2023ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಟಾಸ್ ವೇಳೆ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಭಾರತ ತಂಡದ ನಾಯಕ ರೋಹಿತ್ ಶರ್ಮಾ
ಪಿಟಿಐ ಚಿತ್ರ
ಮೆಲ್ಬರ್ನ್: ಭಾರತ ಕ್ರಿಕೆಟ್ ತಂಡವು ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಏಕದಿನ ಹಾಗೂ ಟಿ20 ಸರಣಿಯಲ್ಲಿ ಆಡಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಭಾನುವಾರ ತಿಳಿಸಿದೆ.
2024-25ರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಬಳಿಕ, ಭಾರತ ತಂಡ ಆಸ್ಟ್ರೇಲಿಯಾಗೆ ಕೈಗೊಳ್ಳುವ ಮೊದಲ ಪ್ರವಾಸ ಇದಾಗಲಿದೆ.
ಉಭಯ ತಂಡಗಳು ಅಕ್ಟೋಬರ್ 19ರಿಂದ ನವೆಂಬರ್ 8ರ ವರೆಗೆ ಪಂದ್ಯಗಳನ್ನು ಆಡಲಿವೆ. ಏಕದಿನ ಪಂದ್ಯಗಳು ಹಗಲು-ರಾತ್ರಿ ಮತ್ತು ಟಿ20 ಪಂದ್ಯಗಳು ರಾತ್ರಿ ನಡೆಯಲಿವೆೆ.
ಆಸ್ಟ್ರೇಲಿಯಾದ ಎರಡು ಪ್ರಾಂತ್ಯ ಹಾಗೂ ಆರೂ ರಾಜ್ಯಗಳಲ್ಲಿ ಪಂದ್ಯಗಳು ನಡೆಯಲಿವೆ.
ಏಕದಿನ ಪಂದ್ಯಗಳು ಪರ್ತ್, ಅಡಿಲೇಡ್ ಹಾಗೂ ಸಿಡ್ನಿಯಲ್ಲಿ ನಡೆಯಲಿವೆ. ಚುಟುಕು ಮಾದರಿಯ ಪಂದ್ಯಗಳಿಗೆ ಕ್ಯಾನ್‌ಬೆರಾ, ಮೆಲ್ಬರ್ನ್, ಹೋಬರ್ಟ್, ಗೋಲ್ಡ್ ಕೋಸ್ಟ್ ಹಾಗೂ ಬ್ರಿಸ್ಬೇನ್ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ.
ಏಕದಿನ ಪಂದ್ಯಗಳು
ಅಕ್ಟೋಬರ್ 19: ಪರ್ತ್
ಅಕ್ಟೋಬರ್ 23: ಅಡಿಲೇಡ್
ಅಕ್ಟೋಬರ್ 25: ಸಿಡ್ನಿ
ಟಿ20 ಪಂದ್ಯಗಳು
ಅಕ್ಟೋಬರ್ 29: ಕ್ಯಾನ್‌ಬೆರಾ
ಅಕ್ಟೋಬರ್ 31: ಮೆಲ್ಬರ್ನ್
ನವೆಂಬರ್ 2: ಹೋಬರ್ಟ್
ನವೆಂಬರ್ 6: ಗೋಲ್ಡ್ ಕೋಸ್ಟ್
ನವೆಂಬರ್ 8: ಬ್ರಿಸ್ಬೇನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.