ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಹಾಗೂ ವಿರಾಟ್ ಕೊಹ್ಲಿ ಹಾಗೂ 2024ರ ಆವೃತ್ತಿಯ ಚಾಂಪಿಯನ್ ಆದಾಗ ಕೆಕೆಆರ್ ಆಟಗಾರರು ಸಂಭ್ರಮಿಸಿತ್ತಿರುವುದು (ಬಲ)
ಪಿಟಿಐ ಚಿತ್ರಗಳು
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 18ನೇ ಅವೃತ್ತಿಯು ಮಾರ್ಚ್ 22ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮುಖಾಮುಖಿಯಾಗಲಿವೆ.
ಹಾಲಿ ಚಾಂಪಿಯನ್ ತಂಡದ ತವರು ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲೇ ಉದ್ಘಾಟನಾ ಪಂದ್ಯ ಹಾಗೂ ಫೈನಲ್ ಹಣಾಹಣಿ ನಡೆಯಲಿವೆ. ಫೈನಲ್ ಹಣಾಹಣಿಯು ಮೇ 25ರಂದು ನಡೆಯಲಿದೆ.
2024ರ ಆವೃತ್ತಿಯಲ್ಲಿ ಕಪ್ ಗೆದ್ದುಕೊಟ್ಟಿದ್ದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಕೆಕೆಆರ್ ತಂಡದಲ್ಲಿ ಉಳಿಸಿಕೊಂಡಿಲ್ಲ. ಪಂಜಾಬ್ ಕಿಂಗ್ ಫ್ರಾಂಚೈಸ್, ಈ ಬಾರಿಯ ಹರಾಜಿನಲ್ಲಿ ಬರೋಬ್ಬರಿ ₹ 26.75 ಕೋಟಿ ನೀಡಿ ಶ್ರೇಯಸ್ ಅವರನ್ನು ಖರೀದಿಸಿದೆ. ಹೀಗಾಗಿ, ಈ ಸಲ ಕೆಕೆಆರ್ ಪಡೆಯನ್ನು ಮುನ್ನಡೆಸುವವರು ಯಾರು ಎಂಬ ಕುತೂಹಲ ಗರಿಗೆದರಿದೆ.
ಆರ್‌ಸಿಬಿ, ಗುರುವಾರವಷ್ಟೇ ನೂತನ ನಾಯಕನನ್ನು ಘೋಷಿಸಿದೆ. ಬ್ಯಾಟಿಂಗ್‌ನಲ್ಲಿ ಭರವಸೆ ಮೂಡಿಸಿರುವ ರಜತ್ ಪಾಟೀದಾರ್‌ಗೆ 'ಮೊದಲ ಕಪ್' ಗೆದ್ದುಕೊಡುವ ಹೊಣೆ ವಹಿಸಿದೆ.
ತಂಡಗಳು ಹೀಗಿವೆ
ಆರ್‌ಸಿಬಿ: ರಜತ್ ಪಾಟೀದಾರ್ (ನಾಯಕ), ವಿರಾಟ್ ಕೊಹ್ಲಿ, ಯಶ್ ದಯಾಳ್, ಜೋಶ್ ಹ್ಯಾಜಲ್‌ವುಡ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್, ರಸಿಕ್ ಧರ್, ಸುಯಾಷ್ ಶರ್ಮಾ, ಭುವನೇಶ್ವರ್ ಕುಮಾರ್, ಕೃಣಾಲ್ ಪಾಂಡ್ಯ, ಟಿಮ್ ಡೇವಿಡ್, ಜೇಕಬ್ ಬೆಥಲ್, ದೇವದತ್ತ ಪಡಿಕ್ಕಲ್, ನುವಾನ್ ತುಷಾರ, ರೊಮಾರಿಯೊ ಶೆಫರ್ಡ್, ಲುಂಗಿ ಎನ್‌ಗಿಡಿ, ಸ್ವಪ್ನಿಲ್ ಸಿಂಗ್, ಮನೋಜ್ ಭಾಂಡಗೆ, ಸ್ವಿಸ್ತಿಕ್ ಛಿಕಾರ, ಮೋಹಿತ್ ರಾಥೆ, ಅಭಿನಂದನ್ ಸಿಂಗ್
ಕೆಕೆಆರ್: ವೆಂಕಟೇಷ್ ಅಯ್ಯರ್, ಮೋಯೀನ್ ಅಲಿ, ಸುನೀಲ್ ನರೇನ್, ಆ್ಯಂಡ್ರೆ ರಸೆಲ್, ಕ್ವಿಂಟನ್ ಡಿ ಕಾಕ್, ರಹಮನುಲ್ಲಾ ಗುರ್ಬಾಜ್, ಮನೀಷ್ ಪಾಂಡೆ, ಅಜಿಂಕ್ಯ ರಹಾನೆ, ರಿಂಕು ಸಿಂಗ್, ಲುವನಿತ್ ಸಿಸೋಡಿಯಾ, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ಮಯಾಂಕ್ ಮಾರ್ಕಂಡೆ, ವೈಭವ್ ಅರೋರಾ, ಎನ್ರಿಚ್ ನೋಕಿಯೆ, ಉಮ್ರಾನ್ ಮಲಿಕ್, ಸ್ಪೆನ್ಸರ್ ಜಾನ್ಸನ್, ಅಂಗ್‌ಕ್ರಿಷ್ ರಘುವಂಶಿ, ರೋವ್ಮನ್ ಪೊವೆಲ್, ಅನುಕೂಲ್ ರಾಯ್, ರಮಣದೀಪ್ ಸಿಂಗ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.