ADVERTISEMENT

8ರಂದು ಬೆಂಗಳೂರಿಗೆ ಐಸಿಸಿ ವಿಶ್ವಕಪ್

ಪಿಟಿಐ
Published 1 ಡಿಸೆಂಬರ್ 2018, 20:01 IST
Last Updated 1 ಡಿಸೆಂಬರ್ 2018, 20:01 IST
ಮುಂಬೈನಲ್ಲಿ ಶನಿವಾರ ಐಸಿಸಿ ವಿಶ್ವಕಪ್ –2019ರ ಟ್ರೋಫಿಯನ್ನು ಹಿರಿಯ ಕ್ರಿಕೆಟಿಗ ಆಕಾಶ್ ಚೋಪ್ರಾ ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ಟೂರ್ನಿಯ ಫ್ರಾಯೋಜಕರಲ್ಲೊಬ್ಬರಾದ ನಿಸಾನ್‌ ಕಂಪೆನಿಯ ಕಿಕ್ಸ್‌ ಕಾರ್‌ ಅನ್ನೂ ಅನಾವರಣ ಮಾಡಲಾಯಿತು  –ಪಿಟಿಐ ಚಿತ್ರ

ಮುಂಬೈ: ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ನ ಟ್ರೋಫಿಯನ್ನು ಡಿಸೆಂಬರ್ 8ರಂದು ಬೆಂಗಳೂರಿನಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತಿದೆ.

ಶನಿವಾರವೇ ಟ್ರೋಫಿಯನ್ನು ಭಾರತಕ್ಕೆ ತರಲಾಗಿದೆ. ಭಾನುವಾರದಿಂದ ದೇಶದ ಒಂಬತ್ತು ಮಹಾನಗರಳಲ್ಲಿ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಮುಂಬೈನಲ್ಲಿ ಭಾನುವಾರ ವೆಸ್ಟ್‌ ಮಲಾಡ್‌ನ ಇನ್‌ಫಿನಿಟಿ ಮಾಲ್‌ನಲ್ಲಿ ಪ್ರದರ್ಶನಕ್ಕೆ ಇಡಲಾಗುವುದು.

ಎಂಟರಂದು ಬೆಂಗಳೂರಿನ ಕೋರಮಂಗಲದಲ್ಲಿರುವ ಫೋರಂ ಮಾಲ್‌ನಲ್ಲಿ ಇಡಲಾಗುವುದು.15ರಂದು ಕೋಲ್ಕತ್ತ, 23ರಂದು ದೆಹಲಿಯಲ್ಲಿ ಪ್ರದರ್ಶನಗೊಳ್ಳಲಿದೆ. ಟ್ರೋಫಿ ಪ್ರದರ್ಶನದ ಇನ್ನುಳಿದ ನಗರಗಳ ಹೆಸರುಗಳನ್ನು ಇನ್ನೂ ಬಹಿರಂಗ ಪಡಿಸಿಲ್ಲ.

ADVERTISEMENT

2019ರ ಮೇ 30 ರಿಂದ ಜುಲೈ 14ರವರೆಗೆ ಇಂಗ್ಲೆಂಡ್ ನಲ್ಲಿ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.