ADVERTISEMENT

2nd Test: ದ.ಆಫ್ರಿಕಾ ಬ್ಯಾಟಿಂಗ್; ಗಿಲ್ ಅನುಪಸ್ಥಿತಿಯಲ್ಲಿ ಪಂತ್‌ಗೆ ತಂಡದ ಹೊಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ನವೆಂಬರ್ 2025, 4:27 IST
Last Updated 22 ನವೆಂಬರ್ 2025, 4:27 IST
<div class="paragraphs"><p>ಟಾಸ್‌ ವೇಳೆ ರಿಷಭ್‌ ಪಂತ್‌ ಮತ್ತು ತೆಂಬಾ ಬವುಮಾ</p></div>

ಟಾಸ್‌ ವೇಳೆ ರಿಷಭ್‌ ಪಂತ್‌ ಮತ್ತು ತೆಂಬಾ ಬವುಮಾ

   

ಕೃಪೆ: ಪಿಟಿಐ

ಗುವಾಹಟಿ: ನಾಯಕ ಶುಭಮನ್‌ ಗಿಲ್‌ ಅವರು ಇನ್ನೂ ಫಿಟ್‌ ಆಗಿಲ್ಲದ ಕಾರಣ, ಉಪನಾಯಕ ರಿಷಭ್‌ ಪಂತ್‌ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.

ADVERTISEMENT

ಪಂದ್ಯವು ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಪಂತ್‌ ಅವರು ಟೆಸ್ಟ್ ತಂಡದ ನಾಯಕನಾಗಿ ತವರಿನಲ್ಲಿ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ.

ಟಾಸ್‌ ಗೆದ್ದಿರುವ ದಕ್ಷಿಣ ಆಫ್ರಿಕಾ ಬ್ಯಾಟಿಂಗ್‌ ಆಯ್ದುಕೊಂಡಿದ್ದು, 10 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 26 ರನ್‌ ಗಳಿಸಿದೆ. ಆರಂಭಿಕರಾದ ಏಡನ್ ಮರ್ಕರಂ (11 ರನ್‌), ರಿಯಾನ್ ರಿಕೆಲ್ಟನ್ (7 ರನ್‌) ಕ್ರೀಸ್‌ನಲ್ಲಿದ್ದಾರೆ.

ಐತಿಹಾಸಿಕ ಸಾಧನೆಯ ಮೇಲೆ ಆಫ್ರಿಕಾ ಕಣ್ಣು
ಸರಣಿಯ ಮೊದಲ ಪಂದ್ಯವು ಕೋಲ್ಕತ್ತದ ಈಡನ್‌ ಗಾರ್ಡನ್ಸ್‌ನಲ್ಲಿ ನಡೆದಿತ್ತು. ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 30 ರನ್‌ಗಳ ಮುನ್ನಡೆ ಸಾಧಿಸಿದರೂ, ಎರಡನೇ ಇನಿಂಗ್ಸ್‌ನಲ್ಲಿ ಹರಿಣಗಳ ಸ್ಪಿನ್‌ ದಾಳಿಗೆ ಸಿಲುಕಿ ಅಷ್ಟೇ ರನ್‌ ಅಂತರದಿಂದ ಸೋಲೊಪ್ಪಿಕೊಂಡಿತು.

ನಾಯಕ ಗಿಲ್‌ ಗಾಯಗೊಂಡದ್ದು ಭಾರತಕ್ಕೆ ಹಿನ್ನಡೆಯಾಯಿತು.

ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿರುವ ಪ್ರವಾಸಿ ಬಳಗ, ಒಂದೊಮ್ಮೆ ಗುವಾಹಟಿ ಪಂದ್ಯವನ್ನೂ ಗೆದ್ದರೆ 25 ವರ್ಷಗಳ ನಂತರ ಭಾರತದ ನೆಲದಲ್ಲಿ ಸರಣಿ ಗೆದ್ದ ಸಾಧನೆ ಮಾಡಲಿದೆ.

ಹೀಗಾಗಿ, ಎರಡನೇ ಪಂದ್ಯವನ್ನು ಗೆಲ್ಲುವುದು ಪಂತ್‌ ಪಡೆಗೆ ಅನಿವಾರ್ಯವಾಗಿದೆ.

ಹನ್ನೊಂದರ ಬಳಗ
ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಗಿಲ್‌ ಅಲಭ್ಯರಾಗಿರುವ ಕಾರಣ, ಯುವ ಆಟಗಾರ ಸಾಯಿ ಸುದರ್ಶನ್‌ ಸ್ಥಾನ ಪಡೆದಿದ್ದಾರೆ. ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ಬದಲು ನಿತೀಶ್‌ ಕುಮಾರ್‌ ರೆಡ್ಡಿಗೆ ಅವಕಾಶ ನೀಡಲಾಗಿದೆ. ಹರಿಣಗಳ ಬಳಗದಲ್ಲೂ ಒಂದು ಬದಲಾವಣೆ ಮಾಡಲಾಗಿದೆ. ಕಾರ್ಬಿನ್‌ ಬಾಷ್‌ ಬದಲು ಸೆನುರಾನ್‌ ಮುತ್ತುಸಾಮಿ ಕಣಕ್ಕಿಳಿದಿದ್ದಾರೆ.

ಭಾರತ: ಕೆ.ಎಲ್‌. ರಾಹುಲ್‌, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್‌, ಧ್ರುವ ಜುರೇಲ್‌ (ವಿಕೆಟ್‌ ಕೀಪರ್‌), ರಿಷಭ್‌ ಪಂತ್‌ (ನಾಯಕ), ರವೀಂದ್ರ ಜಡೇಜ, ನಿತೀಶ್‌ ಕುಮಾರ್‌ ರೆಡ್ಡಿ, ವಾಷಿಂಗ್ಟನ್‌ ಸುಂದರ್‌, ಕುಲದೀಪ್‌ ಯಾದವ್‌, ಜಸ್‌ಪ್ರೀತ್‌ ಬೂಮ್ರಾ, ಮೊಹಮ್ಮದ್ ಸಿರಾಜ್‌

ದಕ್ಷಿಣ ಆಫ್ರಿಕಾ: ಏಡನ್ ಮರ್ಕರಂ, ರಿಯಾನ್ ರಿಕೆಲ್ಟನ್, ತೆಂಬಾ ಬವುಮಾ (ನಾಯಕ), ಟ್ರಿಸ್ಟನ್ ಸ್ಟಬ್ಸ್, ಕೈಲ್ ವೆರೆಯೆನ್ (ವಿಕೆಟ್‌ ಕೀಪರ್‌), ಟೋನಿ ಡಿ ಝಾರ್ಜಿ, ಸೆನುರನ್ ಮುತ್ತು ಸಾಮಿ, ವಿಯಾನ್ ಮಲ್ದರ್, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್, ಸಿಮೊನ್ ಹಾರ್ಮೆರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.