ADVERTISEMENT

ಟ್ವೆಂಟಿ-20 ವಿಶ್ವಕಪ್‌‌ಗೂ ದೀಪಕ್ ಚಾಹರ್ ಅಲಭ್ಯ: ವರದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಏಪ್ರಿಲ್ 2022, 14:36 IST
Last Updated 14 ಏಪ್ರಿಲ್ 2022, 14:36 IST
ದೀಪಕ್ ಚಾಹರ್
ದೀಪಕ್ ಚಾಹರ್   

ಚೆನ್ನೈ: ಗಾಯದ ಸಮಸ್ಯೆಯಿಂದ ಬಳಲುತ್ತಿರುವ ದೀಪಕ್ ಚಾಹರ್, ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ಕನಿಷ್ಠ ನಾಲ್ಕು ತಿಂಗಳು ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.

ಇದರಿಂದಾಗಿ ಆಸ್ಟ್ರೇಲಿಯಾದಲ್ಲಿ ಪ್ರಸಕ್ತ ಸಾಲಿನಲ್ಲಿ (ಅಕ್ಟೋಬರ್-ನವೆಂಬರ್) ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ಗೂ ಟೀಮ್ ಇಂಡಿಯಾದ ಆಯ್ಕೆಗೆ ಲಭ್ಯರಾಗುವ ಸಾಧ್ಯತೆಗಳಿಲ್ಲ ಎಂದು ವರದಿಯಾಗಿದೆ.

ದೀಪಕ್ ಚಾಹರ್ ಸ್ಕ್ಯಾನ್ ವರದಿಯಂತೆ ಕನಿಷ್ಠ ನಾಲ್ಕು ತಿಂಗಳ ವಿಶ್ರಾಂತಿ ಬೇಕಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದ ಚಾಹರ್, ಬೌಲಿಂಗ್ ಅಭ್ಯಾಸವನ್ನು ಪುನರಾರಂಭಿಸಿದ್ದರು. ಆದರೆ ಬೆನ್ನಿನ ಗಾಯದ ಕಾರಣ ಐಪಿಎಲ್‌ ಟೂರ್ನಿಗೆ ಅಲಭ್ಯರಾಗಿದ್ದರು.

ಐಪಿಎಲ್‌ನಲ್ಲಿ ದೀಪಕ್ ಚಾಹರ್ ಅವರನ್ನು ₹14 ಕೋಟಿ ನೀಡಿ ಚೆನ್ನೈ ತಂಡವು ಖರೀದಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.