ಅಭಿಷೇಕ್ ಶರ್ಮಾ ಜೇಬು ಪರಿಶೀಲಿಸಿದ ಸೂರ್ಯಕುಮಾರ್ ಯಾದವ್
ಚಿತ್ರಕೃಪೆ: X
ಐಪಿಎಲ್‌ನಲ್ಲಿ ಐದು ಬಾರಿ ಚಾಂಪಿಯನ್ ಎನಿಸಿರುವ ಮುಂಬೈ ಇಂಡಿಯನ್ಸ್ ಹಾಗೂ ಸ್ಫೋಟಕ ಬ್ಯಾಟರ್‌ಗಳ ದಂಡೇ ಇರುವ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ತಂಡಗಳು ಗುರುವಾರ ರಾತ್ರಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾದವು.
ಈ ಪಂದ್ಯವನ್ನು ಮುಂಬೈ ತಂಡ 6 ವಿಕೆಟ್ ಅಂತರದಿಂದ ಗೆದ್ದುಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಎಸ್‌ಆರ್‌ಎಚ್, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 162 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಆತಿಥೇಯ ತಂಡ ಇನ್ನೂ 11 ಎಸೆತಗಳು ಇರುವಂತೆಯೇ 6 ವಿಕೆಟ್‌ಗೆ 166 ರನ್ ಗಳಿಸಿ, ಜಯದ ನಗೆ ಬೀರಿತು.
ಶರ್ಮಾ ಜೇಬಿಗೆ ಕೈ ಹಾಕಿದ ಸೂರ್ಯ
ಟಾಸ್ ಗೆದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಎದುರಾಳಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಅದರಂತೆ ಬ್ಯಾಟಿಂಗ್ ಮಾಡಲು ಬಂದ ಅಭಿಷೇಕ್ ಶರ್ಮಾ ಅವರ ಜೇಬನ್ನು ಮುಂಬೈನ ಸೂರ್ಯಕುಮಾರ್ ಯಾದವ್ ಪರಿಶೀಲಿಸಿದರು.
ಎಸ್‌ಆರ್‌ಎಚ್ ತಂಡ ಏಪ್ರಿಲ್ 12ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಾಟ ನಡೆಸಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ 6 ವಿಕೆಟ್‌ಗೆ 245 ರನ್ ಕಲೆಹಾಕಿತ್ತು. 246 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಎಸ್‌ಆರ್‌ಎಚ್ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಶರ್ಮಾ, ಕೇವಲ 55 ಎಸೆತಗಳಲ್ಲಿ 141 ರನ್ ಚಚ್ಚಿದ್ದರು. ಅವರ ಆಟದ ಬಲದಿಂದ, ಹೈದರಾಬಾದ್ ತಂಡ ಇನ್ನೂ 9 ಎಸೆತಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಿತ್ತು.
ಶರ್ಮಾ, ಶತಕದ ಮೈಲಿಗಲ್ಲು ತಲುಪುತ್ತಿದ್ದಂತೆಯೇ ತಮ್ಮ ಕಿಸೆಯಲ್ಲಿದ್ದ ಚೀಟಿಯನ್ನು ತೆಗೆದು, ಪ್ರೇಕ್ಷಕರತ್ತ ತೋರುತ್ತಾ ಸಂಭ್ರಮಾಚರಿಸಿದ್ದರು. ಆ ಚೀಟಿಯಲ್ಲಿ, 'ಇದು ಆರೆಂಜ್ ಆರ್ಮಿಗಾಗಿ' (ದಿನ್ ಒನ್ ಫಾರ್ ಆರೇಂಜ್ ಆರ್ಮಿ) ಎಂದು ಬರೆಯಲಾಗಿತ್ತು.
ಅದೇ ಕಾರಣಕ್ಕೆ, ಅಭಿಷೇಕ್ ಶರ್ಮಾ ಅವರ ಜೇಬನ್ನು ಸೂರ್ಯ ಪರಿಶೀಲಿಸಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.