ಭಾರತ ಎ ಮಹಿಳಾ ತಂಡದ ಯಷ್ಟಿಕಾ ಭಾಟಿಯಾ
ಬ್ರಿಸ್ಬೇನ್: ಅಮೋಘ ಅರ್ಧಶತಕಗಳನ್ನು ದಾಖಲಿಸಿದ ಯಷ್ಟಿಕಾ ಭಾಟಿಯಾ, ರಾಧಾ ಯಾದವ್ ಮತ್ತು ತನುಜಾ ಕನ್ವರ್ ಅವರ ಬಲದಿಂದ ಭಾರತ ಎ ತಂಡವು ಆಸ್ಟ್ರೇಲಿಯಾ ಎ ತಂಡದ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯನ್ನು 2–0ಯಿಂದ ಕೈವಶ ಮಾಡಿಕೊಂಡಿತು.
ಶುಕ್ರವಾರ ಇಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭಾರತ ಎ ತಂಡವು 2 ವಿಕೆಟ್‌ಗಳಿಂದ ಜಯಿಸಿತು. ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇದೆ. 266 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭಿಕ ಬ್ಯಾಟರ್ ಯಷ್ಟಿಕಾ (66; 71ಎ, 4X9), ನಾಯಕಿ ರಾಧಾ (60; 78ಎ, 4X5, 6X1) ಹಾಗೂ ತನುಜಾ ಕನ್ವರ್ (50; 57ಎ, 4X3) ಅವರು ಗೆಲುವಿನ ಕಾಣಿಕೆ ನೀಡಿದರು. ಪ್ರೇಮಾ ರಾವತ್ (ಅಜೇಯ 32; 33ಎ, 4X3) ಅವರೂ ಉಪಯುಕ್ತ ಕಾಣಿಕೆ ನೀಡಿದರು.
ಟಾಸ್ ಗೆದ್ದ ಆತಿಥೇಯ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಲಿಸಾ ಹೀಲಿ (91; 87ಎ, 4X8, 6X3) ಹಾಗೂ ಕಿಮ್ ಗಾರ್ಥ್ (ಅಜೇಯ 41; 45ಎ, 4X4) ಅವರ ಬ್ಯಾಟಿಂಗ್ ಬಲದಿಂದ 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 265 ರನ್ ಗಳಿಸಿತು. ಭಾರತ ಎ ತಂಡದ ಸೈಮಾ ಠಾಕೂರ್ (30ಕ್ಕೆ2) ಮತ್ತು ಮಿನು ಮಣಿ (46ಕ್ಕೆ3) ಅವರು ಅತಿಥೇಯ ತಂಡವು 300ರ ಗಡಿ ದಾಟದಂತೆ ನೋಡಿಕೊಂಡರು.
ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ ಎ : 50 ಓವರ್‌ಗಳಲ್ಲಿ 9ಕ್ಕೆ265 (ಅಲೀಸಾ ಹೀಲಿ 91, ರಚೆಲ್ ಟ್ರೆನಾಮನ್ 24, ಎಲ್ಲಾ ಹೇವಾರ್ಡ್ 28, ಕಿಮ್ ಗಾರ್ಥ್ ಔಟಾಗದೇ 41, ಸೈಮಾ ಠಾಕೂರ್ 30ಕ್ಕೆ2, ಮಿನು ಮಣಿ 46ಕ್ಕೆ3) ಭಾರತ ಎ : 49.5 ಓವರ್‌ಗಳಲ್ಲಿ 8ಕ್ಕೆ266 (ಯಷ್ಟಿಕಾ ಭಾಟಿಯಾ 66, ರಾಧಾ ಯಾದವ್ 60, ತನುಜಾ ಕನ್ವರ್ 50, ಪ್ರೇಮಾ ರಾವತ್ ಔಟಾಗದೇ 32, ತೇಜಲ್ ಹಸ್ಬನೀಸ್ 19, ಜಾರ್ಜಿಯಾ ಪ್ರೆಸ್ಟ್‌ವಿಜ್ 68ಕ್ಕೆ2, ಅಮಿ ಲೂಯಿಸ್ ಎಡ್ಗರ್ 55ಕ್ಕೆ2, ಎಲಾ ಹೇವರ್ಡ್ 57ಕ್ಕೆ2) ಫಲಿತಾಂಶ: ಭಾರತ ಎ ತಂಡಕ್ಕೆ 2 ವಿಕೆಟ್ ಜಯ ಹಾಗೂ ಸರಣಿಯಲ್ಲಿ 2–0 ಮುನ್ನಡೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.