ADVERTISEMENT

ತವರಿನಲ್ಲಿ ಭಾರತ ತಂಡ ಅಪಾಯಕಾರಿ: ಆ್ಯರನ್ ಫಿಂಚ್‌

ಪಿಟಿಐ
Published 18 ಫೆಬ್ರುವರಿ 2019, 19:45 IST
Last Updated 18 ಫೆಬ್ರುವರಿ 2019, 19:45 IST
ಆ್ಯರನ್ ಫಿಂಚ್‌ ಮತ್ತು ವಿರಾಟ್ ಕೊಹ್ಲಿ
ಆ್ಯರನ್ ಫಿಂಚ್‌ ಮತ್ತು ವಿರಾಟ್ ಕೊಹ್ಲಿ   

ಮೆಲ್ಬರ್ನ್‌: ತವರಿನಲ್ಲಿ ಭಾರತ ತಂಡವು ಅಪಾಯಕಾರಿಯಾಗಿದ್ದು ಅದನ್ನು ಎದುರಿಸುವುದು ಸವಾಲೇ ಸರಿ. ಈ ಸವಾಲು ಮೆಟ್ಟಿ ನಿಲ್ಲಲು ಬಿಗ್‌ ಬ್ಯಾಷ್‌ನಲ್ಲಿ ಆಡಿದ ಅನುಭವ ಸಾಲದು ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಆ್ಯರನ್ ಫಿಂಚ್‌ ಅಭಿಪ್ರಾಯಟ್ಟಿದ್ದಾರೆ.

ಭಾರತದಲ್ಲಿ ಆಸ್ಟ್ರೇಲಿಯಾ ತಂಡ ಎರಡು ಟ್ವೆಂಟಿ–20 ಪಂದ್ಯ ಮತ್ತು ಐದು ಏಕದಿನ ಪಂದ್ಯಗಳನ್ನು ಆಡಲಿದೆ. ಇದೇ 24ರಂದು ನಡೆಯಲಿರುವ ಟ್ವೆಂಟಿ–20 ಪಂದ್ಯದ ಮೂಲಕ ತಂಡದ ‍ಅಭಿಯಾನ ಆರಂಭವಾಗಲಿದೆ. ಎರಡೂ ಸರಣಿಗಳಲ್ಲಿ ಪ್ರವಾಸಿ ತಂಡವನ್ನು ಫಿಂಚ್ ಮುನ್ನಡೆಸುವರು.

ಫಿಂಚ್ ಸದ್ಯ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡುತ್ತಿದ್ದಾರೆ. ಅವರು ಮೆಲ್ಬರ್ನ್‌ ರೆನಿಗೇಡ್ಸ್ ತಂಡವನ್ನು ಮುನ್ನಡೆಸುತ್ತಿದ್ದು ಭಾನುವಾರ ನಡೆದಿದ್ದ ಪಂದ್ಯದಲ್ಲಿ ಈ ತಂಡ ಮೆಲ್ಬರ್ನ್‌ ಸ್ಟಾರ್ಸ್ ವಿರುದ್ಧ 13 ರನ್‌ಗಳಿಂದ ಗೆದ್ದಿತ್ತು.

ADVERTISEMENT

‘ಭಾರತದಂಥ ತಂಡದ ವಿರುದ್ಧ ಅವರದೇ ನೆಲದಲ್ಲಿ ಆಡುವಾಗ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಏಕದಿನ ಕ್ರಿಕೆಟ್‌ನಲ್ಲಿ ಭಾರತ ಬಲಿಷ್ಠವಾಗಿದ್ದು ಅವರ ವಿರುದ್ಧ ಕಣಕ್ಕೆ ಇಳಿಯುವಾಗ ಪೂರ್ಣ ಭರವಸೆಯಿಂದ ಇರಬೇಕು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸ್ಫೋಟಕ ಬ್ಯಾಟ್ಸ್‌ಮನ್‌ ಫಿಂಚ್‌ ಈ ವರ್ಷ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ವರ್ಷಗಳಿಂದ ಅವರು ಟೆಸ್ಟ್ ಪಂದ್ಯ ಆಡಲು ಕಾಯುತ್ತಿದ್ದರು. ಆ ಕನಸು ಈ ಬಾರಿ ನನಸಾಗಿದೆ. ಏಕದಿನ ತಂಡದ ನಾಯಕ ಸ್ಥಾನವೂ ಅವರಿಗೆ ಒಲಿದಿದೆ. ಭಾರತ ಪ್ರವಾಸದಲ್ಲಿ ಉತ್ತಮ ಸಾಮರ್ಥ್ಯ ತೋರುವ ಭರವಸೆಯಲ್ಲಿದ್ದಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.