ADVERTISEMENT

ಕ್ರಿಕೆಟ್ ತಾರೆ ರಾಜೇಶ್ವರಿ ಗಾಯಕವಾಡಗೆ ಗೌರವ ಡಾಕ್ಟರೇಟ್ ಪ್ರದಾನ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 10:39 IST
Last Updated 15 ನವೆಂಬರ್ 2022, 10:39 IST
ರಾಜಸ್ಥಾನ ರಾಜ್ಯದ ಉದಯಪುರದ ಎಸ್.ಪಿ.ಎಸ್.ಯು ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ವಿಜಯಪುರದ ಮಹಿಳಾ ಕ್ರಿಕೆಟ್‌ ಆಟಗಾರ್ತಿ ರಾಜೇಶ್ವರಿ ಗಾಯಕವಾಡಗೆ ಅವರಿಗೆ  ಎಸ್.ಪಿ.ಎಸ್.ಯು ಅಧ್ಯಕ್ಷರಾದ ಡಾ.ಪದ್ಮಕಲಿ ಬ್ಯಾನರ್ಜಿ ಹಾಗೂ ಡಾ.ನಿಧಿಪತಿ ಸಿಂಗಾನಿಯಾ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು

ವಿಜಯಪುರ: ಮಹಿಳಾ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ವಿಜಯಪುರದ ಹೆಮ್ಮೆಯ ಕ್ರೀಡಾಪಟು ರಾಜೇಶ್ವರಿ ಗಾಯಕವಾಡ ಅವರಿಗೆ ರಾಜಸ್ಥಾನ ರಾಜ್ಯದ ಉದಯಪುರದ ಎಸ್.ಪಿ.ಎಸ್.ಯು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಉದಯಪುರ ಎಸ್.ಪಿ.ಎಸ್.ಯು ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಘಟಿಕೋತ್ಸವದಲ್ಲಿ ರಾಜೇಶ್ವರಿ ಗಾಯಕವಾಡ ಅವರಿಗೆ ಎಸ್.ಪಿ.ಎಸ್.ಯು ಅಧ್ಯಕ್ಷರಾದ ಡಾ.ಪದ್ಮಕಲಿ ಬ್ಯಾನರ್ಜಿ ಹಾಗೂ ಡಾ.ನಿಧಿಪತಿ ಸಿಂಗಾನಿಯಾ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

ಇದೇ ಮೊದಲ ಬಾರಿಗೆ ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿಯೊಬ್ಬರಿಗೆ ಈ ಗೌರವ ಡಾಕ್ಟರೇಟ್ ದೊರೆತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.