ADVERTISEMENT

ಐಪಿಎಲ್‌ನಲ್ಲಿ ಸೆಂಚುರಿ ನಂ.3; ಎಬಿ ಡಿ ದಾಖಲೆ ಸರಿಗಟ್ಟಿದ ಸಂಜು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 18:58 IST
Last Updated 12 ಏಪ್ರಿಲ್ 2021, 18:58 IST
ಚಿತ್ರ ಕೃಪೆ: ಐಪಿಎಲ್ ಟ್ವಿಟರ್
ಚಿತ್ರ ಕೃಪೆ: ಐಪಿಎಲ್ ಟ್ವಿಟರ್   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮೂರನೇ ಶತಕ ಸಾಧನೆ ಮಾಡಿರುವ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್, ಅನೇಕ ದಾಖಲೆಗಳನ್ನು ಸ್ಥಾಪಿಸಿದ್ದಾರೆ.

ವಾಂಖೆಡೆಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸಂಜು ಅಮೋಘ ಶತಕ ಸಾಧನೆ ಮಾಡಿದ್ದರು. ಈ ಮೂಲಕ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಬಿ ಡಿ ವಿಲಿಯರ್ಸ್ ದಾಖಲೆಯನ್ನು ಸರಿಗಟ್ಟಿದ್ದಾರೆ.

ನಾಯಕರಾದ ಪದಾರ್ಪಣೆ ಪಂದ್ಯದಲ್ಲಿ ಅದು ಕೂಡಾ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಸಂಜು ಸ್ಯಾಮ್ಸನ್ ಶತಕ ಬಾರಿಸಿ ಅಬ್ಬರಿಸಿದ್ದರು. ಆದರೆ ಅಂತಿಮ ಎಸೆತದಲ್ಲಿ ಔಟ್ ಆಗುವ ಮೂಲಕ ರಾಜಸ್ಥಾನ ತಂಡವು ಸೋಲಿಗೆ ಶರಣಾಗಿತ್ತು.

ADVERTISEMENT

ಈ ಮೂಲಕ ಐಪಿಎಲ್‌ನಲ್ಲಿ ನಾಯಕರಾಗಿ ಪದಾರ್ಪಣೆ ಪಂದ್ಯದಲ್ಲಿ ಶತಕ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೂ ಸಂಜು ಪಾತ್ರವಾಗಿದ್ದಾರೆ.

ಅಂತಿಮವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಸಂಜು ಸ್ಯಾಮ್ಸನ್ ಭಾಜನವಾಗಿದ್ದಾರೆ.

ಐಪಿಎಲ್‌‌ನಲ್ಲಿ ಅತಿ ಹೆಚ್ಚು ಶತಕಗಳ ಸಾಧನೆ:
ಕ್ರಿಸ್ ಗೇಲ್ - 6
ವಿರಾಟ್ ಕೊಹ್ಲಿ - 5
ಶೇನ್ ವಾಟ್ಸನ್/ಡೇವಿಡ್ ವಾರ್ನರ್ - 4
ಎಬಿ ಡಿ ವಿಲಿಯರ್ಸ್, ಸಂಜು ಸ್ಯಾಮ್ಸನ್ - 3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.