ADVERTISEMENT

ಐಸಿಸಿ ಟಿ20 ರ್‍ಯಾಂಕಿಂಗ್: ಅಗ್ರಸ್ಥಾನ ಕಳೆದುಕೊಂಡ ದೀಪ್ತಿ, ಕೌರ್‌ಗೆ ಬಡ್ತಿ

ಪಿಟಿಐ
Published 6 ಜನವರಿ 2026, 23:30 IST
Last Updated 6 ಜನವರಿ 2026, 23:30 IST
ದೀಪ್ತಿ ಶರ್ಮಾ
ದೀಪ್ತಿ ಶರ್ಮಾ   

ದುಬೈ: ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಮಂಗಳವಾರ ಪ್ರಕಟವಾದ ಐಸಿಸಿ ಮಹಿಳಾ ಟಿ20 ರ್‍ಯಾಂಕಿಂಗ್‌ನಲ್ಲಿ ಬ್ಯಾಟರ್‌ಗಳ ವಿಭಾಗದಲ್ಲಿ ಎರಡು ಸ್ಥಾನ ಬಡ್ತಿ ಪಡೆದು 13ನೇ ಸ್ಥಾನಕ್ಕೇರಿದ್ದಾರೆ. ತಂಡದ ಆಲ್‌ರೌಂಡರ್‌ ದೀಪ್ತಿ ಶರ್ಮಾ ಅವರು ಬೌಲರ್‌ಗಳ ವಿಭಾಗದಲ್ಲಿ ಅಗ್ರಸ್ಥಾನ ಕಳೆದುಕೊಂಡಿದ್ದಾರೆ.

ಶ್ರೀಲಂಕಾ ವಿರುದ್ಧ ತಿರುವನಂತಪುರದಲ್ಲಿ ಇತ್ತೀಚೆಗೆ ನಡೆದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಅವರು 43 ಎಸೆತಗಳಲ್ಲಿ 68 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತ 15 ರನ್‌ಗಳಿಂದ ಪಂದ್ಯ ಗೆದ್ದು ಸರಣಿಯನ್ನು 5–0 ‘ಕ್ಲೀನ್‌ಸ್ವೀಪ್‌’ ಮಾಡಿತ್ತು.

ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮಾ ಅವರು ಕ್ರಮವಾಗಿ ಮೂರು ಮತ್ತು ಆರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆಸ್ಟ್ರೇಲಿಯಾದ ಬೆತ್ ಮೂನಿ ಅವರ ಅಗ್ರಸ್ಥಾನ ಅಬಾಧಿತವಾಗುಳಿದಿದೆ.

ADVERTISEMENT

ಆದರೆ ಜೆಮಿಮಾ ರಾಡ್ರಿಗಸ್‌ ಅವರು ಅಗ್ರ 10ರಿಂದ ಹೊರಬಿದ್ದು 12ನೇ ಸ್ಥಾನದಲ್ಲಿದ್ದಾರೆ.

ಬೌಲರ್‌ಗಳ ವಿಭಾಗದಲ್ಲಿ ದೀಪ್ತಿ ಶರ್ಮಾ ಅಗ್ರಸ್ಥಾನ ಕಳೆದುಕೊಂಡಿದ್ದಾರೆ. ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್‌ಲ್ಯಾಂಡ್‌ ಅಗ್ರಸ್ಥಾನಕ್ಕೇರಿದ್ದಾರೆ. ಅನ್ನಾಬೆಲ್ 736 ರೇಟಿಂಗ್ ಪಾಯಿಂಟ್‌ ಗಳಿಸಿದ್ದರೆ, ದೀಪ್ತಿ 735 ಪಾಯಿಂಟ್ಸ್ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.