ಐಪಿಎಲ್ ಫೈನಲ್ ಪಂದ್ಯ ನೋಡಲು ಕೊಪ್ಪಳದ ತಾಲ್ಲೂಕು ಕ್ರೀಡಾಂಗಣದಲ್ಲಿ ಸೇರಿದ್ದ ಜನ
ಕೊಪ್ಪಳ: ಐಪಿಎಲ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದ ಆರ್.ಸಿ.ಬಿ. ತಂಡದ ಸಾಧನೆ ಇಲ್ಲಿನ ಕ್ರಿಕೆಟ್ ಪ್ರೇಮಿಗಳ ಸಂಭ್ರಮ ಇಮ್ಮಡಿಕೊಳ್ಳುವಂತೆ ಮಾಡಿತು.
ಬೆಂಗಳೂರಿನ ತಂಡ ಚಾಂಪಿಯನ್ ಆಗಬೇಕು ಎಂದು ಕೋಟ್ಯಂತರ ಜನ ಕಾಯುತ್ತಿದ್ದರು. ಅದರಲ್ಲಿಯೂ ವಿರಾಟ್ ಕೊಹ್ಲಿಗೆ ಗೆಲುವಿನ ಉಡುಗೊರೆ ಸಿಗಬೇಕು ಎಂದು ಹಾತೊರೆಯುತ್ತಿದ್ದರು. 17 ವರ್ಷಗಳ ಕಾಯುವಿಕೆ ಬಳಿಕ ಬೆಂಗಳೂರಿನ ಮುಡಿಗೇರಿದ ಪ್ರಶಸ್ತಿ ಯುವಜನತೆಯನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.
ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ದೊಡ್ಡ ಪರದೆಯ ಮೇಲೆ ಕ್ರಿಕೆಟ್ ಪಂದ್ಯ ನೋಡಲು ವ್ಯವಸ್ಥೆ ಮಾಡಲಾಗಿತ್ತು.
ಯುವಕರು ಬಟ್ಟೆ ಬಿಚ್ಚಿ ಕುಣಿದರೆ, ಬಾನಂಗಳದಲ್ಲಿ ಪಟಾಕಿಗಳು ಬಣ್ಣಗಳ ಚಿತ್ತಾರ ಹರಡಿಸಿದವು. ಜನರನ್ನು ನಿಯಂತ್ರಿಸಲು ಪೊಲೀಸರು ಪರದಾಡಬೇಕಾಯಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.