ADVERTISEMENT

IPL 2022: ಲಸಿತ್ ಮಾಲಿಂಗ ದಾಖಲೆ ಸರಿಗಟ್ಟಿದ ಡ್ವೇನ್ ಬ್ರಾವೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಮಾರ್ಚ್ 2022, 11:13 IST
Last Updated 27 ಮಾರ್ಚ್ 2022, 11:13 IST
ಡ್ವೇನ್ ಬ್ರಾವೊ
ಡ್ವೇನ್ ಬ್ರಾವೊ   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್‌ಗಳ ಸಾಲಿನಲ್ಲಿ ಶ್ರೀಲಂಕಾದ ಲಸಿತ್ ಮಾಲಿಂಗ ದಾಖಲೆಯನ್ನು ವೆಸ್ಟ್‌ ಇಂಡೀಸ್‌ನ ಡ್ವೇನ್ ಬ್ರಾವೊ ಸರಿಗಟ್ಟಿದ್ದಾರೆ.

ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ಬ್ರಾವೊ, ತಂಡದ ಅವಿಭಾಜ್ಯ ಅಂಗವಾಗಿದ್ದಾರೆ.

ಐಪಿಎಲ್ 15ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಹಾಲಿ ಚಾಂಪಿಯನ್ ಚೆನ್ನೈ ಸೋಲು ಅನುಭವಿಸಿದರೂ ಅಮೋಘ ಬೌಲಿಂಗ್ ಸಂಘಟಿಸಿದ ಬ್ರಾವೊ ಮೂರು ವಿಕೆಟ್ ಕಬಳಿಸಿ ಮಿಂಚಿದ್ದರು.

ಅಲ್ಲದೆ ತಮ್ಮ ಎಂದಿನ ಶೈಲಿಯಲ್ಲಿ ವಿಕೆಟ್ ಪಡೆದ ಬಳಿಕ ಮೂಲಕ ಡ್ಯಾನ್ಸ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಟಾಪ್ 5 ಬೌಲರ್‌ಗಳ ಪಟ್ಟಿ:
1. ಲಸಿತ್ ಮಾಲಿಂಗ: 170 ವಿಕೆಟ್ (122 ಪಂದ್ಯ)
2. ಡ್ವೇನ್ ಬ್ರಾವೊ: 170 ವಿಕೆಟ್ (151 ಪಂದ್ಯ)
3. ಅಮಿತ್ ಮಿಶ್ರಾ: 166 ವಿಕೆಟ್ (154 ಪಂದ್ಯ)
4. ಪಿಯೂಷ್ ಚಾವ್ಲಾ: 157 ವಿಕೆಟ್ (165 ಪಂದ್ಯ)
5. ಹರಭಜನ್ ಸಿಂಗ್: 150 ವಿಕೆಟ್ (160 ಪಂದ್ಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.