ADVERTISEMENT

ಸಿಡಿಲಬ್ಬರದ ಬ್ಯಾಟಿಂಗ್: ಅಭಿಷೇಕ್ ಶರ್ಮಾ ದಾಖಲೆ ಮುರಿದ ಕಿವೀಸ್ ಬ್ಯಾಟರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಫೆಬ್ರುವರಿ 2026, 8:35 IST
Last Updated 11 ಫೆಬ್ರುವರಿ 2026, 8:35 IST
<div class="paragraphs"><p>ಕಿವೀಸ್ ಬ್ಯಾಟರ್ ಫಿನ್ ಆಲೆನ್</p></div>

ಕಿವೀಸ್ ಬ್ಯಾಟರ್ ಫಿನ್ ಆಲೆನ್

   

ಚಿತ್ರ @NightWatchMad

ಚೆನ್ನೈ: ಇಲ್ಲಿ ಮುಕ್ತಾಯಗೊಂಡ ಟಿ20 ವಿಶ್ವಕಪ್‌ನ ಯುಎಇ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ಕಿವೀಸ್‌ನ ಫಿನ್‌ ಆಲೆನ್‌ ಹಾಗೂ ಟಿಮ್ ಸೀಫರ್ಟ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಸುಲಭ ಗೆಲುವು ದಾಖಲಿಸಿತು.

ADVERTISEMENT

ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಫಿನ್ ಆಲೆನ್, 50 ಎಸೆತಗಳಲ್ಲಿ ಅಜೇಯ 84 ರನ್ ಗಳಿಸುವ ಮೂಲಕ ವಿಶ್ವ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದು ಕೂಡ ಭಾರತ ತಂಡದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ದಾಖಲೆ ಮುರಿಯುವ ಮೂಲಕ. 

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಯುಎಇ 20 ಓವರ್‌ಗಳಲ್ಲಿ 174ರನ್‌ ಕಲೆಹಾಕಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ಪರ ಆರಂಭಿಕ ಬ್ಯಾಟರ್‌ಗಳಾದ ಫಿನ್‌ ಆಲೆನ್‌ ಮತ್ತು ಟಿಮ್ ಸೀಫರ್ಟ್ 175ರನ್‌ಗಳ ಜೊತೆಯಾಟವಾಡಿದ್ದಾರೆ. ಈ ಮೂಲಕ ನ್ಯೂಜಿಲೆಂಡ್‌ನ ಗೆಲುವು ಸಾಧಿಸಿದೆ. 

ದಾಖಲೆಯೇನು? 

ಪಂದ್ಯದಲ್ಲಿ ಅಜೇಯ 84 ರನ್ ಸಿಡಿಸಿದ ಆಲೆನ್, ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 5,000 ರನ್‌ ಗಳಿಸಿದ ಬ್ಯಾಟರ್‌ ಎಂಬ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಅವರು ಈ ಮೈಲುಗಲ್ಲು ತಲುಪಲು 2,854 ಎಸೆತಗಳನ್ನು ಎದುರಿಸಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ 2,898 ಎಸೆತಗಳಲ್ಲಿ 5,000 ರನ್ ಗಳಿಸಿದ್ದ ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಹೆಸರಿನಲ್ಲಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.