ADVERTISEMENT

IPL 2025 | ಲೀಗ್ ಹಂತದ ಅರ್ಧದಷ್ಟು ಪಂದ್ಯಗಳು ಮುಕ್ತಾಯ; ತಂಡಗಳ ಸಾಧನೆ ಹೀಗಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಏಪ್ರಿಲ್ 2025, 5:27 IST
Last Updated 20 ಏಪ್ರಿಲ್ 2025, 5:27 IST
<div class="paragraphs"><p>ಐಪಿಎಲ್</p></div>

ಐಪಿಎಲ್

   

ಚಿತ್ರ: IPL ವೆಬ್‌ಸೈಟ್

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟಿ20 ಕ್ರಿಕೆಟ್‌ ಟೂರ್ನಿಯ ಲೀಗ್‌ ಹಂತದ ಅರ್ಧ ಪಂದ್ಯಗಳು ಮುಕ್ತಾಯವಾಗಿವೆ.

ADVERTISEMENT

ಪ್ರತಿ ತಂಡವು ಲೀಗ್‌ ಹಂತದಲ್ಲಿ ತಲಾ 14 ಪಂದ್ಯಗಳನ್ನು ಆಡಲಿದೆ. ಸದ್ಯ ಎಲ್ಲ ತಂಡಗಳು ಕನಿಷ್ಠ ಏಳು ಲೀಗ್‌ ಪಂದ್ಯಗಳನ್ನು ಮುಗಿಸಿವೆ. ಈ ಹಂತದಲ್ಲಿ ಗುಜರಾತ್‌ ಟೈಟನ್ಸ್‌ (ಜಿಟಿ) ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಲೀಗ್‌ ಹಂತದ ಪಂದ್ಯಗಳು ಮೇ 18ರಂದು ಮುಗಿಯಲಿವೆ. ಮೇ 20ರಂದು ಮೊದಲ ಕ್ವಾಲಿಫೈಯರ್‌ ಹಾಗೂ ಮೇ 21 ರಂದು ಎಲಿಮಿನೇಟರ್‌ ಪಂದ್ಯಗಳು ನಡೆಯಲಿವೆ. ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡ ಹಾಗೂ ಎಲಿಮಿನೇಟರ್‌ ಪಂದ್ಯದಲ್ಲಿ ಸೋತವರು ಮೇ 23ರಂದು ಕ್ವಾಲಿಫೈಯರ್ 2ರಲ್ಲಿ ಸೆಣಸಲಿವೆ.

ಫೈನಲ್‌ ಪಂದ್ಯವು ಮೇ 25ರಂದು ಕೋಲ್ಕತ್ತದ ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯಲಿದೆ.

ಲಖನೌ ಸೂಪರ್‌ ಜೈಂಟ್ಸ್‌ ತಂಡದ ನಿಕೋಲಸ್ ಪೂರನ್ ಹೆಚ್ಚು ರನ್‌ ಗಳಿಸಿದವರ (ಆರೆಂಜ್‌ ಕ್ಯಾಪ್‌) ರೇಸ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಗುಜರಾತ್ ಟೈಟನ್ಸ್‌ ಪರ ಆಡುತ್ತಿರುವ ಕನ್ನಡಿಗ ಪ್ರಸಿದ್ಧ ಕೃಷ್ಣ ಹೆಚ್ಚು ವಿಕೆಟ್‌ ಪಡೆದವರ (ಪರ್ಪಲ್‌ ಕ್ಯಾಪ್‌) ಪಟ್ಟಿ ಮುನ್ನಡೆಸುತ್ತಿದ್ದಾರೆ.

ತಂಡಗಳ ಸಾಧನೆ ಹೀಗಿದೆ

ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ಗಳು

ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳು

ಹೆಚ್ಚು ಅರ್ಧಶತಕ ಗಳಿಸಿದವರು

ಹೆಚ್ಚು ಸಿಕ್ಸ್‌ ಸಿಡಿಸಿದವರು

ಹೆಚ್ಚು ಬೌಂಡರಿ ಬಾರಿಸಿದವರು

ಶತಕಗಳು

ಅತ್ಯುತ್ತಮ ಬೌಲಿಂಗ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.