ADVERTISEMENT

ENG vs IND: ಇಂಗ್ಲೆಂಡ್‌ನಲ್ಲಿ ಭಾರತದ ಸಾಧನೆ ಏನು? ಈವರೆಗಿನ ಫಲಿತಾಂಶ ಇಲ್ಲಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಜೂನ್ 2025, 6:29 IST
Last Updated 20 ಜೂನ್ 2025, 6:29 IST
<div class="paragraphs"><p>ಭಾರತ ತಂಡದ ನಾಯಕ ಶುಭಮನ್‌ ಗಿಲ್‌</p></div>

ಭಾರತ ತಂಡದ ನಾಯಕ ಶುಭಮನ್‌ ಗಿಲ್‌

   

ರಾಯಿಟರ್ಸ್‌ ಚಿತ್ರ

ಲೀಡ್ಸ್‌: ಇಂಗ್ಲೆಂಡ್‌ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್‌ ತಂಡವು, ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ.

ADVERTISEMENT

ಮಾಜಿ ನಾಯಕರಾದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಸ್ಪಿನ್‌ ದಿಗ್ಗಜ ಆರ್‌. ಅಶ್ವಿನ್‌ ಅವರ ವಿದಾಯದ ಬಳಿಕ ಕಣಕ್ಕಿಳಿಯುತ್ತಿರುವ ಟೀಂ ಇಂಡಿಯಾದ ಹೊಣೆಯನ್ನು ಯುವ ನಾಯಕ ಶುಭಮನ್‌ ಗಿಲ್‌ ಹೊತ್ತುಕೊಂಡಿದ್ದಾರೆ.

ಆತಿಥೇಯ ಇಂಗ್ಲೆಂಡ್‌ ತಂಡಕ್ಕೂ ದಿಗ್ಗಜ ವೇಗಿಗಳ ಅನುಪಸ್ಥಿತಿ ಕಾಡುವ ಸಾಧ್ಯತೆ ಇದೆ. ಜೇಮ್ಸ್‌ ಆ್ಯಂಡರ್ಸನ್‌, ಸ್ಟವರ್ಟ್‌ ಬ್ರಾಡ್‌ ಅನುಪಸ್ಥಿತಿಯಲ್ಲಿ ಆಡುವ ಒತ್ತಡ ಬೆನ್‌ ಸ್ಟೋಕ್ಸ್‌ ಬಳಗಕ್ಕಿದೆ.

ಹೀಗಾಗಿ, ಕೊರತೆಯನ್ನು ಮೀರಿ ನಿಲ್ಲುವ ಸವಾಲು ಎರಡೂ ತಂಡಗಳಿವೆ.

ಲೀಡ್ಸ್‌ನಲ್ಲಿ ಇಂದು (ಜೂನ್‌ 20) ಮೊದಲ ಟೆಸ್ಟ್ ಆರಂಭವಾಗಲಿದೆ.

ಇಂಗ್ಲೆಂಡ್‌ ತಂಡವನ್ನು ಅದರದ್ದೇ ತವರಿನಲ್ಲಿ ಈವರೆಗೆ ಕೇವಲ ಮೂರು ಬಾರಿ ಟೆಸ್ಟ್ ಸರಣಿಗಳಲ್ಲಿ ಮಾತ್ರವೇ ಮಣಿಸಿರುವ ಭಾರತ ತಂಡ, 18 ವರ್ಷಗಳ ನಂತರ ಮತ್ತೊಮ್ಮೆ ಆ ಸಾಧನೆ ಮಾಡುವ ಲೆಕ್ಕಾಚಾರದಲ್ಲಿದೆ.

