ಫೋಟೊ ಕೃಪೆ : ಗೂಗಲ್
ನವದೆಹಲಿ: 13ನೇ ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ 2025ಕ್ಕೆ ಇಂದು (ಮಂಗಳವಾರ) ಅಧಿಕೃತವಾಗಿ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ. ಈ ನಡುವೆ ಗೂಗಲ್ ಮಹಿಳಾ ವಿಶ್ವಕಪ್‌ಗೆ ವಿಶೇಷ ಗೌರವ ಸಲ್ಲಿಸಿದೆ.
ಹೌದು, ಮಹಿಳಾ ಕ್ರಿಕೆಟ್‌ನ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿರುವ ನಡುವೆ, ಭಾರತ ಮತ್ತು ಶ್ರೀಲಂಕಾದ ವಿವಿಧ ಸ್ಥಳಗಳಲ್ಲಿ ಈ ಬಾರಿಯ ಮಹಿಳಾ ವಿಶ್ವಕಪ್ ಇಂದಿನಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಗೂಗಲ್ ಸಂಸ್ಥೆ ವಿಶೇಷ 'ಡೂಡಲ್' ಮೂಲಕ ಮಹಿಳಾ ವಿಶ್ವಕಪ್‌ಗೆ ವಿಶೇಷ ಗೌರವ ಸಲ್ಲಿಸಿದೆ. ಸದ್ಯ, ಗೂಗಲ್ ನೀಡಿರುವ ಈ ಗೌರವವು ಕ್ರೀಡಾಕೂಟದ ಜಾಗತಿಕ ಮಹತ್ವವನ್ನು ಮಾತ್ರವಲ್ಲದೆ, ಪ್ರಪಂಚದಾದ್ಯಂತ ಮಹಿಳಾ ಕ್ರಿಕೆಟ್‌ಗೆ ಇರುವ ಜನಪ್ರಿಯತೆಯನ್ನು ಎತ್ತಿ ತೋರಿಸುತ್ತಿದೆ.
ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2025 ಉದ್ಘಾಟನಾ ಪಂದ್ಯ ಇಂದು (ಮಂಗಳವಾರ) ಭಾರತ ಹಾಗೂ ಶ್ರೀಲಂಕಾ ನಡುವೆ ಗುವಾಹಟಿಯಲ್ಲಿ ಆರಂಭವಾಗಲಿದೆ. ಏಕದಿನ ಮಾದರಿಯ ಈ ಟೂರ್ನಮೆಂಟ್ ಭಾರತ ಮತ್ತು ಶ್ರೀಲಂಕಾದ ವಿವಿಧ ಸ್ಥಳಗಳಲ್ಲಿ 31 ಪಂದ್ಯಗಳು ನಡೆಯಲಿವೆ. ಈ ಟೂರ್ನಮೆಂಟ್‌ನಲ್ಲಿ ವಿಶ್ವದ 8 ಪ್ರಮುಖ ತಂಡಗಳು ಭಾಗವಹಿಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.