ADVERTISEMENT

‘ಬಾಕ್ಸಿಂಗ್‌’ ಗೆದ್ದ ಭಾರತ: ವಿರಾಟ್ ಪಡೆಗೆ 2–1ರ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2018, 4:40 IST
Last Updated 30 ಡಿಸೆಂಬರ್ 2018, 4:40 IST
ಗೆಲುವಿನ ಸಂಭ್ರಮದಲ್ಲಿ ಭಾರತ ತಂಡದ ಆಟಗಾರರು
ಗೆಲುವಿನ ಸಂಭ್ರಮದಲ್ಲಿ ಭಾರತ ತಂಡದ ಆಟಗಾರರು   

ಮೆಲ್ಬರ್ನ್:ಆಸ್ಟ್ರೇಲಿಯಾ ಎದುರಿನ ಮೂರನೇ ಟೆಸ್ಟ್‌ ಪಂದ್ಯಲ್ಲಿ137 ರನ್‌ಗಳ ಅಂತರದ ಗೆಲುವು ಸಾಧಿಸಿರುವ ಭಾರತ ತಂಡ ‘ಬಾರ್ಡರ್‌–ಗವಾಸ್ಕರ್‌ ಟೆಸ್ಟ್‌ಸರಣಿ’ಯಲ್ಲಿ ಗೆಲುವಿನ ಅಂತರವನ್ನು 2–1ಕ್ಕೆ ಏರಿಸಿಕೊಂಡಿದೆ.

ಮೊದಲ ಇನಿಂಗ್ಸ್‌ನಲ್ಲಿ ಏಳು ವಿಕೆಟ್‌ ಕಳೆದುಕೊಂಡು 443 ರನ್‌ಗಳಿಸಿದ್ದ ಭಾರತಆಸ್ಟ್ರೇಲಿಯನ್ನರನ್ನು ಕೇವಲ151ರನ್‌ಗಳಿಗೆ ಕಟ್ಟಿ ಹಾಕಿತ್ತು. ಇದರೊಂದಿಗೆ292ರನ್‌ಗಳ ಬೃಹತ್‌ ಮುನ್ನಡೆ ಪಡೆದು ಎರಡನೇ ಇನಿಂಗ್ಸ್‌ ಆರಂಭಿಸಿದ್ದ ವಿರಾಟ್‌ ಕೊಹ್ಲಿ ಪಡೆಯು ಬ್ಯಾಟಿಂಗ್‌ನಲ್ಲಿ ಹಿನ್ನಡೆ ಅನುಭವಿಸಿತ್ತು.8 ವಿಕೆಟ್‌ ಕಳೆದುಕೊಂಡು ಕೇವಲ 106ರನ್‌ಗಳಿಸಿದ್ದಾಗ ಇನಿಂಗ್ಸ್ ಡಿಕ್ಲೇರ್‌ ಮಾಡಿಕೊಂಡಿತ್ತು.

ಬಾಕ್ಸಿಂಗ್‌ ಡೇ ಪಂದ್ಯ ಗೆಲ್ಲಲು ಭಾರತ ನೀಡಿದ್ದ ಒಟ್ಟಾರೆ 399 ರನ್‌ಗಳ ಗುರಿ ಎದುರು ಆಸಿಸ್‌ ಆಟ ಮಂಕಾಯಿತು. ಬೌಲಿಂಗ್‌ ಆಲ್ರೌಂಡರ್‌ ಪ್ಯಾಟ್ ಕಮಿನ್ಸ್‌ ಮಾತ್ರ ತಮ್ಮ ತಂಡವನ್ನು ಸೋಲಿನಿಂದ ಪಾರು ಮಾಡಲು ಪ್ರಯತ್ನಿಸಿದರು.ಈ ಟೆಸ್ಟ್‌ನಲ್ಲಿ ಆಸಿಸ್‌ ಪರ ಏಕೈಕ ಅರ್ಧಶತಕ ದಾಖಲಿಸಿದ ಪ್ಯಾಟ್‌, ಟೆಸ್ಟ್‌ ಕ್ರಿಕೆಟ್‌ ಜೀವನದ ವೈಯಕ್ತಿಕ ಎರಡನೇ ಅರ್ಧಶತಕ ಸಿಡಿಸಿದರು.

ADVERTISEMENT

ನಾಲ್ಕನೇ ದಿನಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸತತ ವಿಕೆಟ್‌ ಒಪ್ಪಿಸಿದರೂ ಸಾಹಸಮಯ ಬ್ಯಾಟಿಂಗ್‌ ಪ್ರದರ್ಶಿಸಿದ ಪ್ಯಾಟ್‌ಒಟ್ಟಾರೆ 114 ಎಸೆತಗಳನ್ನು ಎದುರಿಸಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಹಿತ 63 ರನ್‌ ಗಳಿಸಿದರು. ಅವರ ಹೋರಾಟದಿಂದಾಗಿ ಭಾರತದ ಗೆಲುವು ಕೊನೆಯ ದಿನಕ್ಕೆ ಮುಂದೂಡಲ್ಪಟ್ಟಿತ್ತು.

ನಾಲ್ಕನೇ ದಿನದಾಟದ ಅಂತ್ಯಕ್ಕೆ 85 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 258ರನ್‌ಗಳಿಸಿದ್ದ ಆಸ್ಟ್ರೇಲಿಯಾದ ಆಟ ಐದನೇ ದಿನ ಕೇವಲ 4.3 ಓವರ್‌ಗಳಲ್ಲಿ ಮುಕ್ತಾಯವಾಯಿತು. ವೇಗಿ ಬೂಮ್ರಾ ಎಸೆತದಲ್ಲಿ ಪ್ಯಾಟ್‌ ಕಮಿನ್ಸ್‌ ಪೂಜಾರಗೆ ಕ್ಯಾಚ್‌ ನೀಡಿ ನಿರ್ಗಮಿಸಿದರೆ, ಇಶಾಂತ್‌ ಶರ್ಮಾ ನೇಥನ್‌ ಲಯನ್‌ಗೆ ಪೆವಿಲಿಯನ್‌ ದಾರಿ ತೋರಿದರು.

ಮೊದಲ ಇನಿಂಗ್ಸ್‌

ಭಾರತ: 7 ವಿಕೆಟ್‌ಗೆ 443 ರನ್‌

ಆಸ್ಟ್ರೇಲಿಯಾ:151ರನ್‌ಗಳಿಗೆ ಆಲೌಟ್‌

ಎರಡನೇ ಇನಿಂಗ್ಸ್‌

ಭಾರತ: 8 ವಿಕೆಟ್‌ಗೆ 106 ರನ್‌

ಆಸ್ಟ್ರೇಲಿಯಾ: 261 ರನ್‌ಗಳಿಗೆ ಆಲೌಟ್‌

ಪಂದ್ಯ ಶ್ರೇಷ್ಠ: ಜಸ್‌ಪ್ರೀತ್‌ ಬೂಮ್ರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.