ರಾಜ್‌ಕೋಟ್ : ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರಿಗೆ ಶುಕ್ರವಾರ ಬ್ಯಾಟಿಂಗ್ ಮಾಡುವಾಗ ಪಕ್ಕೆಲುಬಿಗೆ ಚೆಂಡು ಬಿದ್ದು ಪೆಟ್ಟಾಗಿದೆ.
ಇಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಅವರು ಬ್ಯಾಟಿಂಗ್ ಮಾಡುವಾಗ ಪ್ಯಾಟ್ ಕಮಿನ್ಸ್ ಹಾಕಿದ ಹತ್ತನೇ ಓವರ್‌ನಲ್ಲಿ ಬೌನ್ಸರ್ ಎಸೆತವೊಂದು ಬಡಿಯಿತು. ನೋವಿನಲ್ಲಿಯೂ ಆಟ ಮುಂದುವರಿಸಿದ ಅವರು 96 ರನ್ ಗಳಿಸಿ ಔಟಾದರು. ಅದರಿಂದಾಗಿ ಅವರು ಫೀಲ್ಡಿಂಗ್ ಮಾಡಲಿಲ್ಲ. ಬದಲಿಗೆ ಯಜುವೇಂದ್ರ ಚಾಹಲ್ ಆಡಿದರು.
ಮುಂಬೈನಲ್ಲಿ ನಡೆದಮೊದಲ ಪಂದ್ಯದಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್‌ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಕಮಿನ್ಸ್ ಎಸೆತ ಬೌನ್ಸರ್ ಹೆಲ್ಮೆಟ್‌ಗೆ ಬಡಿದಿತ್ತು. ಹೀಗಾಗಿ ಅವರ ಬದಲು ಕೆ.ಎಲ್.ರಾಹುಲ್ ವಿಕೆಟ್ ಕೀಪಿಂಗ್ ಜವಬ್ದಾರಿ ನಿರ್ವಹಿಸಿದ್ದರು.
ಸದ್ಯ ಚಿಕಿತ್ಸೆ ಪಡೆಯುತ್ತಿರುವ ಅವರು ಎರಡನೇ ಪಂದ್ಯಕ್ಕೆ ಅಲಭ್ಯರಾಗಿದ್ದರು. ಮೂರನೇ ಪಂದ್ಯದಲ್ಲಿ ಆಡುವ ಬಗ್ಗೆ ಸದ್ಯ ಮಾಹಿತಿ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.