ಮುಂಬೈ: ರಾಹುಲ್ ತ್ರಿಪಾಠಿ ಅಬ್ಬರದ ಬ್ಯಾಟಿಂಗ್ ಮತ್ತು ಉಮ್ರಾನ್ ಮಲಿಕ್ ಪರಿಣಾಮಕಾರಿ ಬೌಲಿಂಗ್‌ನಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಮಂಗಳವಾರ ಮುಂಬೈ ಇಂಡಿಯನ್ಸ್ ಎದುರು ರೋಚಕ ಜಯ ದಾಖಲಿಸಿತು.
ವಾಂಖೆಡೆ ಕ್ರೀಡಾಂಗಣದಲ್ಲಿ 193 ರನ್‌ಗಳ ಗುರಿ ಬೆನ್ನಟ್ಟಿದ್ದ ಮುಂಬೈ ತಂಡವು ದಿಟ್ಟ ಆಟವಾಡಿತು. 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 190 ರನ್ ಗಳಿಸಿ, ಮೂರು ರನ್‌ಗಳಿಂದ ಸೋಲನುಭವಿಸಿತು.
ರೋಹಿತ್ ಶರ್ಮಾ (43; 36ಎ) ಮತ್ತು ಇಶಾನ್ ಕಿಶನ್ (43; 34ಎ) ಮೊದಲ ವಿಕೆಟ್‌ಗೆ 95 ರನ್‌ಗಳನ್ನು ಸೇರಿಸಿ ಗಟ್ಟಿ ಬುನಾದಿ ಹಾಕಿದರು. ತಮ್ಮ ಎರಡನೇ ಸ್ಪೆಲ್‌ನಲ್ಲಿ ಉಮ್ರಾನ್ ಮಲಿಕ್ ಅವರು ಇಶಾನ್ ಕಿಶನ್, ಡೇನಿಯಲ್ ಸ್ಯಾಮ್ಸ್ ಮತ್ತು ತಿಲಕ್ ವರ್ಮಾ ಅವರ ವಿಕೆಟ್ ಕಬಳಿಸಿದರು. ಇದರಿಂದಾಗಿ ಮುಂಬೈ ಗೆಲುವಿನ ಹಾದಿ ಕಠಿಣವಾಯಿತು.ಆದರೆ ಈ ಹಂತದಲ್ಲಿ ಯುವ ಬ್ಯಾಟರ್ ಟಿಮ್ ಡೇವಿಡ್ (46; 18ಎ) ಅವರ ಅಬ್ಬರದ ಬ್ಯಾಟಿಂಗ್‌ನಿಂದಾಗಿ ಮತ್ತೆ ಜಯದ ಆಸೆ ಚಿಗುರಿತು. 255.56ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ ಅವರು ತಂಡವನ್ನು ಬಹುತೇಕ ಗೆಲುವಿನತ್ತ ತೆಎದುಕೊಂಡು ಬಂದರು. ನಾಲ್ಕು ಅಮೋಘ ಸಿಕ್ಸರ್‌ಗಳು ಮತ್ತು ಮೂರು ಬೌಂಡರಿಗಳ ಮೂಲಕ ಬೌಲರ್‌ಗಳಿಗೆ ನಡುಕ ಹುಟ್ಟಿಸಿದರು. ಆದರೆ, 18ನೇ ಓವರ್‌ನ ಕೊನೆಯ ಎಸೆತದಲ್ಲಿ ಅವರು ರನೌಟ್ ಆಗುವುದರೊಂದಿಗೆ ಜಯ ಸನ್‌ರೈಸರ್ಸ್‌ನತ್ತ ಹೊರಳಿತು.
ಆದರೂ ಕೊನೆಯ ಓವರ್‌ನಲ್ಲಿ ಗೆಲುವಿಗೆ ಅಗತ್ಯವಿದ್ದ 19 ರನ್‌ಗಳ ನ್ನು ಗಳಿಸಲು ರಮಣದೀಪ್ ಸಿಂಗ್ (14; 6ಎ) ಮಾಡಿದ ಯತ್ನ ಫಲ ನೀಡಲಿಲ್ಲ. ಒಂದು ಬೌಂಡರಿ, ಒಂದು ಸಿಕ್ಸರ್ ಹೊಡೆದರು. ಒಟ್ಟು 15 ರನ್‌ಗಳು ಮಾತ್ರ ಈ ಓವರ್‌ನಲ್ಲಿ ಲಭಿಸಿದವು. ಮುಂಬೈ ಟೂರ್ನಿಯಲ್ಲಿ 10ನೇ ಸೋಲಿಗೆ ಶರಣಾಯಿತು.
