ADVERTISEMENT

IND vs WI: ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ: ವಿಂಡೀಸ್‌ಗೆ ಆರಂಭಿಕ ಆಘಾತ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 14:00 IST
Last Updated 6 ಡಿಸೆಂಬರ್ 2019, 14:00 IST
   

ಹೈದರಾಬಾದ್‌: ಭಾರತ–ವೆಸ್ಟ್‌ ಇಂಡೀಸ್‌ ಟಿ20 ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್‌ ಆರಂಭಿಸಿರುವ ಪ್ರವಾಸಿ ವಿಂಡೀಸ್‌ ಬಳಗಕ್ಕೆ ದೀಪಕ್‌ ಚಾಹರ್‌ ಆರಂಭಿಕ ಆಘಾತ ನೀಡಿದರು.

ಇಲ್ಲಿನರಾಜೀವಗಾಂಧಿ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದವಿರಾಟ್‌ ಕೊಹ್ಲಿ, ಪೊಲಾರ್ಡ್‌ ಪಡೆಗೆ ಬ್ಯಾಟಿಂಗ್‌ ಬಿಟ್ಟುಕೊಟ್ಟರು. ಬ್ಯಾಟಿಂಗ್‌ ಆರಂಭಿಸಿರುವ ವಿಂಡೀಸ್‌ ಸದ್ಯ5 ಓವರ್‌ಗಳ ಮುಕ್ತಾಯಕ್ಕೆ ಒಂದು ವಿಕೆಟ್‌ ಕಳೆದುಕೊಂಡು 57 ರನ್‌ ಕಲೆ ಹಾಕಿದೆ. ಬಾಂಗ್ಲಾದೇಶ ಎದುರಿನ ಸರಣಿಯಲ್ಲಿ ಹ್ಯಾಟ್ರಿಕ್‌ ಸಹಿತದಾಖಲೆಯ 6 ವಿಕೆಟ್‌ ಉರುಳಿಸಿದ್ದ ದೀಪಕ್‌, ಆರಂಭಿಕ ಲೆಂಡ್ಲೆ ಸಿಮನ್ಸ್‌ ವಿಕೆಟ್‌ ಪಡೆದರು.

ADVERTISEMENT

14 ಎಸೆತಗಳಲ್ಲಿ 34 ರನ್‌ ಗಳಸಿರುವ ಎವಿನ್‌ ಲೆವಿಸ್‌ ಹಾಗೂ 12 ಎಸೆತಗಳಲ್ಲಿ 18 ರನ್‌ ಗಳಿಸಿರುವಬ್ರಂಡನ್‌ ಕಿಂಗ್‌ ಕ್ರೀಸ್‌ನಲ್ಲಿದ್ದಾರೆ.

ಉಭಯ ತಂಡಗಳು ಇದುವರೆಗೆ ಒಟ್ಟು 14 ಬಾರಿ ಮುಖಾಮುಖಿಯಾಗಿದ್ದು, ಭಾರತ 8ರಲ್ಲಿ ಗೆಲುವು ಕಂಡಿದೆ. ವಿಂಡೀಸ್‌ 5 ಪಂದ್ಯ ಜಯಿಸಿದ್ದು, ಉಳಿದೊಂದು ಪಂದ್ಯ ಫಲಿತಾಂಶರಹಿತವಾಗಿದೆ. ಇದು ವರ್ಷಾಂತ್ಯದ ಸರಣಿಯಾಗಿರುವುದರಿಂದ ಗೆದ್ದು ಅಭಿಯಾನ ಮುಗಿಸುವ ಉಮೇದಿನಲ್ಲಿ ಎರಡೂ ತಂಡಗಳು ಕಣಕ್ಕಿಳಿದಿವೆ.

ರಿಷಭ್‌ ಪಂತ್‌ಗೆ ಮಹತ್ವದ ಸರಣಿ
ಇತ್ತೀಚೆಗೆ ಮುಕ್ತಾಯವಾದ ಬಾಂಗ್ಲಾದೇಶ ಸರಣಿಯಲ್ಲಿ ಬ್ಯಾಟಿಂಗ್‌ ಹಾಗೂ ವಿಕೆಟ್‌ ಕೀಪಿಂಗ್‌ನಲ್ಲಿ ವೈಫಲ್ಯ ಅನುಭವಿಸಿ ಟೀಕೆಗೆ ಗುರಿಯಾಗಿರುವ ರಿಷಭ್‌ ಪಂತ್‌ಗೆ ಇದು ಮಹತ್ವದ ಸರಣಿ. ಕೇರಳದ ಸಂಜು ಸ್ಯಾಮ್ಸನ್ಈಗಾಗಲೇ ತಂಡ ಕೂಡಿಕೊಂಡಿದ್ದಾರೆ. ಅನುಭವಿ ಮಹೇಂದ್ರಸಿಂಗ್ ಧೋನಿ ಅವರೂ ಜನವರಿಯಲ್ಲಿ ಕ್ರಿಕೆಟ್‌ಗೆ ಮರಳುವ ಸಾಧ್ಯತೆ ಇರುವುದರಿಂದ ತಮ್ಮ ಸಾಮರ್ಥ್ಯ ಸಾಬೀತು ಮಾಡಬೇಕಾದ ಒತ್ತಡ ಪಂತ್‌ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.