ADVERTISEMENT

ಪ್ರಮುಖ ಪಂದ್ಯದಲ್ಲಿ ಭಾರತ–ವಿಂಡೀಸ್ ಮುಖಾಮುಖಿ; ಹೇಗಿರಲಿದೆ ಕೋಲ್ಕತ್ತ ಹವಾಮಾನ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಫೆಬ್ರುವರಿ 2026, 6:08 IST
Last Updated 28 ಫೆಬ್ರುವರಿ 2026, 6:08 IST
<div class="paragraphs"><p>ಭಾರತ vs ವೆಸ್ಟ್ ಇಂಡೀಸ್</p></div>

ಭಾರತ vs ವೆಸ್ಟ್ ಇಂಡೀಸ್

   

ಚಿತ್ರ: @ThePhrasemaker

ಕೋಲ್ಕತ್ತ: ಟಿ20 ವಿಶ್ವಕಪ್ 2025ರ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಮಾರ್ಚ್ 1ರಂದು ಕೋಲ್ಕತ್ತದ ಈಡೆನ್ ಗಾರ್ಡನ್ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಗೆಲ್ಲುವ ತಂಡವು ಸೆಮಿಫೈನಲ್ ಪ್ರವೇಶ ಪಡೆಯಲಿದೆ.

ADVERTISEMENT

ಸೂಪರ್–8ರ ಗ್ರೂಪ್–1ರಲ್ಲಿ ದಕ್ಷಿಣ ಆಫ್ರಿಕಾ ತಂಡವು ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದ್ದರೆ, ಜಿಂಬಾಬ್ವೆ ತಂಡವು ಟೂರ್ನಿಯಿಂದ ಹೊರಬಿದ್ದಿದೆ. ಆದರೆ, ಸೆಮಿಫೈನಲ್ ತಲುಪುವ ಇನ್ನೊಂದು ತಂಡ ಯಾವುದು ಎಂಬುದು ಮಾರ್ಚ್ 1ರಂದು ನಿರ್ಧಾರ ಆಗಲಿದೆ.

ಹೇಗಿರಲಿದೆ ಹವಾಮಾನ?

ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಪಂದ್ಯ ನಡೆಯುವ ಮಾರ್ಚ್ 1ರಂದು ಕೋಲ್ಕತ್ತದ ಈಡನ್ ಗಾರ್ಡನ್ಸ್‌ನಲ್ಲಿ ಬಿಸಿಲು ಮತ್ತು ಸ್ಪಷ್ಟ ಹವಾಮಾನವಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ದಿನವಿಡೀ ತಾಪಮಾನವು 26 ರಿಂದ 31 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇರುತ್ತದೆ. ಮಾತ್ರವಲ್ಲ, ಮಳೆಯ ಮುನ್ಸೂಚನೆ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪಂದ್ಯ ರದ್ದಾದರೆ ಏನಾಗುತ್ತೆ

ಭಾರತ ಮತ್ತು ವೆಸ್ಟ್ ಇಂಡೀಸ್ ಎರಡೂ ತಂಡಗಳು ಸೂಪರ್–8ರಲ್ಲಿ ತಲಾ ಒಂದೊಂದು ಗೆಲುವು ಸಾಧಿಸಿವೆ. ಆದರೆ, ವೆಸ್ಟ್ ಇಂಡೀಸ್‌ಗೆ ಹೋಲಿಸಿದರೆ, ಭಾರತದ ರನ್‌ರೇಟ್ ಕಡಿಮೆ ಇದೆ. ಭಾರತ (–0.100) ನೆಟ್ ರನ್ ರೇಟ್ ಹೊಂದಿದ್ದರೆ, ವೆಸ್ಟ್ ಇಂಡೀಸ್ (1.791) ನೆಟ್ ರನ್ ರೇಟ್ ಹೊಂದಿದೆ.

ಒಂದುವೇಳೆ ಪಂದ್ಯ ರದ್ದಾದರೆ, ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಗುತ್ತದೆ. ಆಗ ರನ್‌ರೇಟ್ ಆಧಾರದ ಮೇಲೆ ವೆಸ್ಟ್ ಇಂಡೀಸ್ ತಂಡವು ಸೆಮಿಫೈನಲ್ ತಲುಪಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.