ADVERTISEMENT

ಏಷ್ಯಾಕಪ್ ರೈಸಿಂಗ್ ಸ್ಟಾರ್ ಟಿ20: ಸೆಮಿಫೈನಲ್‌ಗೆ ಭಾರತ ಎ

ಪಿಟಿಐ
Published 19 ನವೆಂಬರ್ 2025, 5:31 IST
Last Updated 19 ನವೆಂಬರ್ 2025, 5:31 IST
<div class="paragraphs"><p>ಏಷ್ಯಾಕಪ್ ರೈಸಿಂಗ್ ಸ್ಟಾರ್ ಟಿ20 ಭಾರತ ತಂಡದ ನಾಯಕ ಜಿತೇಶ್ ಶರ್ಮಾ&nbsp;</p></div>

ಏಷ್ಯಾಕಪ್ ರೈಸಿಂಗ್ ಸ್ಟಾರ್ ಟಿ20 ಭಾರತ ತಂಡದ ನಾಯಕ ಜಿತೇಶ್ ಶರ್ಮಾ 

   

ದೋಹಾ: ಇಲ್ಲಿನ ವೆಸ್ಟ್ ಎಂಡ್ ಪಾರ್ಕ್​ ಮೈದಾನದಲ್ಲಿ ನಡೆದ ಏಷ್ಯಾಕಪ್ ರೈಸಿಂಗ್ ಸ್ಟಾರ್ ಟಿ20 ಟೂರ್ನಿಯ 10ನೇ ಪಂದ್ಯದಲ್ಲಿ ಭಾರತ ಎ ತಂಡ ಒಮನ್ ವಿರುದ್ಧ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಒಮನ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 135 ರನ್ ಕಲೆಹಾಕಿತು. ಈ ಸುಲಭ ಗುರಿ ಬೆನ್ನಟ್ಟಿದ ಭಾರತ ಎ ತಂಡ 17.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ADVERTISEMENT

ಸುಲಭ ಗುರಿ ಬೆನ್ನಟ್ಟಿದ ಭಾರತ ಎ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾದ ಪ್ರಿಯಾಂಶ್ ಆರ್ಯ (10) ರನ್ ಹಾಗೂ ವೈಭವ್ ಸೂರ್ಯವಂಶಿ (12) ರನ್​​ಗಳಿಸಿ ವಿಕೆಟ್ ಒಪ್ಪಿಸಿದರು.

ನಂತರ ಜೊತೆಯಾದ ನಮನ್ ಧೀರ್ ಹಾಗೂ ಹರ್ಷ್ ದುಬೆ ಉತ್ತಮ ಜೊತೆಯಾಟ ನಡೆಸಿದರು. ನಮನ್​ ಧೀರ್ 19 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 2 ಬೌಂಡರಿ ನೆರವಿನಿಂದ 30 ರನ್ ಬಾರಿಸಿದರು. ಹರ್ಷ್ ದುಬೆ 44 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಬೌಂಡರಿ ನೆರವಿನಿಂದ ಅಜೇಯ 53 ರನ್​ ಕಲೆಹಾಕಿ ತಂಡದ ಗೆಲುವಿಗೆ ಕಾರಣರಾದರು.

ಸಂಕ್ಷಿಪ್ತ ಸ್ಕೋರ್‌: ಒಮನ್ 20 ಓವರ್‌ಗಳಲ್ಲಿ 135/7 (ವಾಸಿಮ್ ಅಲಿ ಅಜೇಯ 54: ಗುರ್ಜನ್‌ಪ್ರೀತ್ ಸಿಂಗ್ 37\2, ಸುಯಾಶ್ ಶರ್ಮಾ 12\2). ಭಾರತ ಎ 17.5 ಓವರ್‌ಗಳಲ್ಲಿ 138/4 (ಹರ್ಷ್ ದುಬೆ ಅಜೇಯ 53).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.