ADVERTISEMENT

ಧೋನಿ ಹೋಗಿದ್ದು ಕ್ರಿಕೆಟ್ ಆಡುವುದಕ್ಕೆ, ಮಹಾಭಾರತಕ್ಕೆ ಅಲ್ಲ: ಪಾಕ್ ಸಚಿವ ಟ್ವೀಟ್

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 7:00 IST
Last Updated 7 ಜೂನ್ 2019, 7:00 IST
   

ನವದೆಹಲಿ: ವಿಶ್ವಕಪ್‌ನಲ್ಲಿಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ತಾವು ಧರಿಸಿದ್ದ ಕೈಗವಸುಗಳ ಮೇಲೆ ಮಹೇಂದ್ರ ಸಿಂಗ್ ಧೋನಿ ಅವರು ಸೇನೆಯ ‘ಕಠಾರಿ ಮುದ್ರೆ’ಯನ್ನು ಹಾಕಿಸಿಕೊಂಡು ಗಮನ ಸೆಳೆದಿದ್ದರು. ಹಸಿರು ಬಣ್ಣದ ಕೈಗವಸಿನ ಮೇಲೆ ಹಾಕಿಸಿರುವ ಮುದ್ರೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದಿತ್ತು.

ಆದರೆ ಧೋನಿ ತಮ್ಮ ಕೈಗವಸುಗಳ ಮೇಲೆ ಹಾಕಿಸಿಕೊಂಡಿದ್ದ 'ಕಠಾರಿ ಮುದ್ರೆ-ಬಲಿದಾನದ ಪಟ್ಟಿ’ ಯನ್ನು ತೆಗೆಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯು ಭಾರತೀಯ ಕ್ರಿಕೆಟ್‌ ನಿಯಂತ್ರಣಾ ಮಂಡಳಿಗೆ ಮನವಿ ಮಾಡಿದೆ.

ಇದೆಲ್ಲದರ ನಡುವೆಯೇ ಧೋನಿ ಕೈಗವಸುಗಳ ಬಗ್ಗೆ ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ಸಚಿವಫವಾದ್ ಹುಸೇನ್ ಚೌಧರಿ ಕುಹಕವಾಡಿದ್ದಾರೆ.

ಧೋನಿ ಇಂಗ್ಲೆಂಡ್‌ನಲ್ಲಿರುವುದು ಕ್ರಿಕೆಟ್ ಆಡುವುದಕ್ಕಾಗಿ ಮಹಾಭಾರತಕ್ಕಾಗಿ ಅಲ್ಲ.ಭಾರತೀಯ ಮಾಧ್ಯಮಗಳು ಈ ಬಗ್ಗೆ ಚರ್ಚೆ ನಡೆಸುತ್ತಿರುವುದು ಮೂರ್ಖತನ.ಭಾರತದ ಕೆಲವು ಮಾಧ್ಯಮಗಳು ಯುದ್ಧಕ್ಕೆ ಹಾತೊರೆಯುವಂತಿದೆ.ಅಂತವರನ್ನು ಸಿರಿಯಾ, ಅಫ್ಗಾನಿಸ್ತಾನ ಅಥವಾ ರವಾಂಡಕ್ಕೆ ಕೂಲಿಯಾಳುಗಳಾಗಿ ಕಳಿಸಿಕೊಡಬೇಕು ಎಂದು ಫವಾದ್ ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.