ಭಾರತ ತಂಡದ ಆಟಗಾರರು
ಕೃಪೆ: @BCCI
ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ ಟಿ20 ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಸೋಲು ಕಂಡಿದ್ದು, ಟೂರ್ನಿಯಲ್ಲಿ 1 – 0 ಅಂತರದ ಹಿನ್ನಡೆ ಅನುಭವಿಸಿದೆ.
ಮೆಲ್ಬರ್ನ್‌ನಲ್ಲಿ ಇಂದು (ಶುಕ್ರವಾರ) ನಡೆದ ಪಂದ್ಯದಲ್ಲಿ ಅಲ್ಪಮೊತ್ತಕ್ಕೆ ಆಲೌಟ್ ಆದದ್ದು ಟೀಂ ಇಂಡಿಯಾಗೆ ಮುಳುವಾಯಿತು. ಅಂದಹಾಗೆ, ಭಾರತ ತಂಡ ಚುಟುಕು ಮಾದರಿಯಲ್ಲಿ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡದ್ದು ಇದು 13ನೇ ಸಲ.
2024ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದಿರುವುದನ್ನು ಬಿಟ್ಟರೆ, ಈ ರೀತಿ ಮುಗ್ಗರಿಸಿದ ಉಳಿದ 12 ಪಂದ್ಯಗಳಲ್ಲೂ ಭಾರತ ಸೋತಿದೆ.
ಜೋಶ್ ಪೆಟ್ಟು
ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿದೆ.
ಎರಡನೇ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾಗೆ ವೇಗಿ ಜೋಶ್ ಹ್ಯಾಜಲ್‌ವುಡ್ ಆರಂಭದಲ್ಲೇ ಪೆಟ್ಟು ಕೊಟ್ಟರು. ಇನಿಂಗ್ಸ್‌ನ ಏಳು ಓವರ್‌ಗಳು ಮುಗಿಯುವುದರೊಳಗೆ ತಮ್ಮ ಪಾಲಿನ 4 ಓವರ್‌ಗಳ ಕೋಟಾ ಪೂರ್ಣಗೊಳಿಸಿದ ಅವರು, ಕೇವಲ 13 ರನ್ ಬಿಟ್ಟುಕೊಟ್ಟು ಪ್ರಮುಖ ಮೂರು ವಿಕೆಟ್‌ಗಳನ್ನು ಕಬಳಿಸಿದರು.
ಆ ಮೂಲಕ ಟೀಂ ಇಂಡಿಯಾದ ಬೆನ್ನೆಲುಬು ಮುರಿದರು. ಆ ನಂತರ ಟಿಂ ಭಾರತ ಚೇತರಿಸಿಕೊಳ್ಳಲೇ ಇಲ್ಲ. ಸ್ಫೋಟಕ ಶೈಲಿಯ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ, ಏಕಾಂಗಿಯಾಗಿ ಹೋರಾಡಿದರು. 37 ಎಸೆತಗಳಲ್ಲಿ 68 ರನ್ ಗಳಿಸಿದ ಅವರು, ಒಂದೆಡೆ ಎಂದಿನಂತೆ ಬೀಸಾಟ ಮುಂದುವರಿಸಿದರೂ, ಮತ್ತೊಂದು ತುದಿಯಲ್ಲಿ ವಿಕೆಟ್ ಪತನ ನಿಲ್ಲಲಿಲ್ಲ.
ಆಲ್‌ರೌಂಡರ್ ಹರ್ಷಿತ್ ರಾಣಾ (35) ಆರನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರೂ ಅದು ಸಾಕಾಗಲಿಲ್ಲ. ಉಳಿದ ಯಾರೂ ಹತ್ತರ ಗಡಿಯನ್ನೂ ದಾಟಲಿಲ್ಲ. ಹೀಗಾಗಿ, ಸೂರ್ಯಕುಮಾರ್ ಯಾದವ್ ಪಡೆ 18.4 ಓವರ್‌ಗಳಲ್ಲಿ 125 ರನ್ ಗಳಿಸಿ ಆಲೌಟ್ ಆಯಿತು.
ಈ ಗುರಿ ಕಾಂಗರೂ ಪಡೆಗೆ ಸವಾಲೇ ಆಗಲಿಲ್ಲ. ಕೇವಲ 13.2 ಓವರ್‌ಗಳಲ್ಲೇ 6 ವಿಕೆಟ್‌ಗೆ 126 ರನ್ ಗಳಿಸುವ ಮೂಲಕ ಜಯದ ನಗೆ ಬೀರಿತು.
ಮುಂದಿನ ಪಂದ್ಯವು ಹೋಬರ್ಟ್‌ನಲ್ಲಿ ಭಾನುವಾರ (ನ.2) ನಡೆಯಲಿದೆ.
ಭಾರತ ತಂಡ ಆಲೌಟ್ ಆದ ಪಂದ್ಯಗಳು
2008
ಭಾರತ: 74
ಆಸ್ಟ್ರೇಲಿಯಾ: 75/1
ಫಲಿತಾಂಶ: 9 ವಿಕೆಟ್ ಸೋಲು
2010
ಆಸ್ಟ್ರೇಲಿಯಾ: 184/5
ಭಾರತ: 135
ಫಲಿತಾಂಶ: 49 ರನ್ ಸೋಲು
2011
ಭಾರತ: 165
ಇಂಗ್ಲೆಂಡ್: 169/4
ಫಲಿತಾಂಶ: 6 ವಿಕೆಟ್ ಸೋಲು
2015
ಭಾರತ: 92
ದಕ್ಷಿಣ ಆಫ್ರಿಕಾ: 96/4
ಫಲಿತಾಂಶ: 6 ವಿಕೆಟ್ ಸೋಲು
2016
ನ್ಯೂಜಿಲೆಂಡ್: 126/7
ಭಾರತ: 79
ಫಲಿತಾಂಶ: 47 ರನ್ ಸೋಲು
2016
ಭಾರತ: 101
ಶ್ರೀಲಂಕಾ: 105/5
ಫಲಿತಾಂಶ: 5 ವಿಕೆಟ್ ಸೋಲು
2017
ಭಾರತ: 118
ಆಸ್ಟ್ರೇಲಿಯಾ: 122/2
ಫಲಿತಾಂಶ: 8 ವಿಕೆಟ್ ಸೋಲು
2019
ನ್ಯೂಜಿಲೆಂಡ್: 219/6
ಭಾರತ: 139
ಫಲಿತಾಂಶ: 80 ರನ್ ಸೋಲು
2022
ದಕ್ಷಿಣ ಆಫ್ರಿಕಾ: 227/3
ಭಾರತ: 178
ಫಲಿತಾಂಶ: 49 ರನ್ ಸೋಲು
2022
ಭಾರತ: 138
ವೆಸ್ಟ್ ಇಂಡೀಸ್: 141/5
ಫಲಿತಾಂಶ: 5 ವಿಕೆಟ್ ಸೋಲು
2024
ಭಾರತ: 119
ಆಸ್ಟ್ರೇಲಿಯಾ: 113/7
ಫಲಿತಾಂಶ: 6 ರನ್ ಜಯ
2024
ಜಿಂಬಾಬ್ವೆ: 115/9
ಭಾರತ: 102
ಫಲಿತಾಂಶ: 13 ರನ್ ಸೋಲು
2025
ಭಾರತ: 125
ಆಸ್ಟ್ರೇಲಿಯಾ: 126/6
ಫಲಿತಾಂಶ: 4 ವಿಕೆಟ್ ಸೋಲು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.