ADVERTISEMENT

ಜುಲೈನಲ್ಲಿ ಭಾರತ–ವಿಂಡೀಸ್ ಕ್ರಿಕೆಟ್ ಸರಣಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 13:03 IST
Last Updated 2 ಜೂನ್ 2022, 13:03 IST
ರೋಹಿತ್ ಶರ್ಮಾ 
ರೋಹಿತ್ ಶರ್ಮಾ    

ನವದೆಹಲಿ: ಭಾರತ ಕ್ರಿಕೆಟ್ ತಂಡವು ಜುಲೈ 22 ರಿಂದ ಆಗಸ್ಟ್ 7ರವರಗೆ ವೆಸ್ಟ್‌ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ.

ಉಭಯ ತಂಡಗಳು ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳ ಸರಣಿಗಳನ್ನು ಆಡಲಿವೆ. ಟ್ರಿನಿಡಾಡ್, ಟೊಬ್ಯಾಗೊ ಮತ್ತು ಸೇಂಟ್ ಕಿಟ್ಸ್‌ – ನೇವಿಸ್ ನಲ್ಲಿ ಏಕದಿನ ಸರಣಿ ಮತ್ತು ಮೂರು ಟಿ20 ಪಂದ್ಯಗಳು ನಡೆಯಲಿವೆ. ಅಮೆರಿಕದ ಫ್ಲಾರಿಡಾದ ಫೋರ್ಟ್ ಲಾಡರ್‌ಹಿಲ್ ನಲ್ಲಿ ಎರಡು ಟಿ20 ಪಂದ್ಯಗಳ ಆಯೋಜಿಸಲಾಗುವುದು.

ಜುಲೈ 22 ರಿಂದ 27ರವರೆಗೆ ಮೂರು ಏಕದಿನ ಪಂದ್ಯಗಳು ನಡೆಯಲಿವೆ. 29ರಂದು ಪೋರ್ಟ್ ಆಫ್‌ ಸ್ಪೇನ್‌ನಲ್ಲಿರುವ ಬ್ರಯನ್ ಲಾರಾ ಕ್ರೀಡಾಂಗಣದಲ್ಲಿ 29ರಂದು ಮೊದಲ ಟಿ20 ನಡೆಯಲಿದೆ.

ADVERTISEMENT

‘ಈ ವರ್ಷ ಟಿ20 ವಿಶ್ವಕಪ್ ಹಾಗೂ ಮುಂದಿನ ವರ್ಷ ಏಕದಿನ ವಿಶ್ವಕಪ್ ಟೂರ್ನಿಗಳು ನಡೆಯಲಿವೆ. ಆದ್ದರಿಂದ ಈ ದ್ವಿಪಕ್ಷೀಯ ಸರಣಿಯು ಪೂರ್ವಾಭ್ಯಾಸಕ್ಕೆ ವೇದಿಕೆಯಾಗಲಿವೆ’ ಎಂದು ವೆಸ್ಟ್ ಇಂಡೀಸ್ ತಂಡದ ನಾಯಕ ನಿಕೊಲಸ್ ಪೂರನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.