
ಕ್ರಿಕೆಟ್
(ಸಾಂಕೇತಿಕ ಚಿತ್ರ)
ಬ್ರಿಸ್ಬೇನ್: ವೇಗದ ಬೌಲರ್ ದೀಪೇಶ್ ದೇವೇಂದ್ರನ್ ಅವರ ಐದು ವಿಕೆಟ್ ಗೊಂಚಲಿನ ನೆರವಿನಿಂದ ಭಾರತ 19 ವರ್ಷದೊಳಗಿನವರ ತಂಡ ಮೊದಲ ಯೂತ್ ಟೆಸ್ಟ್ ಪಂದ್ಯದ ಮೊದಲ ದಿನವಾದ ಮಂಗಳವಾರ ಆಸ್ಟ್ರೇಲಿಯಾ 19 ವರ್ಷದೊಳಗಿನವರ ತಂಡವನ್ನು 243 ರನ್‌ಗಳಿಗೆ ಆಲೌಟ್ ಮಾಡಿತು.
ತಮಿಳುನಾಡಿನ 17 ವರ್ಷ ವಯಸ್ಸಿನ ದೀಪೇಶ್ 16.2 ಓವರುಗಳಲ್ಲಿ 45 ರನ್ನಿಗೆ 5 ವಿಕೆಟ್ ಪಡೆದು ಗಮನಸೆಳೆದರು. ಕಿಶನ್ ಕುಮಾರ್ 48 ರನ್ನಿಗೆ 3 ವಿಕೆಟ್ ಪಡೆದು ಅವರಿಗೆ ಬೆಂಬಲ ನೀಡಿದರು. ಆತಿಥೇಯ ತಂಡದ ಪರ ಮೂರನೇ ಕ್ರಮಾಂಕದ ಆಟಗಾರ ಸ್ಟೀವನ್ ಹಾಗನ್ ಸಹನೆಯ ಆಟವಾಡಿ 246 ಎಸೆತಗಳಲ್ಲಿ 92 ರನ್ ಬಾರಿಸಿ ಅತಿ ಹೆಚ್ಚಿನ ಕಾಣಿಕೆ ನೀಡಿದರು.
ಸ್ಕೋರುಗಳು: ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ ಅಂಡರ್ 19: 91.2 ಓವರುಗಳಲ್ಲಿ 243 (ಸ್ಟೀವ್ ಹಾಗನ್ 92, ಝೆಡ್ ಹಾಲಿಕ್ 38; ದೀಪೇಶ್ ದೇವೇಂದ್ರನ್ 45ಕ್ಕೆ5, ಕಿಶನ್ ಕುಮಾರ್ 48ಕ್ಕೆ3) ವಿರುದ್ಧ ಭಾರತ ಅಂಡರ್ 19.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.