ADVERTISEMENT

IND vs ENG 1st ODI Gallery: ಆಲ್‌ರೌಂಡ್ ಆಟ; ಇಂಗ್ಲೆಂಡ್ ಎದುರು ಗೆದ್ದ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಫೆಬ್ರುವರಿ 2025, 16:03 IST
Last Updated 6 ಫೆಬ್ರುವರಿ 2025, 16:03 IST
<div class="paragraphs"><p>ಭಾರತ ಹಾಗೂ ಇಂಗ್ಲೆಂಡ್ ನಡುವಣ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಿದ ಅಭಿಮಾನಿಗಳು</p></div>

ಭಾರತ ಹಾಗೂ ಇಂಗ್ಲೆಂಡ್ ನಡುವಣ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಿದ ಅಭಿಮಾನಿಗಳು

   

ಪಿಟಿಐ ಚಿತ್ರ

ನಾಗಪುರ: ಸಂಘಟಿತ ಪ್ರದರ್ಶನ ನೀಡಿದ ಭಾರತ ಕ್ರಿಕೆಟ್‌ ತಂಡ, ಇಂಗ್ಲೆಂಡ್‌ ಎದುರಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 4 ವಿಕೆಟ್‌ ಅಂತರದ ಗೆಲುವು ಸಾಧಿಸಿದೆ.

ADVERTISEMENT

ನಾಗಪುರದಲ್ಲಿರುವ ವಿದರ್ಭ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಂಗ್ಲರ ಬಳಗ, 47.4 ಓವರ್‌ಗಳಲ್ಲಿ 248 ರನ್‌ ಗಳಿಸಿ ಆಲೌಟ್‌ ಆಯಿತು.

ಈ ಗುರಿ ಬೆನ್ನತ್ತಿದ ಟೀಂ ಇಂಡಿಯಾ, ಇನ್ನೂ 68 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ಗೆ 251 ರನ್ ಗಳಿಸಿ ಜಯದ ನಗೆ ಬೀರಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1–0 ಅಂತರದ ಮುನ್ನಡೆ ಸಾಧಿಸಿದೆ. ಮುಂದಿನ ಪಂದ್ಯವು ಕಟಕ್‌ನಲ್ಲಿ ಭಾನುವಾರ (ಫೆ.9ರಂದು) ನಡೆಯಲಿದೆ.

ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಹಾಗೂ ಇಂಗ್ಲೆಂಡ್‌ನ ಜಾಸ್‌ ಬಟ್ಲರ್‌ ಟಾಸ್‌ ವೇಳೆ 

ಇಂಗ್ಲೆಂಡ್‌ ಪರ ಇನಿಂಗ್ಸ್‌ ಆರಂಭಿಸಿ ಬೆನ್‌ ಡಕೆಟ್‌ ಹಾಗೂ ಫಿಲ್‌ ಸಾಲ್ಟ್

ಬೆನ್‌ ಡಕೆಟ್‌ ಕ್ಯಾಚ್‌ ಪಡೆಯುತ್ತಿರುವ ಯಶಸ್ವಿ ಜೈಸ್ವಾಲ್‌

ಅಂತರ ರಾಷ್ಟ್ರೀಯ ಏಕದಿನ ಕ್ರಿಕೆಟ್‌ ಮೊದಲ ಕ್ಯಾಚ್‌ ಪಡೆದ  ಸಂಭ್ರಮದಲ್ಲಿ ಯಶಸ್ವಿ ಜೈಸ್ವಾಲ್‌

ಅಂತರ ರಾಷ್ಟ್ರೀಯ ಏಕದಿನ ಕ್ರಿಕೆಟ್‌ ಚೊಚ್ಚಲ (ಬೆನ್‌ ಡಕೆಟ್‌) ವಿಕೆಟ್‌ ಸಂಭ್ರಮದಲ್ಲಿ ಹರ್ಷಿತ್‌ ರಾಣಾ

ಅರ್ಧಶತಕ ಗಳಿಸಿದ ಜಾಸ್‌ ಬಟ್ಲರ್‌

ಪದಾರ್ಪಣೆ ಪಂದ್ಯದಲ್ಲೇ ಮೂರು ವಿಕೆಟ್‌ ಪಡೆದ ಹರ್ಷಿತ್‌ ರಾಣಾ, ಬೌಲಿಂಗ್‌ ವೇಳೆ ಕಾಣಿಸಿದ್ದು ಹೀಗೆ

ರವೀಂದ್ರ ಜಡೇಜ ಮೂರು ಹಾಗೂ ಅಕ್ಷರ್‌ ಪಟೇಲ್ ಒಂದು ವಿಕೆಟ್‌ ಕಿತ್ತರು

ವಿಕೆಟ್‌ ಪಡೆದ ಅನುಭವಿ ಮೊಹಮ್ಮದ್‌ ಶಮಿಗೆ ಸಹ ಆಟಗಾರರ ಅಭಿನಂದನೆ

ಕೇವಲ 2 ರನ್‌ ಗಳಿಸಿ ಪೆವಿಲಿಯನ್‌ನತ್ತ ಹೊರಟ ರೋಹಿತ್‌ ಶರ್ಮಾ

ಉತ್ತಮ ಜೊತೆಯಾಟವಾಡಿದ ಶುಭಮನ್‌ ಗಿಲ್‌ ಹಾಗೂ ಶ್ರೇಯಸ್‌ ಅಯ್ಯರ್‌

87 ರನ್‌ ಗಳಿಸಿ, ಶತಕದ ಹೊಸ್ತಿಲಲ್ಲಿ ಔಟಾದ ಶುಭಮನ್‌ ಗಿಲ್‌

ಬ್ಯಾಟಿಂಗ್‌ ವೇಳೆ ಗಾಯಗೊಂಡ ಶುಭಮನ್‌ ಗಿಲ್‌

ಅರ್ಧಶತಕ (52 ರನ್‌) ಗಳಿಸಿದ ಅಕ್ಷರ್ ಪಟೇಲ್

ಭಾರತದ ಗೆಲುವಿಗೆ 59 ರನ್‌ಗಳ ಉಪಯುಕ್ತ ಕೊಡುಗೆ ನೀಡಿದ ಶ್ರೇಯಸ್‌ ಅಯ್ಯರ್‌

ಗೆಲುವಿನ ಲೆಕ್ಕ ಚುಕ್ತಾ ಗೊಳಿಸಿದ ಹಾರ್ದಿಕ್‌ ಪಾಂಡ್ಯ ಹಾಗೂ ರವೀಂದ್ರ ಜಡೇಜ

ಪಂದ್ಯದ ಬಳಿಕ ಉಭಯ ತಂಡದ ನಾಯಕರು ಕೈಕುಲುಕಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.