ಗುಜರಾತ್ ಟೈಟನ್ಸ್ ತಂಡದ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಕನ್ನಡಿಗ ಕೆ.ಎಲ್.ರಾಹುಲ್, ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ವೇಗವಾಗಿ 8,000 ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡರು. ಈವರೆಗೆ ಈ ದಾಖಲೆ ವಿರಾಟ್ ಕೊಹ್ಲಿ ಅವರ ಹೆಸರಲ್ಲಿತ್ತು.
ಪಂದ್ಯದಲ್ಲಿ ಒಟ್ಟು 65 ಎಸೆತಗಳನ್ನು ಎದುರಿಸಿದ ರಾಹುಲ್, 4 ಸಿಕ್ಸರ್ ಹಾಗೂ 14 ಬೌಂಡರಿ ಸಹಿತ ಒಟ್ಟು 112 ರನ್ ಗಳಿಸಿ ಅಜೇಯವಾಗಿ ಉಳಿದರು. ಇದರೊಂದಿಗೆ, ಈ ಮಾದರಿಯಲ್ಲಿ ಆಡಿದ 224ನೇ ಇನಿಂಗ್ಸ್‌ನಲ್ಲಿ 8 ಸಹಸ್ರ ರನ್‌ಗಳ ಗಡಿ ದಾಟಿದ ಸಾಧನೆ ಮಾಡಿದರು.
ಈ ಪಂದ್ಯಕ್ಕೂ ಮುನ್ನ 236 ಪಂದ್ಯಗಳ 223 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿದ್ದ ರಾಹುಲ್, 7,967 ರನ್ ಗಳಿಸಿದ್ದರು.
ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 8,000 ರನ್ ಗಳಿಸಿದ ಬ್ಯಾಟರ್‌ಗಳು
05. ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ) – 244 ಇನಿಂಗ್ಸ್
04. ವಿರಾಟ್ ಕೊಹ್ಲಿ (ಭಾರತ) – 243 ಇನಿಂಗ್ಸ್
03. ಕೆ.ಎಲ್. ರಾಹುಲ್ (ಭಾರತ) – 224 ಇನಿಂಗ್ಸ್
02. ಬಾಬರ್ ಅಜಂ (ಪಾಕಿಸ್ತಾನ) – 218 ಇನಿಂಗ್ಸ್
01. ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) – 213 ಇನಿಂಗ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.