ADVERTISEMENT

IPL 2025 Playoffs: ಆರ್‌ಸಿಬಿ vs ಪಂಜಾಬ್; ಗುಜರಾತ್ vs ಮುಂಬೈ ಹಣಾಹಣಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಮೇ 2025, 2:53 IST
Last Updated 28 ಮೇ 2025, 2:53 IST
<div class="paragraphs"><p>ಜಿತೇಶ್ ಶರ್ಮಾ</p></div>

ಜಿತೇಶ್ ಶರ್ಮಾ

   

(ಪಿಟಿಐ ಚಿತ್ರ)

ಬೆಂಗಳೂರು: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನೊಂದಿಗೆ ಲೀಗ್ ಹಂತದ ಪಂದ್ಯಗಳಿಗೆ ತೆರೆ ಬಿದ್ದಿದೆ.

ADVERTISEMENT

ಇದರೊಂದಿಗೆ ಐಪಿಎಲ್‌ನಲ್ಲಿ ಮತ್ತಷ್ಟು ರೋಚಕತೆ ಮನೆ ಮಾಡಿದ್ದು, ಈ ಬಾರಿ ಯಾವ ತಂಡ ಟ್ರೋಫಿ ಗೆಲ್ಲಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಪ್ಲೇ-ಆಫ್ ಪ್ರವೇಶಿಸಿದ ತಂಡಗಳು:

  • ಪಂಜಾಬ್ ಕಿಂಗ್ಸ್,

  • ರಾಯಲ್ ಚಾಲೆಂಜರ್ಸ್ ಬೆಂಗಳೂರು,

  • ಗುಜರಾತ್ ಟೈಟನ್ಸ್,

  • ಮುಂಬೈ ಇಂಡಿಯನ್ಸ್.

ಈ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಚೊಚ್ಚಲ ಕಿರೀಟದ ಹುಡುಕಾಟದಲ್ಲಿದೆ. ಮುಂಬೈ ಇಂಡಿಯನ್ಸ್ ಐದು ಬಾರಿ ಹಾಗೂ ಗುಜರಾತ್ ಟೈಟನ್ಸ್ ಒಂದು ಸಲ ಟ್ರೋಫಿ ಗೆದ್ದಿದೆ.

ಅಂಕಪಟ್ಟಿ ಇಂತಿದೆ:

ಅಂಕಪಟ್ಟಿಯಲ್ಲಿ ಕ್ರಮವಾಗಿ ಮೊದಲ ಎರಡು ಸ್ಥಾನ ಪಡೆದ ಪಂಜಾಬ್‌ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಇದೇ 29ರಂದು ಚಂಡೀಗಢದಲ್ಲಿ ನಡೆಯುವ ಮೊದಲ ಕ್ವಾಲಿಫೈಯರ್‌ನಲ್ಲಿ ಎದುರಾಗಲಿವೆ.

ಇಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ಗೆ ಪ್ರವೇಶಿಸಲಿದೆ. ಸೋತ ತಂಡ ಎರಡನೇ ಕ್ವಾಲಿಫೈಯರ್‌ನಲ್ಲಿ ಎಲಿಮಿನೇಟರ್ ವಿಜೇತ ತಂಡವನ್ನು ಎದುರಿಸಬೇಕಾಗುತ್ತದೆ.

ಶುಕ್ರವಾರ ಚಂಡೀಗಢದಲ್ಲೇ ನಡೆಯಲಿರುವ ಎಲಿಮಿನೇಟರ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್‌ ಮುಖಾಮುಖಿಯಾಗಲಿವೆ.

ಜೂನ್ 1ರಂದು ಅಹಮದಾಬಾದ್‌ನಲ್ಲಿ ಎರಡನೇ ಕ್ವಾಲಿಫೈಯರ್ ಪಂದ್ಯ ನಿಗದಿಯಾಗಿದೆ. ಜೂನ್ 3ರಂದು ಫೈನಲ್ ಪಂದ್ಯಕ್ಕೆ ಅಹಮದಾಬಾದ್ ವೇದಿಕೆಯಾಗಲಿದೆ.

ವೇಳಾಪಟ್ಟಿ ಇಂತಿದೆ:

ಮೇ 29, ಗುರುವಾರ: ಮೊದಲ ಕ್ವಾಲಿಫೈಯರ್ (ಪಂಜಾಬ್ vs ಬೆಂಗಳೂರು), ಚಂಡೀಗಢ

ಮೇ 30, ಶುಕ್ರವಾರ: ಎಲಿಮಿನೇಟರ್ (ಗುಜರಾತ್ vs ಮುಂಬೈ), ಚಂಡೀಗಢ

ಜೂನ್ 1, ಭಾನುವಾರ: ಎರಡನೇ ಕ್ವಾಲಿಫೈಯರ್ (ಕ್ವಾಲಿಫೈಯರ್ 1 ಸೋತ ತಂಡ vs ಎಲಿಮಿನೇಟರ್ ವಿಜೇತ ತಂಡ), ಅಹಮದಾಬಾದ್

ಜೂನ್ 3, ಮಂಗಳವಾರ: ಫೈನಲ್, ಅಹಮದಾಬಾದ್IPL | RCB vs LSG Highlights: ಜಿತೇಶ್, ಕೊಹ್ಲಿ ಅ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.