ADVERTISEMENT

ಒಂದು ದಿನ ರೊನೊಲ್ಡೊ ಆಗಿ ಬದಲಾದರೆ 'ಹೀಗೆ' ಮಾಡುತ್ತೇನೆ: ಕೊಹ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಏಪ್ರಿಲ್ 2022, 15:33 IST
Last Updated 5 ಏಪ್ರಿಲ್ 2022, 15:33 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಭಾರತದ ಸ್ಟಾರ್‌ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಪೋರ್ಚುಗೀಸ್‌ನಫುಟ್‌ಬಾಲ್‌ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಅಪ್ಪಟ ಅಭಿಮಾನಿ.ಫಿಟ್‌ನೆಸ್‌ಗೆ ಒತ್ತು ನೀಡುವ ಕೊಹ್ಲಿಯನ್ನು ಕ್ರಿಕೆಟ್‌ ಲೋಕದ ರೊನಾಲ್ಡೊ ಎಂದೂ ಕರೆಯುವುದುಂಟು.

ಕೊಹ್ಲಿಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಆಡುತ್ತಾರೆ. ಪ್ರಾಂಚೈಸ್‌ಗಾಗಿ ಫೋಟೊಶೂಟ್ ನಡೆಸುತ್ತಿದ್ದ ಸಂದರ್ಭದಲ್ಲಿ ಅವರುರೊನಾಲ್ಡೊ ಬಗೆಗಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ಆರ್‌ಸಿಬಿಯ 'ಬಿಹೈಂಡ್‌ ದಿ ಸೀನ್ಸ್‌' ಸರಣಿಯಲ್ಲಿ,'ನೀವೇನಾದರೂ ಒಂದು ಮುಂಜಾನೆ ಕ್ರಿಸ್ಟಿಯಾನೊ ರೊನಾಲ್ಡೊ ಆಗಿ ಎಚ್ಚರಗೊಂಡರೆ ಏನು ಮಾಡುವಿರಿ' ಎಂದು ಕೇಳಿದ ಪ್ರಶ್ನೆಗೆಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.

ADVERTISEMENT

'ನಾನು ರೊನೊಲ್ಡೊ ಆಗಿ ಎಚ್ಚರಗೊಂಡರೆ, ನನ್ನ ಮೆದುಳು ಸ್ಕ್ಯಾನ್ ಮಾಡುತ್ತೇನೆ ಮತ್ತು ಅಷ್ಟು ಮಾನಸಿಕ ಶಕ್ತಿ ಎಲ್ಲಿಂದ ಬರುತ್ತದೆ ಎಂಬುದನ್ನು ನೋಡುತ್ತೇನೆ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.