ADVERTISEMENT

Aus Vs Ind: 10 ವರ್ಷಗಳ ಬಳಿಕ ಬಾರ್ಡರ್–ಗವಾಸ್ಕರ್ ಟ್ರೋಫಿ ಕಳೆದುಕೊಂಡ ಭಾರತ

ಪಿಟಿಐ
Published 5 ಜನವರಿ 2025, 4:23 IST
Last Updated 5 ಜನವರಿ 2025, 4:23 IST
<div class="paragraphs"><p>ಭಾರತ ತಂಡ</p></div>

ಭಾರತ ತಂಡ

   

ಸಿಡ್ನಿ: ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಸೋಲುವ ಮೂಲಕ 10 ವರ್ಷಗಳ ಬಳಿಕ ಭಾರತ ಬಾರ್ಡರ್– ಗವಾಸ್ಕರ್ ಟ್ರೋಫಿಯನ್ನು ಕಳೆದುಕೊಂಡಿದೆ.

ಸರಣಿಯನ್ನು ಭಾರತ 1–3 ಅಂತರದಿಂದ ಸೋತಿದೆ. ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಿಂದಲೂ ಹೊರಬಿದ್ದಿದೆ.

ADVERTISEMENT

ಆಸ್ಟ್ರೇಲಿಯಾ ವಿರುದ್ಧದ ಈ ಹಿಂದಿನ ನಾಲ್ಕು ಸರಣಿಗಳಲ್ಲಿ ಭಾರತ ಗೆಲುವು ಸಾಧಿಸಿತ್ತು. ತವರಿನಲ್ಲಿ ಹಾಗೂ ಆಸ್ಟ್ರೇಲಿಯಾದಲ್ಲಿ ತಲಾ ಎರಡು ಸರಣಿಗಳನ್ನು ಭಾರತ ಗೆದ್ದಿತ್ತು.

ಪರ್ತ್‌ನಲ್ಲಿ ನಡೆದ ಸರಣಿ ಮೊದಲ ಪಂದ್ಯದಲ್ಲಷ್ಟೇ ಭಾರತ ಗೆಲುವು ಸಾಧಿಸಿತ್ತು.

ಕೊನೆಯ ಪಂದ್ಯದಲ್ಲಿ ಭಾರತ ನೀಡಿದ 162 ರನ್‌ಗಳನ್ನು ಕೇವಲ 27 ಓವರ್‌ಗಳಲ್ಲೇ ಆಸ್ಟ್ರೇಲಿಯಾ ಗುರಿ ಮುಟ್ಟಿತು. ಟ್ರಾವಿಸ್‌ ಹೆಡ್‌ (34) ಹಾಗೂ ಬ್ಯೂ ವೆಬ್‌ಸ್ಟರ್‌ (39) ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.