಿ ಕಿಸ್‌ ಕ್ಯಾಮ್‌ಗಳನ್ನು ಬಳಸಬೇಕು. ಇದು ತುಂಬಾ ವಿನೋದವಾಗಿರುತ್ತದೆ. ಹಾಗೆಯೇ ಇದು ಸಾರ್ವಜನಿಕ ಪ್ರೇಮದ ಅಭಿವ್ಯಕ್ತಿಯನ್ನುನಮ್ಮ ಜನರು ಮತ್ತಷ್ಟು ಒಪ್ಪಿಕೊಳ್ಳುವಂತೆ ಮಾಡುತ್ತದೆ' ಎಂದಿದ್ದಾರೆ.

ಮತ್ತಷ್ಟು ಪ್ರತಿಕ್ರಿಯೆಗಳು ಇಲ್ಲಿವೆ.

ಗುಜರಾತ್‌ ತಂಡ ಈ ಪಂದ್ಯವನ್ನು 14 ರನ್‌ ಅಂತರದಿಂದ ಜಯಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.