ರಾಹುಲ್ ಬ್ಯಾಟಿಂಗ್:ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಸನ್‌ರೈಸರ್ಸ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 193 ರನ್ ಗಳಿಸಿತು.
ರಾಹುಲ್ ತ್ರಿಪಾಠಿ(76; 44ಎ) ಅರ್ಧಶತಕ ಬಾರಿಸಿದ್ದು ತಂಡವು ಉತ್ತಮ ಮೊತ್ತ ಗಳಿಸಲು ಕಾರಣವಾಯಿತು. ಅವರು ಎರಡನೇ ವಿಕೆಟ್ ಜೊತೆಯಾಟದಲ್ಲಿ ಪ್ರಿಯಂ ಗರ್ಗ್ ಅವರೊಂದಿಗೆ 78 ರನ್‌ಗಳನ್ನು ಸೇರಿಸಿದರು.
ಯುವ ಬ್ಯಾಟರ್ ಪ್ರಿಯಂ 26 ಎಸೆತಗಳಲ್ಲಿ 42 ರನ್ ಗಳಿಸಿದರು. ಹತ್ತನೇ ಓವರ್‌ನಲ್ಲಿ ರಮಣದೀಪ್ ಸಿಂಗ್ ಬೌಲಿಂಗ್‌ನಲ್ಲಿ ಪ್ರಿಯಂ ಔಟಾದರು. ಇದರೊಂದಿಗೆ ಜೊತೆಯಾಟವೂ ಮುರಿದುಬಿತ್ತು.
ಸ್ಕೋರ್:
ಸನ್‌ರೈಸರ್ಸ್ ಹೈದರಾಬಾದ್ 6ಕ್ಕೆ 193 (20 ಓವರ್)
ಅಭಿಷೇಕ್ ಸಿ ಮರ್ಕಂಡೆ ಬಿ ಸ್ಯಾಮ್ಸ್ 9 (10ಎ, 4X1), ಪ್ರಿಯಂ ಸಿ ಮತ್ತು ಬಿ ರಮಣದೀಪ್ 42 (26ಎ, 4X4, 6X2),ತ್ರಿಪಾಠಿ ಸಿ ತಿಲಕ್ ಬಿ ರಮಣದೀಪ್ 76 (44ಎ, 4X9, 6X3), ಪೂರನ್ ಸಿ ಮರ್ಕಂಡೆ ಬಿ ಮೆರಡಿತ್ 38 (22ಎ, 4X2, 6X3), ಮರ್ಕರಂ ಸಿ ಡೇವಿಡ್ ಬಿ ರಮಣದೀಪ್ 2 (4ಎ), ವಿಲಿಯಮ್ಸನ್ ಔಟಾಗದೆ 8 (7ಎ, 4X1), ಸುಂದರ್ ಬಿ ಬೂಮ್ರಾ 9 (7ಎ)
ಇತರೆ: (ಬೈ 4, ವೈಡ್ 5) 9
ವಿಕೆಟ್ ಪತನ: 1–18 (ಅಭಿಷೇಕ್ ಶರ್ಮಾ, 2.4), 2-96 (ಪ್ರಿಯಂ ಗರ್ಗ್, 9.5), 3-172 (ನಿಕೋಲಸ್ ಪೂರನ್, 16.5), 4-174 (ರಾಹುಲ್ ತ್ರಿಪಾಠಿ, 17.2), 5-175 (Aಏಡನ್ ಮರ್ಕರಂ, 17.6), 6-193 (ವಾಷಿಂಗ್ಟನ್ ಸುಂದರ್, 19.6)
ಬೌಲಿಂಗ್: ಡೇನಿಯಲ್ ಸ್ಯಾಮ್ಸ್ 4–0–39–1,ರಿಲಿ ಮೆರಡಿತ್ 4–0–44–1,ಸಂಜಯ್ ಯಾದವ್ 2–0–23–0,ಜಸ್‌ಪ್ರೀತ್ ಬೂಮ್ರಾ 4–0–32–1, ಮಯಂಕ್ ಮರ್ಕಂಡೆ 3–0–31–0, ರಮಣದೀಪ್ ಸಿಂಗ್ 3–0–20–3
ಮುಂಬೈ ಇಂಡಿಯನ್ಸ್ 7ಕ್ಕೆ 190 (20 ಓವರ್)
