ADVERTISEMENT

ಮೂರನೇ ಟೆಸ್ಟ್‌| ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭಾರಿ ಅಂತರದ ಜಯ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2019, 5:57 IST
Last Updated 22 ಅಕ್ಟೋಬರ್ 2019, 5:57 IST
   

ರಾಂಚಿ: ದಕ್ಷಿಣ ಆಫ್ರಿಕಾ ಎದುರಿನ ಮೂರನೇಟೆಸ್ಟ್‌ ಪಂದ್ಯದಲ್ಲಿ ಭಾರತಇನ್ನಿಂಗ್ಸ್‌ ಹಾಗೂ,202 ರನ್‌ಗಳ ಭಾರಿ ಮೊತ್ತದ ಗೆಲುವು ದಾಖಲಿಸಿರುವಭಾರತಸರಣಿಯನ್ನು ‘ಕ್ಲೀನ್‌ ಸ್ವೀಪ್‌’ ಮಾಡಿದೆ.

ಅಂತಿಮ ಟೆಸ್ಟ್‌ನಲ್ಲಿ ಗೆದ್ದು ಗೌರವ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಭಾರಿ ಮುಖಭಂಗವಾಗಿದೆ. ಸೋಮವಾರ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ46 ಓವರ್‌ಗಳಲ್ಲಿ 8 ವಿಕೆಟ್‌ಗೆ 132ರನ್‌ ಗಳಿಸಿ ಶೋಚನೀಯ ಪರಿಸ್ಥಿತಿಯಲ್ಲಿದ್ದದಕ್ಷಿಣ ಆಫ್ರಿಕ, ಮಂಗಳವಾರ ಕೇವಲ ಎರಡು ಓವರ್‌ಗಳಲ್ಲಿ ಮಿಕ್ಕೆರೆಡು ವಿಕೆಟ್‌ಗಳನ್ನು ಕಳೆದುಕೊಂಡು ಭಾರತಕ್ಕೆ ಶರಣಾಯಿತು.

ಸೋಮವಾರ ಭಾರತದ ವೇಗಿಗಳಾದ ಉಮೇಶ್‌ ಯಾದವ್‌ ಮತ್ತು ಮೊಹಮ್ಮದ್‌ ಶಮಿ ಆಘಾತ ನೀಡಿದ್ದರು. ಸ್ಪಿನ್ನರ್‌ಗಳಾದ ರವೀಂದ್ರ ಜಡೇಜ ಮತ್ತು ಶಹಬಾಜ್‌ ನದೀಮ್‌ ಕೂಡ ಮೋಡಿ ಮಾಡಿದರು. ಹೀಗಾಗಿ ಮೂರನೆ ದಿನವೇ ಫಾಫ್‌ ಡು ಪ್ಲೆಸಿ ಪಡೆಯು ಒಟ್ಟು 16 ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದೆ.

ADVERTISEMENT

ಇದಕ್ಕೂ ಮೊದಲು ಎರಡು ವಿಕೆಟ್‌ಗೆ ಒಂಬತ್ತು ರನ್‌ಗಳಿಂದ ಮೊದಲ ಇನಿಂಗ್ಸ್‌ನ ಆಟ ಮುಂದುವರಿಸಿದ್ದ ದಕ್ಷಿಣ ಆಫ್ರಿಕಾ, 56.2 ಓವರ್‌ಗಳಲ್ಲಿ 162ರನ್‌ಗಳಿಗೆ ಆಲೌಟ್‌ ಆಯಿತು.

ಫಾಲೋ ಆನ್‌ ಪಡೆದು ಎರಡನೇ ಇನಿಂಗ್ಸ್‌ ಆರಂಭಿಸಿದ ಪ್ರವಾಸಿ ಪಡೆಯು ಮತ್ತೆ ಬ್ಯಾಟಿಂಗ್‌ ವೈಫಲ್ಯ ಕಂಡಿತು. ಕ್ವಿಂಟನ್‌ ಡಿ ಕಾಕ್‌ (5), ಜುಬೇರ್‌ ಹಮ್ಜಾ (0), ಡು ಪ್ಲೆಸಿ (4), ತೆಂಬಾ ಬವುಮಾ (0) ಮತ್ತು ಹೆನ್ರಿಕ್‌ ಕ್ಲಾಸೆನ್‌ (5) ಒಂದಂಕಿ ಮೊತ್ತಕ್ಕೆ ಔಟಾದರು. ಹೀಗಾಗಿ ದಿನದಾಟದ ಅಂತ್ಯಕ್ಕೆ ತಂಡವು 48 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್‌ ಕಳೆದುಕೊಂಡು133ರನ್‌ ಕಲೆಹಾಕಲಷ್ಟೇ ಶಕ್ತವಾಯಿತು. ದಕ್ಷಿಣ ಆಫ್ರಿಕಾವು 2002ರ ನಂತರ ಮೊದಲ ಸಲ ಸತತ ಎರಡು ಟೆಸ್ಟ್‌ ಪಂದ್ಯಗಳಲ್ಲಿ ಫಾಲೋ ಆನ್‌ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.