ADVERTISEMENT

U19 Women's World Cup 2025: ಪ್ರಶಸ್ತಿ ಉಳಿಸಿಕೊಳ್ಳಲು ಭಾರತ ಹೋರಾಟ

ಪಿಟಿಐ
Published 18 ಜನವರಿ 2025, 0:30 IST
Last Updated 18 ಜನವರಿ 2025, 0:30 IST
19 ವರ್ಷದೊಳಗಿನ ವಿಶ್ವಕಪ್‌ ತಂಡಗಳ ನಾಯಕಿಯರು
19 ವರ್ಷದೊಳಗಿನ ವಿಶ್ವಕಪ್‌ ತಂಡಗಳ ನಾಯಕಿಯರು   

ಕೌಲಾಲಂಪುರ್: ಭಾರತದ ಉದಯೋನ್ಮುಖ ಆಟಗಾರ್ತಿಯರು ಶನಿವಾರ ಆರಂಭವಾಗಲಿರುವ ಐಸಿಸಿ ಅಂಡರ್‌ 19 ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪ್ರಾಬಲ್ಯ ಸಾಧಿಸಲು ಉತ್ಸುಕರಾಗಿದ್ದಾರೆ.

2023ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಭಾರತ ತಂಡವು ಈ ಸಲ ವೆಸ್ಟ್‌ಇಂಡೀಸ್‌, ಶ್ರೀಲಂಕಾ ಮತ್ತು ಆತಿಥೇಯ ಮಲೇಷ್ಯಾ ತಂಡಗಳೊಂದಿಗೆ ‘ಎ’ ಗುಂಪಿನಲ್ಲಿದೆ. ಭಾನುವಾರ ಬೇಯುಮಾಸ್‌ ಓವಲ್‌ನಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಆಡುವ ಮೂಲಕ ಭಾರತದ ಆಟಗಾರ್ತಿಯರು ವಿಶ್ವಕಪ್‌ ಅಭಿಯಾನ ಆರಂಭಿಸಲಿದ್ದಾರೆ.

ಈ ಬಾರಿ ಕರ್ನಾಟಕದ ನಿಕಿ ಪ್ರಸಾದ್ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. 16 ತಂಡಗಳು ಕಣದಲ್ಲಿದ್ದು, ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಫೆ. 2ರಂದು ಫೈನಲ್ ನಡೆಯಲಿದೆ.

ADVERTISEMENT

ಈ ಹಿಂದೆ ತಂಡ ಚಾಂಪಿಯನ್ ಆಗಿದ್ದಾಗ ಶೆಫಾಲಿ ವರ್ಮಾ ನಾಯಕಿಯಾಗಿದ್ದರು. ಆಗಿನ ತಂಡದಲ್ಲಿದ್ದ  ತಿತಾಸ್‌ ಸಾಧು, ಸ್ಪಿನ್ನರ್‌ ಮನ್ನತ್ ಕಶ್ಯಪ್‌ ಸೀನಿಯರ್ ತಂಡಕ್ಕೂ ಆಡಿದ್ದರು.

ತವರಿನಲ್ಲಿ ವರ್ಷಾಂತ್ಯದಲ್ಲಿ ಏಕದಿನ ವಿಶ್ವಕಪ್‌ ನಿಗದಿಯಾಗಿದ್ದು, ಇಲ್ಲಿ ಉತ್ತಮ ಪ್ರದರ್ಶನ ನೀಡಿ ಸೀನಿಯರ್ ತಂಡದಲ್ಲಿ ಆಡಲು ಆಟಗಾರ್ತಿಯರಿಗೆ ಅವಕಾಶವಿದೆ.

ಭಾರತ ತಂಡ ಹೀಗಿದೆ:

ನಿಕಿ ಪ್ರಸಾದ್ (ನಾಯಕಿ), ಸನಿಕಾ ಚಾಲ್ಕೆ (ಉಪನಾಯಕಿ), ಜಿ.ತ್ರಿಷಾ, ಕಮಲಿನಿ ಜಿ (ವಿಕೆಟ್‌ ಕೀಪರ್‌), ಭಾವಿಕಾ ಅಹಿರೆ (ವಿಕೆಟ್‌ ಕೀಪರ್‌), ಐಶ್ವರಿ ಅವಸರೆ, ಮಿಥಿಲಾ ವಿನೋದ್‌, ಜೋಶಿತಾ ವಿ.ಜೆ., ಸೋನಮ್ ಯಾದವ್‌, ಪರುಣಿಕಾ ಸಿಸೋಡಿಯಾ, ಕೇಸರಿ ದೃತಿ, ಆಯುಷಿ ಶುಕ್ಲಾ, ಅನಂದಿತಾ ಕಿಶೋರ್, ಎಂ.ಡಿ.ಶಬ್ನಮ್‌, ವೈಷ್ಣವಿ ಎಸ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.