ರೋಹಿತ್ ಸಿ ಸುಚಿತ್ (ಬದಲಿ) ಬಿ ಸುಂದರ್ 48 (36ಎ, 4X2, 6X4), ಇಶಾನ್ ಸಿ ಪ್ರಿಯಂ ಬಿ ಉಮ್ರಾನ್ 43 (34ಎ, 4X5, 6X1), ಸ್ಯಾಮ್ಸ್ ಸಿ ಪ್ರಿಯಂ ಬಿ ಉಮ್ರಾನ್ 15 (11ಎ, 6X1), ತಿಲಕ್ ಸಿ ವಿಲಿಯಮ್ಸನ್ ಬಿ ಉಮ್ರಾನ್ 8 (9ಎ, 4X1), ಡೇವಿಡ್ ರನೌಟ್ (ನಟರಾಜನ್) 46 (18ಎ, 4X3, 6X4), ಸ್ಟಬ್ಸ್ ರನೌಟ್ (ಭುವನೇಶ್ವರ್) 2 (2ಎ), ರಮಣದೀಪ್ ಔಟಾಗದೆ 14 (6ಎ, 4X1, 6X1),ಸಂಜಯ್ ಸಿ ಸುಚಿತ್ (ಬದಲಿ) ಬಿ ಭುವನೇಶ್ವರ್ 0 (2ಎ), ಬೂಮ್ರಾ ಔಟಾಗದೆ 0 (4ಎ)
ಇತರೆ: (ಬೈ 1, ಲೆಗ್‌ಬೈ 3, ನೋಬಾಲ್ 2, ವೈಡ್ 8) 14
ವಿಕೆಟ್ ಪತನ: 1-95 (ರೋಹಿತ್ ಶರ್ಮಾ, 10.4), 2-101 (ಇಶಾನ್ ಕಿಶನ್, 11.3), 3-123 (ತಿಲಕ್ ವರ್ಮಾ, 14.1), 4-127 (ಡೇನಿಯಲ್ ಸ್ಯಾಮ್ಸ್, 14.6), 5-144 (ತ್ರಿಸ್ಟನ್ ಸ್ಟಬ್ಸ್, 16.4), 6-175 (ಟಿಮ್ ಡೇವಿಡ್, 17.6), 7-175 (ಸಂಜಯ್ ಯಾದವ್, 18.2)
ಬೌಲಿಂಗ್: ಫಜ್ಲಾಕ್ ಫಾರೂಕಿ 4–0–31–0, ಭುವನೇಶ್ವರ್ ಕುಮಾರ್ 4–1–26–1, ವಾಷಿಂಗ್ಟನ್ ಸುಂದರ್ 4–0–36–1, ಟಿ.ನಟರಾಜನ್ 4–0–60–0, ಉಮ್ರಾನ್ ಮಲಿಕ್ 3–0–23–3, ಅಭಿಷೇಕ್ ಶರ್ಮಾ 1–0–10–0
ಹನ್ನೊಂದರ ಬಳಗ
ಮುಂಬೈ ಇಂಡಿಯನ್ಸ್: ಇಶಾನ್ ಕಿಶನ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ (ನಾಯಕ), ತಿಲಕ್ ವರ್ಮಾ, ಟ್ರಿಸ್ಟಾನ್ ಸ್ಟಬ್ಸ್, ಟಿಮ್ ಡೇವಿಡ್, ಡೆನಿಯಲ್ ಸ್ಯಾಮ್ಸ್,ಜಸ್‌ಪ್ರೀತ್ ಬೂಮ್ರಾ, ರಿಲೇ ಮೆರೆಡಿತ್, ಸಂಜಯ್ ಯಾದವ್, ಮಯಾಂಕ್ ಮಾರ್ಕಂಡೆ, ರಮಣ್‌ದೀಪ್ ಸಿಂಗ್
ಸನ್‌ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ಅಭಿಷೇಕ್ ಶರ್ಮಾ, ಏಡನ್ ಮರ್ಕ್ರಂ,ರಾಹುಲ್ ತ್ರಿಪಾಠಿ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಪ್ರಿಯಂ ಗರ್ಗ್,ವಾಷಿಂಗ್ಟನ್ ಸುಂದರ್,ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ.ನಟರಾಜನ್, ಫಜಲ್‌ಹಕ್ ಫಾರೂಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.