ADVERTISEMENT

ದ.ಆಫ್ರಿಕಾ ವಿರುದ್ಧ ಟಿ20 ಸರಣಿ; ತಂಡಕ್ಕೆ ಮರಳಿದ ಗಿಲ್, ಹಾರ್ದಿಕ್

ಪಿಟಿಐ
Published 3 ಡಿಸೆಂಬರ್ 2025, 14:00 IST
Last Updated 3 ಡಿಸೆಂಬರ್ 2025, 14:00 IST
<div class="paragraphs"><p>ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ</p></div>

ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ

   

ರಾಯಪುರ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟ್ವೆಂಟಿ-20 ಸರಣಿಗೆ ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂದು (ಬುಧವಾರ) ಪ್ರಕಟಿಸಿದೆ.

ಕುತ್ತಿಗೆ ನೋವಿನಿಂದ ಗುಣಮುಖರಾಗಿರುವ ಶುಭಮನ್ ಗಿಲ್ ತಂಡಕ್ಕೆ ಮರಳಿದ್ದಾರೆ. ಅದೇ ರೀತಿ ಗಾಯದಿಂದ ಚೇತರಿಸಿಕೊಂಡಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸಹ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

ADVERTISEMENT

ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಗಿಲ್ ಉಪನಾಯಕರಾಗಿದ್ದಾರೆ.

ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಆಲ್‌ರೌಂಡರ್‌ಗಳ ಸಾಲಿನಲ್ಲಿ ಹಾರ್ದಿಕ್ ಜೊತೆಗೆ ಶಿವಂ ದುಬೆ, ಅಕ್ಷರ್ ಪಟೇಲ್ ಹಾಗೂ ವಾಷಿಂಗ್ಟನ್ ಸುಂದರ್ ಇದ್ದಾರೆ.

ಸಂಜು ಸ್ಯಾಮ್ಸನ್ ಹಾಗೂ ಜಿತೇಶ್ ಶರ್ಮಾ ವಿಕೆಟ್ ಕೀಪರ್ ಬ್ಯಾಟರ್‌ಗಳ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ.

ಜಸ್‌ಪ್ರೀತ್ ಬೂಮ್ರಾ, ಅರ್ಷದೀಪ್ ಸಿಂಗ್ ಹಾಗೂ ಹರ್ಷೀತ್ ರಾಣಾ ತಂಡದಲ್ಲಿರುವ ವೇಗಿಗಳಾಗಿದ್ದಾರೆ. ಕುಲದೀಪ್ ಯಾದವ್, ವರುಣ್ ಚಕ್ರವರ್ತಿ ಸ್ಪಿನ್ನರ್‌ಗಳಾಗಿದ್ದಾರೆ.

ಭಾರತ ತಂಡ ಇಂತಿದೆ:

  • ಸೂರ್ಯಕುಮಾರ್ ಯಾದವ್ (ನಾಯಕ),

  • ಶುಭಮನ್ ಗಿಲ್ (ಉಪನಾಯಕ),

  • ಅಭಿಷೇಕ್ ಶರ್ಮಾ,

  • ಹಾರ್ದಿಕ್ ಪಾಂಡ್ಯ,

  • ಶಿವಂ ದುಬೆ,

  • ಅಕ್ಷರ್ ಪಟೇಲ್,

  • ಜಿತೇಶ್ ಪಟೇಲ್ (ವಿಕೆಟ್ ಕೀಪರ್),

  • ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್),

  • ಜಸ್‌ಪ್ರೀತ್ ಬೂಮ್ರಾ,

  • ವರುಣ್ ಚಕ್ರವರ್ತಿ,

  • ಅರ್ಷದೀಪ್ ಸಿಂಗ್,

  • ಕುಲದೀಪ್ ಯಾದವ್,

  • ಹರ್ಷೀತ್ ರಾಣಾ,

  • ವಾಷಿಂಗ್ಟನ್ ಸುಂದರ್.

ಟಿ20 ಸರಣಿ ವೇಳಾಪಟ್ಟಿ ಇಂತಿದೆ:

ಡಿ. 9: ಮೊದಲ ಟಿ20, ಕಟಕ್

ಡಿ.11: 2ನೇ ಟಿ20, ಚಂಡೀಗಡ

ಡಿ.14: 3ನೇ ಟಿ20, ಧರ್ಮಶಾಲಾ

ಡಿ.17: 4ನೇ ಟಿ20, ಲಖನೌ

ಡಿ.19: ಅಂತಿಮ ಟಿ20, ಅಹಮದಾಬಾದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.