ADVERTISEMENT

ರ‍್ಯಾಂಕಿಂಗ್‌: ಅಗ್ರಸ್ಥಾನ ಉಳಿಸಿಕೊಂಡ ಸೂರ್ಯ

ಪಿಟಿಐ
Published 16 ನವೆಂಬರ್ 2022, 21:21 IST
Last Updated 16 ನವೆಂಬರ್ 2022, 21:21 IST
ಸೂರ್ಯಕುಮಾರ್ ಯಾದವ್‌– ಎಎಫ್‌ಪಿ ಚಿತ್ರ
ಸೂರ್ಯಕುಮಾರ್ ಯಾದವ್‌– ಎಎಫ್‌ಪಿ ಚಿತ್ರ   

ದುಬೈ: ಭಾರತದ ಸೂರ್ಯಕುಮಾರ್ ಯಾದವ್‌ ಅವರು ಬುಧವಾರ ಪ್ರಕಟಿಸಲಾದ ಐಸಿಸಿ ಟಿ20 ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ಕೊನೆಗೊಂಡ ವಿಶ್ವಕಪ್ ಟೂರ್ನಿಯಲ್ಲಿನ ಉತ್ತಮ ಆಟದಿಂದಾಗಿ ಸೂರ್ಯ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಸದ್ಯ ಅವರ ಬಳಿ 859 ರೇಟಿಂಗ್‌ ಪಾಯಿಂಟ್‌ಗಳಿವೆ.

ವಿಶ್ವಕಪ್ ಟೂರ್ನಿಯ ಐದು ಇನಿಂಗ್ಸ್‌ಗಳಲ್ಲಿ ಸೂರ್ಯ ಅವರು 59.75ರ ಸರಾಸರಿ ಮತ್ತು 189.68ರ ಸ್ಟ್ರೈಕ್‌ರೇಟ್‌ನಲ್ಲಿ 239 ರನ್‌ ಗಳಿಸಿದ್ದರು.

ADVERTISEMENT

ಪಾಕಿಸ್ತಾನದ ಮೊಹಮ್ಮದ್‌ ರಿಜ್ವಾನ್‌ ಎರಡನೇ ಸ್ಥಾನದಲ್ಲಿದ್ದರೆ, ಬಾಬರ್ ಆಜಂ ಮೂರನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.