ADVERTISEMENT

ಆಟಗಾರರ ಪೂರ್ವಸಿದ್ಧತೆಯೇ ಸವಾಲು: ವೆಂಕಿ ಮೈಸೂರು

ಪಿಟಿಐ
Published 3 ಜೂನ್ 2020, 19:45 IST
Last Updated 3 ಜೂನ್ 2020, 19:45 IST
ವೆಂಕಿ ಮೈಸೂರು  –ಟ್ವಿಟರ್ ಚಿತ್ರ
ವೆಂಕಿ ಮೈಸೂರು  –ಟ್ವಿಟರ್ ಚಿತ್ರ   

ನವದೆಹಲಿ: ದೀರ್ಘ ಕಾಲದ ಲಾಕ್‌ಡೌನ್ ನಂತರ ಕ್ರಿಕೆಟ್‌ಗೆ ಮರಳಲು ಆಟಗಾರರಿಗೆ ಪೂರ್ವ ಸಿದ್ಧತೆ ಮಾಡಿಸುವುದು ಪ್ರಮುಖ ಸವಾಲಾಗಿದೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಿ ಮೈಸೂರು ಹೇಳಿದ್ದಾರೆ.

‘ಇದು ಅನಿರೀಕ್ಷಿತವಾದ ಸಮಯವಾಗಿದೆ. ತಂಡದ ನೆರವು ಸಿಬ್ಬಂದಿಯ ಮುಂದೆ ಈಗ ಗುರುತರವಾದ ಸವಾಲು ಇದೆ. ಆಟಗಾರರನ್ನು ಮರಳಿ ಸ್ಪರ್ಧಾತ್ಮಕ ಕ್ರಿಕೆಟ್‌ ಸಿದ್ಧಗೊಳಿಸುವ ಕುರಿತು ಚಿಂತನೆ ನಡೆಸಿದ್ದಾರೆ. ತಮ್ಮದೇ ಆದ ಯೋಜನೆಗಳೊಂದಿಗೆ ಕಣಕ್ಕಿಳಿಯಲು ಸಿದ್ಧರಾಗುತ್ತಿದ್ದಾರೆ’ ಎಂದು ವೆಂಕಿ ಎಫ್‌ಐಸಿಸಿಐ ವೆಬಿನಾರ್‌ನಲ್ಲಿ ಹೇಳಿದರು.

‘ನಮ್ಮ ತಂಡದಲ್ಲಿ ನೆರವು ಸಿಬ್ಬಂದಿಯು ಸನ್ನದ್ಧವಾಗಿದೆ. ಬಹಳಷ್ಟು ವಿಚಾರ ವಿನಿಮಯಗಳ ನಂತರ ಆಟಗಾರರ ತರಬೇತಿಗೆ ಮತ್ತು ಪುನಶ್ಚೇತಕ್ಕೆ ಉತ್ತಮ ಯೋಜನೆ ರೂಪುಗೊಂಡಿದೆ. ಕೆಲವು ನಿಬಂಧನೆಗಳು ಇರುವ ಕಾರಣ ಇತಿಮಿತಿಯಲ್ಲಿಯೇ ತರಬೇತಿ ಯೋಜನೆಯನ್ನು ಜಾರಿಗೊಳಿಸಲು ಆದ್ಯತೆ ನೀಡಲಾಗಿದೆ. ಉದಾಹರಣೆಗೆ ಜಿಮ್ನಾಷಿಯಂ ತೆರೆಯಲು ಅನುಮತಿ ಇಲ್ಲ. ಆದ್ದರಿಂದ ವ್ಯಾಯಾಮಗಳಿಗೆ ಪರ್ಯಾಯ ಕ್ರಮದ ಬಗ್ಗೆ ಚಿಂತಿಸಲಾಗಿದೆ’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.