ADVERTISEMENT

ಚಾಂಪಿಯನ್ಸ್ ಟ್ರೋಫಿ | ಉಪವಾಸ ಇರದ ಮೊಹಮ್ಮದ್ ಶಮಿ: ಕ್ಷಮೆಗೆ ಮೌಲ್ವಿಗಳ ಆಗ್ರಹ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಮಾರ್ಚ್ 2025, 11:00 IST
Last Updated 6 ಮಾರ್ಚ್ 2025, 11:00 IST
<div class="paragraphs"><p>ಮೊಹಮ್ಮದ್ ಶಮಿ&nbsp;ಎನರ್ಜಿ ಡ್ರಿಂಕ್ ಸೇವಿಸುತ್ತಿರುವ ದೃಶ್ಯ</p></div>

ಮೊಹಮ್ಮದ್ ಶಮಿ ಎನರ್ಜಿ ಡ್ರಿಂಕ್ ಸೇವಿಸುತ್ತಿರುವ ದೃಶ್ಯ

   

–ಎಕ್ಸ್‌ (ಟ್ವಿಟರ್ ಚಿತ್ರ)

ಲಖನೌ: ‘ರಂಜಾನ್‌ ಪವಿತ್ರ ಮಾಸದಲ್ಲಿ ಸಂಪ್ರದಾಯದಂತೆ ಭಾರತ ಕ್ರಿಕೆಟ್‌ ತಂಡದ ಆಟಗಾರ ಮೊಹಮ್ಮದ್‌ ಶಮಿ ಅವರು ರೋಜಾ (ಉಪವಾಸ) ಪಾಲಿಸುತ್ತಿಲ್ಲ’ ಎಂದು ಮೌಲ್ವಿಗಳು ಟೀಕಿಸಿದ್ದಾರೆ.

ADVERTISEMENT

 ‘ರಂಜಾನ್‌ ಮಾಸದಲ್ಲಿ ಉಪವಾಸ ಇರುವುದು ಪವಿತ್ರವಾದ ಕಾರ್ಯ. ರೋಜಾ ಪಾಲಿಸದಿರುವುದು ಷರಿಯತ್‌ ಕಾಯ್ದೆಯ ಪ್ರಕಾರ ತಪ್ಪು.ಇದಕ್ಕಾಗಿ ಶಮಿ ‘ಅಲ್ಲಾ’ನ ಕ್ಷಮೆ ಕೋರಬೇಕು’ ಎಂದು ಒತ್ತಾಯಿಸಿದ್ದಾರೆ.

 ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಯ ಭಾರತ–ಆಸ್ಟ್ರೇಲಿಯಾ ನಡುವಣ ಸೆಮಿಫೈನಲ್ ಪಂದ್ಯದ ವೇಳೆ ಶಮಿ ಅವರು ಪಾನೀಯ ಸೇವಿಸಿದ್ದ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹಂಚಿಕೆಯಾಗಿತ್ತು.

 ಇದರ ಹಿಂದೆಯೇ, ಹಿರಿಯ ಮೌಲ್ವಿ ಮತ್ತು ಆಲ್‌ ಇಂಡಿಯಾ ಜಮಾತ್ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್‌ ರಿಜ್ವಿ, ‘ತಪ್ಪಿಗಾಗಿ ಅಲ್ಲಾ ಕ್ಷಮೆ ಕೋರಬೇಕು’ ಎಂದು  ಗುರುವಾರ ಒತ್ತಾಯಿಸಿದ್ದಾರೆ.

ಶಮಿ ಪಾನೀಯ ಕುಡಿಯುತ್ತಿರುವ ಚಿತ್ರ ಜಾಲತಾಣದಲ್ಲಿ ಪ್ರಕಟವಾದಂತೆ ಹಲವರು ಪ್ರತಿಕ್ರಿಯಿಸಿದ್ದರು. ಕೆಲವರು ‘ತಪ್ಪೇನೂ ಇಲ್ಲ’ ಎಂದರೆ, ಇನ್ನು ಕೆಲವರು ಇದು ‘ತಪ್ಪು’ ಎಂದು ಪ್ರತಿಕ್ರಿಯಿಸಿದ್ದರು.

ಶಮಿ ನಡೆಯನ್ನು ಅಯೋಧ್ಯೆಯ ಸಂತರು ಶ್ಲಾಘಿಸಿದ್ದಾರೆ. ‘ಧರ್ಮ ಒಳಗೊಂಡಂತೆ ಎಲ್ಲದಕ್ಕಿಂತಲೂ ಮೊದಲು ರಾಷ್ಟ್ರಕ್ಕೆ ಪ್ರಥಮ ಆದ್ಯತೆ ಸಿಗಬೇಕು’ ಎಂದೂ ಹೇಳಿದ್ದರು.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶಮಿ ಅವರು ತಮ್ಮ ನಿಗದಿತ ಹತ್ತು ಓವರುಗಳಲ್ಲಿ 48 ರನ್‌ ನೀಡಿ ಮೂರು ವಿಕೆಟ್‌ ಪಡೆದಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.