ಹೈದರಾಬಾದ್: ಫಿಟ್‌ನೆಸ್ ಬಗ್ಗೆ ಹೆಚ್ಚಿನ ಗಮನಕೊಡುತ್ತಿರುವ ಭಾರತ ತಂಡದ ತಾರಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ, ಗೆಳತಿ ಮಹಿಕಾ ಶರ್ಮಾ ಅವರೊಂದಿಗೆ ಜಿಮ್‌ನಲ್ಲಿ ದೇಹ ದಂಡಿಸುತ್ತಿರುವ ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ಮೊದಲ ಪತ್ನಿಯೊಂದಿಗಿನ ವಿಚ್ಛೇದನದ ನಂತರ ರೂಪದರ್ಶಿ ಮಹಿಕಾ ಶರ್ಮಾ ಅವರೊಂದಿಗೆ ರಿಲೇಷನ್‌ಶಿಪ್‌ನಲ್ಲಿ ಇರುವುದಾಗಿ ಹಾರ್ದಿಕ್ ಹೇಳಿದ್ದರು. ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಇಬ್ಬರು ಜೊತೆಗಿರುವ ಫೋಟೊಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.
ಇತ್ತೀಚೆಗೆ ಹಾರ್ದಿಕ್ ನಿವಾಸದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿಯೂ ಮಹಿಕಾ ಭಾಗಿಯಾಗಿದ್ದರು. ಈ ವೇಳೆ ಮಹಿಕಾ ಧರಿಸಿದ್ದ ವಜ್ರದ ಉಂಗುರ ಹೆಚ್ಚು ಸದ್ದು ಮಾಡಿದ್ದು, ನಿಶ್ಚಿತಾರ್ಥವಾಗಿದೆ ಎಂಬ ವದಂತಿಗೆ ಕಾರಣವಾಗಿತ್ತು. ಆದರೆ, ಈ ವದಂತಿಯನ್ನು ಮಹಿಕಾ ತಳ್ಳಿ ಹಾಕಿದ್ದರು.
2020ರಲ್ಲಿ ನಟಿ ನಟಾಶ ಸ್ಟಾಂಕೋವಿಕ್ ಅವರನ್ನು ವಿವಾಹವಾಗಿದ್ದ ಹಾರ್ದಿಕ್, ಕಳೆದ ವರ್ಷ ವಿಚ್ಛೇದನ ಪಡೆದುಕೊಂಡಿದ್ದರು. ದಂಪತಿಗೆ ಒಬ್ಬ ಮಗ ಇದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.