ADVERTISEMENT

ತಮೋರೆ ಮಿಂಚು: ಮುಂಬೈಗೆ ಜಯ

ಪಿಟಿಐ
Published 26 ಡಿಸೆಂಬರ್ 2025, 23:15 IST
Last Updated 26 ಡಿಸೆಂಬರ್ 2025, 23:15 IST
   

ಜೈಪುರ: ಉತ್ತರಾಖಂಡ ವಿರುದ್ಧದ ಎಲೀಟ್‌ ಸಿ ಗುಂಪಿನ ಪಂದ್ಯವನ್ನು ಮುಂಬೈ 51 ರನ್‌ಗಳಿಂದ ಜಯಿಸಿತು. ಶಾರ್ದೂಲ್‌ ನಾಯಕತ್ವದ ಮುಂಬೈ ತಂಡಕ್ಕೆ ಇದು ಸತತ ಎರಡನೇ ಗೆಲುವು.

ಸಿಕ್ಕಿಂ ವಿರುದ್ಧ ಶತಕ ಸಿಡಿಸಿದ್ದ ಭಾರತ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ ‘ಗೋಲ್ಡನ್‌ ಡಕ್‌’ ಆದರು. ಹಾರ್ದಿಕ್‌ ತಮೋರೆ (ಔಟಾಗದೇ 93;52ಎ) ಅವರ ಬ್ಯಾಟಿಂಗ್‌ ನೆರವಿನಿಂದ ಮುಂಬೈ ತಂಡವು 50 ಓವರ್‌ಗಳಲ್ಲಿ 7 ವಿಕೆಟ್‌ಗೆ 331 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಉತ್ತರಾಖಂಡ 9 ವಿಕೆಟ್‌ಗಳಿಗೆ 280 ರನ್‌ ಗಳಿಸಿ ಹೋರಾಟ ಮುಗಿಸಿತು. ಆರಂಭಿಕ ಆಟಗಾರ ಯುವರಾಜ್ ಚೌಧರಿ (96;96ಎ) ಅವರು ನಾಲ್ಕು ರನ್‌ಗಳಿಂದ ಶತಕ ತಪ್ಪಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್‌: ಮುಂಬೈ: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 331 (ಮುಷೀರ್‌ ಖಾನ್‌ 55, ಸರ್ಫರಾಜ್‌ ಖಾನ್‌ 55, ಹಾರ್ದಿಕ್‌ ತಮೋರೆ ಔಟಾಗದೇ 93, ಶಮ್ಸ್ ಮುಲಾನಿ 48; ದೇವೇಂದ್ರ ಸಿಂಗ್ ಬೋರಾ 74ಕ್ಕೆ 3). ಉತ್ತರಾಖಂಡ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 280 (ಯುವರಾಜ್ ಚೌಧರಿ 96, ಜಗದೀಶ ಸಚ್ಚಿತ್‌ 51; ಶಾರ್ದೂಲ್‌ ಠಾಕೂರ್‌ 28ಕ್ಕೆ 2, ಓಂಕಾರ್ ತರ್ಮಲೆ
40ಕ್ಕೆ 2, ಮುಷೀರ್‌ ಖಾನ್‌ 57ಕ್ಕೆ 2). ಪಂದ್ಯದ ಆಟಗಾರ: ಹಾರ್ದಿಕ್‌ ತಮೋರೆ

ADVERTISEMENT

ಆಲೂರು ಕ್ರೀಡಾಂಗಣ 3: ಸರ್ವಿಸಸ್‌: 21.5 ಓವರ್‌ಗಳಲ್ಲಿ 83 (ಪಿ.ಎಸ್‌.ಪೂನಿಯಾ 25; ರಾಜೇಶ್‌ ಮೊಹಾಂತಿ 25ಕ್ಕೆ 4, ಸಂಬಿತ್ ಎಸ್. ಬರಾಲ್ 21ಕ್ಕೆ 4). ಒಡಿಶಾ: 24.3 ಓವರ್‌ಗಳಲ್ಲಿ 6 ವಿಕೆಟ್‌ಗೆ 84 (ಸಂದೀಪ್‌ ಪಟ್ನಾಯಕ್‌ ಔಟಾಗದೇ 32; ಪಿ.ಎಸ್‌. ಪೂನಿಯಾ 27ಕ್ಕೆ 4). ಫಲಿತಾಂಶ: ಒಡಿಶಾ ತಂಡಕ್ಕೆ 4 ವಿಕೆಟ್‌ಗಳ ಜಯ. ಪಂದ್ಯದ ಆಟಗಾರ: ರಾಜೇಶ್‌ ಮೊಹಾಂತಿ.

ಆಲೂರು ಕ್ರೀಡಾಂಗಣ 2: ಸೌರಾಷ್ಟ್ರ: 48.1 ಓವರ್‌ಗಳಲ್ಲಿ 253 (ಹರ್ವಿಕ್‌ ದೇಸಾಯಿ 101, ಗಜ್ಜರ್ ಸಮ್ಮರ್ 83; ಅನ್ಶುಲ್ ಕಂಬೋಜ್ 30ಕ್ಕೆ 3, ಅನುಜ್ ಟಿ. 38ಕ್ಕೆ 2). ಹರಿಯಾಣ: 39 ಓವರ್‌ಗಳಲ್ಲಿ 4 ವಿಕೆಟ್‌ಗೆ 256 (ಯಶವರ್ಧನ್ ದಲಾಲ್ ಔಟಾಗದೇ 164, ಪಾರ್ಥ್‌ ವಿ. 67; ಅಂಕುರ್ ಪನ್ವಾರ್ 51ಕ್ಕೆ 3). ಫಲಿತಾಂಶ: ಹರಿಯಾಣಕ್ಕೆ 6 ವಿಕೆಟ್‌ಗಳ ಜಯ. ಪಂದ್ಯದ ಆಟಗಾರ: ಯಶವರ್ಧನ್ ದಲಾಲ್

ಆಲೂರು ಕ್ರೀಡಾಂಗಣ: ರೈಲ್ವೇಸ್‌: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 266 (ಅಂಶ್ ಯಾದವ್ 59, ರವಿ ಸಿಂಗ್‌ 76, ಝಡ್. ಎ. ಖಾನ್ 48; ಪಿ.ರಾಜು 41ಕ್ಕೆ 3, ಕೆ.ಎಸ್‌.ರಾಜು 68ಕ್ಕೆ 3, ಎಂ.ಹೇಮಂತ್‌ ರೆಡ್ಡಿ 34ಕ್ಕೆ 2). ಆಂಧ್ರ‍: 44.4 ಓವರ್‌ಗಳಲ್ಲಿ 4 ವಿಕೆಟ್‌ಗೆ 271 (ಎಸ್‌.ಕೆ.ರಶೀದ್‌ 40, ರಿಕಿ ಭುಯಿ 76, ನಿತೀಶ್‌ ಕುಮಾರ್‌ ರೆಡ್ಡಿ ಔಟಾಗದೇ 55, ಎಂ.ಹೇಮಂತ್‌ ರೆಡ್ಡಿ ಔಟಾಗದೇ 41; ಕರ್ಣ್‌ ಶರ್ಮಾ 46ಕ್ಕೆ 3). ಆಂಧ್ರ ತಂಡಕ್ಕೆ 6 ವಿಕೆಟ್‌ಗಳ ಜಯ. ಪಂದ್ಯದ ಆಟಗಾರ ಹೇಮಂತ್‌ ರೆಡ್ಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.