ಉಭಯ ತಂಡಗಳು ಹೀಗಿವೆ

ಇಂಗ್ಲೆಂಡ್: ಬೆನ್ ಸ್ಟೋಕ್ಸ್ (ನಾಯಕ), ಜೆಮಿ ಸ್ಮಿತ್ (ವಿಕೆಟ್‌ಕೀಪರ್), ಕ್ರಿಸ್ ವೋಕ್ಸ್, ಬ್ರೈಡಮನ್ ಕೇರ್ಸ್, ಜೋಶ್ ಟಂಗ್, ಶೋಯಬ್ ಬಶೀರ್, ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಒಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಜೆಮಿ ಓವರ್ಟನ್‌, ಸ್ಯಾಮುಯೆಲ್‌ ಜೇಮ್ಸ್‌ ಕುಕ್‌, ಜೇಕೊಬ್‌ ಬೆಥೆಲ್‌

ಭಾರತ: ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ/ವಿಕೆಟ್‌ಕೀಪರ್), ಅಭಿಮನ್ಯು ಈಶ್ವರನ್, ಯಶಸ್ವಿ ಜೈಸ್ವಾಲ್, ಧ್ರುವ ಜುರೇಲ್, ಕರುಣ್  ನಾಯರ್, ಕೆ.ಎಲ್. ರಾಹುಲ್, ಸಾಯಿ ಸುದರ್ಶನ್, ರವೀಂದ್ರ ಜಡೇಜ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಆಕಾಶದೀಪ್, ಅರ್ಷದೀಪ್ ಸಿಂಗ್, ಜಸ್‌ಪ್ರೀತ್ ಬೂಮ್ರಾ, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧಕೃಷ್ಣ, ಶಾರ್ದೂಲ್ ಠಾಕೂರ್.

ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್‌ ಸರಣಿಗಳ ಫಲಿತಾಂಶ ಇಲ್ಲಿದೆ

  • 1932: ಇಂಗ್ಲೆಂಡ್‌ಗೆ ಜಯ 1-0 (1 ಟೆಸ್ಟ್‌)

  • 1936: ಇಂಗ್ಲೆಂಡ್‌ಗೆ ಜಯ 2-0 (3 ಟೆಸ್ಟ್‌)

  • 1946: ಇಂಗ್ಲೆಂಡ್‌ಗೆ ಜಯ 1-0 (3 ಟೆಸ್ಟ್‌)

  • 1952: ಇಂಗ್ಲೆಂಡ್‌ಗೆ ಜಯ 3-0 (4 ಟೆಸ್ಟ್‌)

  • 1959: ಇಂಗ್ಲೆಂಡ್‌ಗೆ ಜಯ 5-0 (5 ಟೆಸ್ಟ್‌)

  • 1967: ಇಂಗ್ಲೆಂಡ್‌ಗೆ ಜಯ 3-0 (3 ಟೆಸ್ಟ್‌)

  • 1971: ಭಾರತಕ್ಕೆ ಜಯ 1-0 (3 ಟೆಸ್ಟ್‌)

  • 1974: ಇಂಗ್ಲೆಂಡ್‌ಗೆ ಜಯ 3-0 (3 ಟೆಸ್ಟ್‌)

  • 1979: ಇಂಗ್ಲೆಂಡ್‌ಗೆ ಜಯ 1-0 (4 ಟೆಸ್ಟ್‌)

  • 1982: ಇಂಗ್ಲೆಂಡ್‌ಗೆ ಜಯ 1-0 (3 ಟೆಸ್ಟ್‌)

  • 1986: ಭಾರತಕ್ಕೆ ಜಯ 2-0 (3 ಟೆಸ್ಟ್‌)

  • 1990: ಇಂಗ್ಲೆಂಡ್‌ಗೆ ಜಯ 1-0 (3 ಟೆಸ್ಟ್‌)

  • 1996: ಇಂಗ್ಲೆಂಡ್‌ಗೆ ಜಯ 1-0 (3 ಟೆಸ್ಟ್‌)

  • 2002: ಡ್ರಾ 1-1 (4 ಟೆಸ್ಟ್‌)

  • 2007: ಭಾರತಕ್ಕೆ ಜಯ 1-0 (3 ಟೆಸ್ಟ್‌)

  • 2011: ಇಂಗ್ಲೆಂಡ್‌ಗೆ ಜಯ 4-0 (4 ಟೆಸ್ಟ್‌)

  • 2014: ಇಂಗ್ಲೆಂಡ್‌ಗೆ ಜಯ 3-1 (5 ಟೆಸ್ಟ್‌)

  • 2018: ಇಂಗ್ಲೆಂಡ್‌ಗೆ ಜಯ 4-1 (5 ಟೆಸ್ಟ್‌)

  • 2022: ಡ್ರಾ 2-2 (5 ಟೆಸ್ಟ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.